Video: ಸ್ಟೀವ್ ಸ್ಮಿತ್-ಸಂಜು ಸ್ಯಾಮ್ಸನ್ ಸೂಪರ್ ಫೀಲ್ಡಿಂಗ್: ಯಾವುದು ಬೆಸ್ಟ್​?

ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ಕಂಡು ಬಂದ ಈ ಎರಡು ಅದ್ಭುತ ಫೀಲ್ಡಿಂಗ್ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೆಲವರು ಸಂಜು ಸ್ಯಾಮ್ಸನ್​ ಫೀಲ್ಡಿಂಗ್ ಅದ್ಭುತ ಎಂದರೆ ಮತ್ತೆ ಕೆಲವರು ಸ್ಟೀವ್ ಸ್ಮಿತ್ ಸೂಪರ್​ ಅನ್ನುತ್ತಿದ್ದಾರೆ.

sanju samson

sanju samson

  • Share this:
    ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟಿ-20 ಸರಣಿ ಕೊನೆಯಗೊಂಡಿದೆ. ಟೀಮ್ ಇಂಡಿಯಾ 2-1 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಅಂತಿಮ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಮಾಡುವ ಅವಕಾಶ ಪಡೆದಿದ್ದ ಟೀಮ್ ಇಂಡಿಯಾವನ್ನು ಉತ್ತಮ ಫೀಲ್ಡಿಂಗ್ ಹಾಗೂ ಬೌಲರ್​ಗಳ ಸಂಘಟಿತ ಹೋರಾಟದ ನೆರವಿನಿಂದ ಆಸ್ಟ್ರೇಲಿಯಾ ಕಟ್ಟಿ ಹಾಕಿತು.

    ಅದರಲ್ಲೂ 13ನೇ ಓವರ್​ನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಚೆಂಡು ಸಿಕ್ಸರ್ ಆಗುತ್ತಿತ್ತು. ಆದರೆ ಬೌಂಡರಿ ಲೈನ್​ನಲ್ಲಿ ಸ್ಟೀವ್ ಸ್ಮಿತ್ ಸೂಪರ್ ಮ್ಯಾನ್​ನಂತೆ ಗಾಳಿಯಲ್ಲಿ ಎಗರಿ 4 ರನ್​ಗಳನ್ನು ಉಳಿಸಿದ್ದರು. ಈ ಅದ್ಭುತ ಫೀಲ್ಡಿಂಗ್ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದರೊಂದಿಗೆ ಟೀಮ್ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್ ಮಾಡಿದ ಮತ್ತೊಂದು ವಿಡಿಯೋ ಸಹ ವೈರಲ್ ಆಗಿದೆ.



    ಇದೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿತ್ತು. ಪಂದ್ಯದಲ್ಲಿ 14ನೇ ಓವರ್​ನಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಭರ್ಜರಿ ಹೊಡೆತ ಬಾರಿಸಿದ್ದರು. ಇನ್ನೇನು ಚೆಂಡು ಬೌಂಡರಿ ಗೆರೆ ದಾಟಿ ಸಿಕ್ಸರ್ ಆಗಲಿದೆ ಎನ್ನುಷ್ಟರಲ್ಲಿ ಸ್ಯಾಮ್ಸನ್ ಎಂಬ ಸೂಪರ್ ಮ್ಯಾನ್ ಎಂಟ್ರಿ ಕೊಟ್ಟಿದ್ದರು. ರನ್ನಿಂಗ್ ಮೂಲಕ ಗಾಳಿಯಲ್ಲಿ ಜಿಗಿದು ಬೌಂಡರಿ ಲೈನ್ ದಾಟಿದ್ದ ಚೆಂಡನ್ನು ತಡೆದು ಅದ್ಭುತವಾಗಿ 4 ರನ್​ ಉಳಿಸಿದ್ದರು.



    ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ಕಂಡು ಬಂದ ಈ ಎರಡು ಅದ್ಭುತ ಫೀಲ್ಡಿಂಗ್ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೆಲವರು ಸಂಜು ಸ್ಯಾಮ್ಸನ್​ ಫೀಲ್ಡಿಂಗ್ ಅದ್ಭುತ ಎಂದರೆ ಮತ್ತೆ ಕೆಲವರು ಸ್ಟೀವ್ ಸ್ಮಿತ್ ಸೂಪರ್​ ಅನ್ನುತ್ತಿದ್ದಾರೆ.



    ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್​ಮನ್ ಮೇಲೆ ಕಣ್ಣಿಟ್ಟಿದೆ RCB..!
    Published by:zahir
    First published: