ಆಸ್ಟ್ರೇಲಿಯಾದ ಟೆಸ್ಟ್ ಸ್ಪೆಷಲಿಸ್ಟ್ ಸ್ಟೀವ್ ಸ್ಮಿತ್ ಭಾರತದ ವಿರುದ್ಧ 3ನೇ ಟೆಸ್ಟ್ ಪಂದ್ಯದ ವೇಳೆ ಮೋಸದಾಟಕ್ಕೆ ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆಸೀಸ್ ಪಡೆ ನೀಡಿದ ಬೃಹತ್ ಮೊತ್ತವನ್ನು ಭಾರತ ಎಲ್ಲಿ ಬೆನ್ನತ್ತಿ ಬಿಡುತ್ತದೋ ಎಂ ಅಂಜಿಕೆ ಆಸೀಸ್ ಆಟಗಾರರಲ್ಲಿ ಶುರುವಾಗಿತ್ತು. ಇದೇ ವೇಳೆ ಡ್ರಿಂಕ್ಸ್ ಬ್ರೇಕ್ ನೀಡಲಾಗಿತ್ತು. ಈ ಸಂದರ್ಭವನ್ನು ಬಳಸಿಕೊಂಡ ಸ್ಟೀವ್ ಸ್ಮಿತ್ ಕ್ರೀಸ್ಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೆ ರಿಷಭ್ ಪಂತ್ ತಮ್ಮ ಬ್ಯಾಟಿಂಗ್ ಲಯವನ್ನು ಕಾಪಾಡಿಕೊಳ್ಳಲು ಹಾಕಿದ ಗಾರ್ಡ್ ಲೈನ್ (ಸ್ಟ್ರೈಕಿಂಗ್ ಲೈನ್) ಅನ್ನು ಅಳಿಸಿ ಬೇರೆ ಲೈನ್ ಎಳೆಯುವ ಪ್ರಯತ್ನವನ್ನು ಸ್ಮಿತ್ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದಕ್ಕೆ ಸಾಕ್ಷಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಸ್ಟೀವ್ ಸ್ಮಿತ್ ಕ್ರೀಸ್ನಲ್ಲಿ ಗಾರ್ಡ್ ಲೈನ್ ಎಳೆಯುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್, ಸ್ಮಿತ್ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಹಾಸ್ಯಾಸ್ಪದ. ಏಕೆಂದರೆ ಸಿಡ್ನಿ ಪಿಚ್ ಸಿಮೆಂಟ್ನಿಂದ ಮಾಡಿದಂತೆಯಿತ್ತು. ಈಗ ಕೇಳಿ ಬರುತ್ತಿರುವ ಆರೋಪಗಳಂತೆ ಪಿಚ್ ಹಾಳು ಮಾಡಲೊ ಅಥವಾ ಗಾರ್ಡ್ ಅಳಿಸಿಹಾಲು 15 ಇಂಚಿನ ಮೊಳೆ ಬೇಕಾಗುತ್ತಿತ್ತು. ಅಲ್ಲದೆ ಶೂನಲ್ಲಿರುವ ಸಣ್ಣ ಸ್ಪೈಕ್ನಿಂದ ಅದು ಸಾಧ್ಯವಿಲ್ಲ ಎಂದಿದ್ದಾರೆ.
ಸ್ಟೀವ್ ಸ್ಮಿತ್ ಸದಾ ಬ್ಯಾಟಿಂಗ್ ಬಗ್ಗೆಯೇ ಯೋಚಿಸುತ್ತಿರುತ್ತಾರೆ. ಈ ಬಗ್ಗೆ ನಾವೇ ಹಲವು ಬಾರಿ ಆತನನ್ನು ತಮಾಷೆ ಮಾಡಿದ್ದೇವೆ. ಅವರು ಅಲ್ಲಿ ನಿಂತು ಬ್ಯಾಟಿಂಗ್ ಬಗ್ಗೆ ಮಾತ್ರ ಯೋಚಿಸುತ್ತಿದ್ದರು. ಈ ವಿಚಾರದಲ್ಲಿ ಸ್ಮಿತ್ ಶೇ. 100 ರಷ್ಟು ಅಮಾಯಕ. ಇಂತಹ ಅನಗತ್ಯ ವಿಷಯಗಳನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಜಸ್ಟಿನ್ ಲ್ಯಾಂಗರ್ ತಿಳಿಸಿದ್ದಾರೆ.
ಈ ಮೂಲಕ ಸ್ಟೀವ್ ಸ್ಮಿತ್ ನಿರಪರಾಧಿಯಾಗಿದ್ದು, ಸುಖಾಸುಮ್ಮನೆ ಆತನ ವಿರುದ್ಧ ಆರೋಪಗಳನ್ನು ಮಾಡಬೇಡಿ. ಆತ ಯಾವುದೇ ತಪ್ಪು ಮಾಡಿಲ್ಲ. ಇಂತಹ ಅನಗತ್ಯ ವಿಚಾರಗಳು ನನ್ನ ಜೀವನದಲ್ಲೇ ನೋಡಿಲ್ಲ ಎಂದು ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಸ್ಮಿತ್ ಬೆಂಬಲಕ್ಕೆ ನಿಂತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ