India vs Sri Lanka 2021: ಟೀಮ್ ಇಂಡಿಯಾ ವಿರುದ್ದದ ಸರಣಿಗೂ ಮುನ್ನ ಶ್ರೀಲಂಕಾಗೆ ಆಘಾತ..!

ಭಾರತ, ಶ್ರೀಲಂಕಾ ಸರಣಿ ವೇಳಾಪಟ್ಟಿ ಹೀಗಿದೆ: ಜುಲೈ 13, 16 ಹಾಗೂ 18ರಂದು 3 ಏಕದಿನ ಪಂದ್ಯಗಳು ನಡೆಯಲಿದೆ. ಹಾಗೆಯೇ ಜುಲೈ 21, 23 ಹಾಗೂ 25ರಂದು 3 ಟಿ20 ಪಂದ್ಯಗಳು ಜರುಗಲಿವೆ.

India vs Sri lanka

India vs Sri lanka

 • Share this:
  ಭಾರತ-ಶ್ರೀಲಂಕಾ ನಡುವಣ ಸೀಮಿತ ಓವರ್​ಗಳ ಸರಣಿಗೆ ದಿನಗಣನೆ ಶುರುವಾಗಿದೆ. ಸರಣಿ ಆರಂಭಕ್ಕೆ ಕೇವಲ 2 ದಿನಗಳಿರುವಾಗ ಅತ್ತ ಶ್ರೀಲಂಕಾ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಕೊರೋನಾ ಪಾಸಿಟಿವ್ ಆಗಿದ್ದಾರೆ. ಈ ವರದಿ ಬೆನ್ನಲ್ಲೇ ಇದೀಗ ಶ್ರೀಲಂಕಾ ತಂಡದ ಡೇಟಾ ಅನಾಲಿಸ್ಟ್ ಜಿ.ಟಿ ನಿರೋಶನ್ ಅವರಲ್ಲೂ ಕೂಡ ಸೋಂಕಿನ ಲಕ್ಷ್ಮಣಗಳು ಕಂಡು ಬಂದಿವೆ.

  ಇದಾಗ್ಯೂ ಇಂಗ್ಲೆಂಡ್‌ ಸರಣಿ ಮುಗಿಸಿ ಹಿಂದಿರುಗಿದ ಶ್ರೀಲಂಕಾದ ಎಲ್ಲಾ ಆಟಗಾರರ ಕೊರೋನಾ ಮೊದಲ ಟೆಸ್ಟ್ ಫಲಿತಾಂಶ ನೆಗೆಟಿವ್ ಬಂದಿತ್ತು. ಇದೀಗ ತಂಡದ ಬ್ಯಾಟಿಂಗ್ ಕೋಚ್ ಹಾಗೂ ಸಿಬ್ಬಂದಿಯಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿರುವುದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಆತಂಕ ಹೆಚ್ಚಿಸಿದೆ. ಸದ್ಯ ಎಲ್ಲಾ ಆಟಗಾರರು ಕ್ವಾರಂಟೈನ್​ನಲ್ಲಿದ್ದು, ಆಟಗಾರರನ್ನು ಮತ್ತೊಮ್ಮೆ ಕೊರೋನಾ ಟೆಸ್ಟ್​ಗೆ ಒಳಪಡಿಸುವ ಸಾಧ್ಯತೆಯಿದೆ.

  ಇನ್ನು ಆಟಗಾರರಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದರೆ ಬದಲಿ ತಂಡವನ್ನು ಘೋಷಿಸಬಹುದು. ಏಕೆಂದರೆ ಇತ್ತೀಚೆಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮೂವರು ಆಟಗಾರರು ಹಾಗೂ ನಾಲ್ವರು ಸಿಬ್ಬಂದಿಗಳಲ್ಲಿ ಸೋಂಕಿ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು. ಅಲ್ಲದೆ ಪಾಕಿಸ್ತಾನದ ವಿರುದ್ದ ಹೊಸ ತಂಡವನ್ನು ಇಂಗ್ಲೆಂಡ್ ಕಣಕ್ಕಿಳಿಸಿತ್ತು.

  ಇದೀಗ ಇದೇ ಆತಂಕ ಶ್ರೀಲಂಕಾ ಕ್ರಿಕೆಟ್ ಮಂಡಳಿಗೂ ಎದುರಾಗಿದ್ದು, ಒಂದು ವೇಳೆ ಭಾರತದ ವಿರುದ್ದ ಸರಣಿ ರದ್ದಾದರೆ ಭಾರೀ ನಷ್ಟ ಅನುಭವಿಸಲಿದೆ. ಹೀಗಾಗಿ ಪ್ರಸ್ತುತ ತಂಡದಲ್ಲಿರುವ ಆಟಗಾರರಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದರೆ ಬದಲಿ ಆಟಗಾರರ ತಂಡವನ್ನು ರೂಪಿಸಿ ಸರಣಿಯನ್ನು ಮುಂದುವರೆಸುವ ಸಾಧ್ಯತೆ ಹೆಚ್ಚು.

  ಭಾರತ, ಶ್ರೀಲಂಕಾ ಸರಣಿ ವೇಳಾಪಟ್ಟಿ ಹೀಗಿದೆ. ಜುಲೈ 13, 16 ಹಾಗೂ 18ರಂದು 3 ಏಕದಿನ ಪಂದ್ಯಗಳು ನಡೆಯಲಿದೆ. ಹಾಗೆಯೇ ಜುಲೈ 21, 23 ಹಾಗೂ 25ರಂದು 3 ಟಿ20 ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು ಸೋನಿ ಸ್ಪೋರ್ಟ್ಸ್ ಇಂಡಿಯಾ ಪಡೆದುಕೊಂಡಿದ್ದು ಸೋನಿ ಟೆನ್ 1, ಸೋನಿ ಟೆನ್ 3, ಸೋನಿ ಟೆನ್ 4 ಹಾಗೂ ಸೋನಿ ಸಿಕ್ಸ್‌ ಚಾನೆಲ್‌ಗಳಲ್ಲಿ ಪಂದ್ಯಗಳ ನೇರಪ್ರಸಾರವನ್ನು ವೀಕ್ಷಿಸಬಹುದು.  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:zahir
  First published: