ಸಿಡ್ನಿ ಟೆಸ್ಟ್​ 2008: ಅಂದು ಭಾರತ ಸೋಲಲು ನಾನೇ ಕಾರಣ ಎಂದು ಒಪ್ಪೊಕೊಂಡ ಅಂಪೈರ್‌ ಬಕ್ನರ್

12 ವರ್ಷಗಳ ಬಳಿಕ ತಾವು ಮಾಡಿದ್ದ ಎರಡು ತಪ್ಪುಗಳನ್ನು ಒಪ್ಪಿಕೊಂಡಿರುವ ಬಕ್ನರ್​ ನನ್ನ ಆ ಎರಡು ತಪ್ಪುಗಳಿಂದ ಭಾರತ ಸೋಲುವಂತಾಯಿತು ಎಂದಿದ್ದಾರೆ.

news18-kannada
Updated:July 20, 2020, 3:25 PM IST
ಸಿಡ್ನಿ ಟೆಸ್ಟ್​ 2008: ಅಂದು ಭಾರತ ಸೋಲಲು ನಾನೇ ಕಾರಣ ಎಂದು ಒಪ್ಪೊಕೊಂಡ ಅಂಪೈರ್‌ ಬಕ್ನರ್
ಸ್ಟೀವ್‌ ಬಕ್ನರ್
  • Share this:
2008ರ ಸಿಡ್ನಿ ಟೆಸ್ಟ್ ಕ್ರಿಕೆಟ್ ಇತಿಹಾಸದ ಅತ್ಯಂತ ವಿವಾದಾತ್ಮಕ ಪಂದ್ಯಗಳಲ್ಲಿ ಒಂದು. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಆ ಪಂದ್ಯದಲ್ಲಿ ಮಂಕಿಗೇಟ್ ಪ್ರಕರಣ ಅಲ್ಲೋಲಕಲ್ಲೋಲ ಮಾಡಿತ್ತು. ಆಸ್ಟ್ರೇಲಿಯಾ ಆಟಗಾರ ಆಂಡ್ರೋ ಸೈಮಂಡ್ಸ್ ಬಗ್ಗೆ ಟೀಂ ಇಂಡಿಯಾ ಆಟಗಾರ ಹರ್ಭಜನ್ ಸಿಂಗ್ ಜನಾಂಗೀಯ ನಿಂದನೆಯಿಂದ ದೊಡ್ಡ ಸುದ್ದಿಯಾಗಿದ್ದ ಪಂದ್ಯವದು. ಅಂದಹಾಗೆ ಆ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಆನ್‌ಫೀಲ್ಡ್‌ ಅಂಪೈರ್‌ ಸ್ಟೀವ್‌ ಬಕ್ನರ್‌ ನೀಡಿದ ಕೆಲ ತಪ್ಪು ನಿರ್ಧಾರಗಳು ಮುಖ್ಯ ಪಾತ್ರ ವಹಿಸಿದ್ದವು.

ಸದ್ಯ ಇದೀಗ 12 ವರ್ಷಗಳ ಬಳಿಕ ಆ ಪಂದ್ಯದಲ್ಲಿ ತಾವು ಎರಡು ತಪ್ಪುಗಳನ್ನು ಮಾಡಿದ್ದಾಗಿ ಸ್ಟೀವ್‌ ಬಕ್ನರ್‌ ಒಪ್ಪಿಕೊಂಡಿದ್ದಾರೆ. 2008 ರಲ್ಲಿ ನಡೆದ ಆ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನಾಟಕೀಯ ರೀತಿಯಲ್ಲಿ ಐದನೇ ದಿನದಂದು ಜಯ ದಾಖಲಿಸಿತ್ತು. ಇದಕ್ಕೆ ತಮ್ಮಿಂದ ಹೊರಬಂದ ಎರಡು ತಪ್ಪು ನಿರ್ಧಾರಗಳು ಕಾರಣ ಎಂದು ಬಕ್ನರ್‌ ಇದೀಗ ಬಾಯ್ಬಿಟ್ಟಿದ್ದಾರೆ.

Parthiv Patel: ಧೋನಿ ಎಲ್ಲ ಟ್ರೋಫಿ ಗೆದ್ದಿರಬಹುದು, ಆದ್ರೆ ಕಷ್ಟ ಕಾಲದಲ್ಲಿ ತಂಡ ಕಟ್ಟಿದ್ದು ದಾದಾ: ಪಾರ್ಥಿವ್ ಪಟೇಲ್

"ನಾನು 2008ರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಎರಡು ತಪ್ಪುಗಳನ್ನು ಮಾಡಿದ್ದೆ. ಮೊದಲನೆಯದು ಭಾರತ ಪಂದ್ಯವನ್ನು ಉತ್ತಮವಾಗಿ ಆಡುತ್ತಿದ್ದಾಗ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗೆ ಶತಕಗಳಿಸಲು ಅವಕಾಶ ನೀಡಿದ್ದೆ" ಎಂದಿದ್ದಾರೆ.

"ನನ್ನಿಂದಾದ ಎರಡನೇಯ ತಪ್ಪು ಐದನೇಯ ದಿನ. ಇದು ಪಂದ್ಯದಲ್ಲಿ ಭಾರತಕ್ಕೆ ದುಬಾರಿಯಾಯಿತು. ಆದರೂ ಕೂಡ ಈ ಎರಡು ತಪ್ಪುಗಳು ನನ್ನಿಂದ ನಡೆದಿತ್ತು. ಆದರೆ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ಆಗಿ ಎರಡು ತಪ್ಪುಗಳನ್ನು ಮಾಡಿದ್ದು ನಾನು ಒಬ್ಬನೇನಾ?. ಆದರೂ ಈ ಎರಡು ತಪ್ಪುಗಳು ನನ್ನನ್ನು ಕಾಡುತ್ತದೆ" ಎಂದು ಹೇಳಿದ್ದಾರೆ.

2008ರ ಆಸೀಸ್ ಪ್ರವಾಸದಲ್ಲಿ ಮೊದಲ ಟೆಸ್ಟ್​ನಲ್ಲಿ ಸೋತಿದ್ದ ಅನಿಲ್​ ಕುಂಬ್ಳೆ ನೇತೃತ್ವದ ಭಾರತ ತಂಡ, ಎರಡನೇ ಟೆಸ್ಟ್​ನಲ್ಲಿ ಉತ್ತಮವಾಗಿ ತಿರುಗಿ ಬಿದ್ದಿತ್ತು. ಮೊದಲು ಬ್ಯಾಟಿಂಗ್​ ಆರಂಭಿಸಿದ ಆಸ್ಟ್ರೇಲಿಯಾ ತಂಡ 134 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡಿತ್ತು. ಈ ವೇಳೆ ಆ್ಯಂಡ್ರ್ಯೂ ಸೈಮಂಡ್ಸ್​ ಸ್ಟಂಪ್​ ಔಟ್​ ಆಗುವುದನ್ನ ಬಕ್ನರ್​ ತಪ್ಪಿಸಿದ್ದರು. ಬಳಿಕ ಆ ಪಂದ್ಯದಲ್ಲಿ ಸೈಮಂಡ್ಸ್​ 162 ರನ್​ಗಳಿಸಿದರು. ಆಸ್ಟ್ರೇಲಿಯಾ 463 ರನ್​ಗಳ ಮೊತ್ತ ದಾಖಲಿಸಿತು.

ಆದರೂ ಭಾರತ ತಂಡ ಎರಡನೇ ಇನ್ನಿಂಗ್ಸ್​ನಲ್ಲಿ ಸಚಿನ್​(154), ಲಕ್ಷ್ಮಣ್​(109) ಹಾಗೂ ಹರ್ಭಜನ್​ ಸಿಂಗ್​(63) ರನ್​ಗಳ ಸಹಾಯದಿಂದ 532 ರನ್​ಗಳಿಸಿ 69 ರನ್​ಗಳ ಮುನ್ನಡೆ ಸಾಧಿಸಿತ್ತು. ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್​ನಲ್ಲಿ 401ರನ್​ಗಳಿಗೆ ಡಿಕ್ಲೇರ್​ ಘೋಷಿಸಿ ಭಾರತಕ್ಕೆ 333ರನ್​ಗಳ ಗುರಿ ನೀಡಿತ್ತು.T20 World Cup: ಐಸಿಸಿ ಟಿ-20 ವಿಶ್ವಕಪ್ ಭವಿಷ್ಯ ಇಂದು ನಿರ್ಧಾರ: ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ವಿಶೇಷ ಸಭೆ

5ನೇ ಅಂತಿಮ ದಿನ ಭಾರತ ಆರಂಭಿಕ ಆಘಾತ ಅನುಭವಿಸಿದರೂ ದ್ರಾವಿಡ್​ 38 ರನ್​ಗಳಿಸಿ ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯತ್ತಿದ್ದರು. ಸೈಮಂಡ್ಸ್​ ಬೌಲಿಂಗ್​​ನಲ್ಲಿ ದ್ರಾವಿಡ್​ ಅವರ ಪ್ಯಾಡ್​ಗೆ ಬಿದ್ದ ಚೆಂಡನ್ನು ಗಿಲ್​​​​ಕ್ರಿಸ್ಟ್​​​ ಪಡೆದು ಕ್ಯಾಚ್​ ಎಂದು ಅಫೀಲ್​ ಮಾಡಿದರು. ಇದನ್ನು ಸ್ಟಿವ್ ಬಕ್ನರ್​ ಔಟ್​ ಎಂದು ತೀರ್ಪು ನೀಡಿದ್ದರು.

ಈ ಪಂದ್ಯವನ್ನು ಆಸ್ಟ್ರೇಲಿಯಾ 122 ರನ್​ಗಳಿಂದ ಗೆದ್ದುಕೊಂಡಿತು. ಒಂದು ವೇಳೆ ದ್ರಾವಿಡ್​ ವಿರುದ್ಧ ಬಕ್ನರ್​ ತೀರ್ಪು ನೀಡಿರದಿದ್ದರೆ ಆ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಅವಕಾಶ ಕೂಡ ಇತ್ತು. ಇದೀಗ 12 ವರ್ಷಗಳ ಬಳಿಕ ತಾವು ಮಾಡಿದ್ದ ಎರಡು ತಪ್ಪುಗಳನ್ನು ಒಪ್ಪಿಕೊಂಡಿರುವ ಬಕ್ನರ್​ ನನ್ನ ಆ ಎರಡು ತಪ್ಪುಗಳಿಂದ ಭಾರತ ಸೋಲುವಂತಾಯಿತು ಎಂದಿದ್ದಾರೆ.

ಆ ಪಂದ್ಯದ ನಂತರ ಬಕ್ನರ್​ರನ್ನು ಐಸಿಸಿ ಅಂಪೈರ್​ ಹುದ್ದೆಯಿಂದ ಅಮಾನತು ಮಾಡಲಾಯಿತು.
Published by: Vinay Bhat
First published: July 20, 2020, 3:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading