IND vs PAK Match- ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯ

T20 World Cup, India vs Pakistan Match New TV Record- ಭಾರತ ಮತ್ತು ಪಾಕಿಸ್ತಾನ್ ನಡುವಿನ ಟಿ20 ವಿಶ್ವಕಪ್ ಪಂದ್ಯವನ್ನ 16.7 ಕೋಟಿ ಜನರು ವೀಕ್ಷಿಸಿದ್ಧಾರೆ. ಇದು ಯಾವುದೇ ಅಂತರರಾಷ್ಟ್ರೀಯ ಟಿ20 ಪಂದ್ಯಕ್ಕೆ ಸಿಕ್ಕ ಅತಿ ಹೆಚ್ಚು ವೀಕ್ಷಕರು.

ಭಾರತ ಮತ್ತು ಪಾಕಿಸ್ತಾನ್ ನಡುವಿನ ಪಂದ್ಯದ ಒಂದು ದೃಶ್ಯ

ಭಾರತ ಮತ್ತು ಪಾಕಿಸ್ತಾನ್ ನಡುವಿನ ಪಂದ್ಯದ ಒಂದು ದೃಶ್ಯ

 • Share this:
  ನವದೆಹಲಿ, ನ. 9: ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ (India vs Pakistan T20 World Cup 2021 Match) ಬಹಳ ನಿರೀಕ್ಷೆ ಹುಟ್ಟಿಸಿತ್ತು. ಇದು ಟಿವಿ ವೀಕ್ಷಣೆಯಲ್ಲೂ ಹೊಸ ದಾಖಲೆ ಬರೆದಿದೆ. ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ವೀಕ್ಷಕರನ್ನ ಕಂಡ ಪಂದ್ಯ ಎಂಬ ದಾಖಲೆ ಸ್ಥಾಪಿಸಿದೆ. ಸ್ಟಾರ್ ಇಂಡಿಯಾ ಸಂಸ್ಥೆ ಬಿಡುಗಡೆ ಅಂಕಿ ಅಂಶದ ಪ್ರಕಾರ ಅ. 24ರಂದು ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನ 16.7 ಕೋಟಿ ಜನರು ವೀಕ್ಷಿಸಿದ್ದಾರೆ (167 Millions viewed India Pak match). ಯಾವುದೇ ಟಿ20 ಪಂದ್ಯವನ್ನು ಇಷ್ಟು ಮಂದಿ ಟಿವಿಯಲ್ಲಿ ವೀಕ್ಷಿಸಿದ್ದು ಇದೇ ಮೊದಲು.

  ಸ್ಟಾರ್ ಇಂಡಿಯಾ ಬಿಡುಗಡೆ ಮಾಡಿದ ಅಂಶ ಅಂಶಗಳು ಟಿ20 ವಿಶ್ವಕಪ್​ನ ಕ್ವಾಲಿಫಯರ್ ಹಂತದ ಎಲ್ಲಾ ಪಂದ್ಯಗಳು ಹಾಗೂ ಸೂಪರ್ 12 ಹಂತದ ಮೊದಲ 12 ಪಂದ್ಯಗಳನ್ನ ಒಳಗೊಂಡಿವೆ. ಇಷ್ಟೂ ಪಂದ್ಯಗಳನ್ನ ಒಟ್ಟು 23.8 ಕೋಟಿ ಜನರು ವೀಕ್ಷಿಸಿದ್ದಾರೆ. ಅದರಲ್ಲಿ ಭಾರತ ಮತ್ತು ಪಾಕ್ ಪಂದ್ಯವೊಂದೇ 16 ಕೋಟಿಗೂ ಹೆಚ್ಚು ಮಂದಿ ವೀಕ್ಷಕರನ್ನ ಸೆಳೆದಿರುವುದು ಗಮನಾರ್ಹ.

  ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ಕ್ರಿಕೆಟ್ ಪಂದ್ಯ ನಡೆದರೂ ಅಪಾರ ವೀಕ್ಷಕರು ಮುಗಿಬೀಳುವುದು ಸಹಜ. ಈ ಬಾರಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಈ ಪಂದ್ಯವನ್ನ ವೀಕ್ಷಿಸಿರುವುದು ಸ್ಪಷ್ಟವಾಗಿದೆ.

  ಭಾರತ-ವಿಂಡೀಸ್ ಪಂದ್ಯದ ದಾಖಲೆ:

  2016 ಟಿ20 ವಿಶ್ವಕಪ್ ಸೆಮಿಫೈನಲ್​ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಪಂದ್ಯವನ್ನು 13.6 ಕೋಟಿ ಜನರು ವೀಕ್ಷಿಸಿದ್ದು. ಇದೂವರೆಗೂ ಅದೇ ದಾಖಲೆಯಾಗಿ ಉಳಿದುಕೊಂಡಿತ್ತು. ಈಗ ಭಾರತ ಪಾಕಿಸ್ತಾನ್ ಪಂದ್ಯ ಆ ದಾಖಲೆಯನ್ನ ಬದಿಗೊತ್ತಿದೆ.

  ಇದನ್ನೂ ಓದಿ: IND vs NAM- ಹ್ಯಾಟ್ರಿಕ್ ಗೆಲುವಿನ ಸಿಹಿಯೊಂದಿಗೆ ಟಿ20 ವಿಶ್ವಕಪ್ ಮುಗಿಸಿದ ಟೀಮ್ ಇಂಡಿಯಾ

  “ಅಕ್ಟೋಬರ್ 24ರಂದು ಭಾರತ ಮತ್ತು ಪಾಕಿಸ್ತಾನ್ ಪಂದ್ಯ ನಡೆಯಿತು. ಎರಡು ವರ್ಷಗಳ ಬಳಿಕ ಐಸಿಸಿ ಟೂರ್ನಿಯೊಂದರಲ್ಲಿ ಈ ಎರಡು ತಂಡಗಳು ಸಂಧಿಸಿದ್ದವು. ಈ ಬಹುನಿರೀಕ್ಷಿತ ಪಂದ್ಯವನ್ನ 167 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಇದು ಅಂತರರಾಷ್ಟ್ರೀಯ ಟಿ20 ಪಂದ್ಯವೊಂದನ್ನ ಅತಿ ಹೆಚ್ಚು ಜನರು ವೀಕ್ಷಿಸಿದ ದಾಖಲೆಗೆ ಬಾಜನವಾಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2016ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದ ದಾಖಲೆಯನ್ನೂ ಇದು ಮುರಿದಿದೆ” ಎಂದು ಸ್ಟಾರ್ ಇಂಡಿಯಾ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.

  ಸ್ಟಾರ್ ಇಂಡಿಯಾ ಹಿಗ್ಗು:

  “ಕ್ರಿಕೆಟ್​ಗೆ ವೀಕ್ಷಕರನ್ನ ಸೆಳೆಯಲು ನಾವು ಸತತವಾಗಿ ಶ್ರಮಿಸಿದ್ದೇವೆ. ದೊಡ್ಡ ಮಟ್ಟದಲ್ಲಿ ಪ್ರಚಾರ, ಗುಣಮಟ್ಟದ ಕಾರ್ಯಕ್ರಮಗಳ ಪ್ರಸ್ತುತಿ, ಪ್ರಾದೇಶಿಕ ಭಾಷೆಯಲ್ಲಿ ಕಾರ್ಯಕ್ರಮ ಮೊದಲಾದ ರೀತಿಯಲ್ಲಿ ನಾವು ಹಾಕಿದ ಪ್ರಯತ್ನಕ್ಕೆ ಈ ದಾಖಲೆ ವೀಕ್ಷಣೆ ಸಾಕ್ಷಿಯಾಗಿದೆ” ಎಂದು ಸ್ಟಾರ್ ಸ್ಪೋಟ್ಸ್ ಹೇಳಿದೆ.

  ಇದನ್ನೂ ಓದಿ: Shoaib Akhtar- ನಾನು ಹೋರಾಟಗಾರ, ಸೋಲಲ್ಲ: ಪಾಕ್ ಚಾನಲ್​ನ ಮಾನನಷ್ಟ ಮೊಕದ್ದಮೆಗೆ ಅಖ್ತರ್ ಪ್ರತಿಕ್ರಿಯೆ

  ಭಾರತ ಮತ್ತು ಪಾಕಿಸ್ತಾನ ಪಂದ್ಯದ ಫಲಿತಾಂಶ ಹಾಗೂ ವಿಶ್ವಕಪ್​ನಿಂದ ಭಾರತ ನಾಕೌಟ್ ಹಂತ ಪ್ರವೇಶಿಸುವ ಮುನ್ನವೇ ಹೊರಬಿದ್ದದ್ದು ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ ಆಗಿರುವುದು ಹೌದು. ಆದರೆ, ಆ ಪಂದ್ಯಕ್ಕೆ ಸಿಕ್ಕ ವೀಕ್ಷಕರ ಸಂಖ್ಯೆಯು ಕ್ರಿಕೆಟ್​ನ ಶಕ್ತಿಯ ಪ್ರತಿಬಿಂಬವಾಗಿದೆ ಎಂದು ಸ್ಟಾರ್ ಇಂಡಿಯಾ ವಕ್ತಾರರು ಅಭಿಪ್ರಾಯಪಟ್ಟಿದ್ಧಾರೆ.

  ಎರಡು ಸೋಲು ಭಾರತಕ್ಕೆ ಮುಳು:

  ಅಕ್ಟೋಬರ್ 24ರಂದು ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ್ 10 ವಿಕೆಟ್​ಗಳಿಂದ ಜಯಭೇರಿ ಭಾರಿಸಿತು. ಟಿ20 ವಿಶ್ವಕಪ್ ಆಗಲೀ 50 ಓವರ್ ಪಂದ್ಯಗಳ ವಿಶ್ವಕಪ್ ಆಗಲೀ ಭಾರತದ ವಿರುದ್ಧ ಪಾಕಿಸ್ತಾನ ಗಳಿಸಿದ ಮೊದಲ ಗೆಲುವು ಅದಾಗಿತ್ತು. ಅದಕ್ಕೂ ಮುನ್ನ ಈ ಎರಡು ತಂಡಗಳು ಪರಸ್ಪರ ಹಣಾಹಣಿ ನಡೆಸಿದ ಪಂದ್ಯಗಳಲ್ಲಿ ಭಾರತ 12 ಬಾರಿ ಜಯಿಸಿದ್ದರೆ ಪಾಕಿಸ್ತಾನಕ್ಕೆ ಒಂದೂ ಗೆಲುವು ಸಿಕ್ಕಿರಲಿಲ್ಲ. ಈ ಬಾರಿ ಮಾತ್ರ ಪಾಕಿಸ್ತಾನಕ್ಕೆ ಗೆಲುವಿನ ನಗೆ ಬೀರುವ ಅವಕಾಶ ಸಿಕ್ಕಿತು.

  ದುರದೃಷ್ಟವಶಾತ್, ಪಾಕಿಸ್ತಾನ್ ವಿರುದ್ಧದ ಸೋಲಿನ ಬಳಿಕ ಭಾರತ ತನ್ನ ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರೂ ಸೋತಿತು. ಈ ಎರಡು ಸೋಲುಗಳು ಭಾರತಕ್ಕೆ ನಾಕೌಟ್ ಪ್ರವೇಶದ ಬಾಗಿಲು ಮುಚ್ಚಿದ್ದವು. ಉಳಿದ ಮೂರೂ ಪಂದ್ಯಗಳನ್ನ ಭಾರತ ಗೆದ್ದರೂ ಸೆಮಿಫೈನಲ್ ಪ್ರವೇಶಿಸಲು ಸಾಧ್ಯವಾಗಲಿಲ್ಲ.
  Published by:Vijayasarthy SN
  First published: