ವನಿತೆಯರ ಕ್ರಿಕೆಟ್​ನಲ್ಲಿ ವಿಶ್ವದಾಖಲೆ; ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕಿಯಿಂದ ನೂತನ ಸಾಧನೆ!

ಚಾಮರಿ ಅಟಪಟ್ಟು ಭರ್ಜರಿ ಶತಕದ ಹೊರತಾಗಿಯು ಶ್ರೀಲಂಕಾ ಸೋಲುಂಡಿತು. ಸದ್ಯ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಶ್ರೀಲಂಕಾ 0-1ರ ಹಿನ್ನಡೆಯಲ್ಲಿದೆ.

Vinay Bhat | news18-kannada
Updated:September 30, 2019, 9:03 AM IST
ವನಿತೆಯರ ಕ್ರಿಕೆಟ್​ನಲ್ಲಿ ವಿಶ್ವದಾಖಲೆ; ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕಿಯಿಂದ ನೂತನ ಸಾಧನೆ!
ಚಾಮರಿ ಅಟಪಟ್ಟು
  • Share this:
ಬೆಂಗಳೂರು (ಸೆ. 30): ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡ ಮೂರು ಪಂದ್ಯಗಳ ಟಿ-20 ಹಾಗೂ ಏಕದಿನ ಸರಣಿಯನ್ನು ಆಡುತ್ತಿದೆ. ನಿನ್ನೆ ನಡೆದ ಮೊದಲ ಟಿ-20 ಪಂದ್ಯದಲ್ಲಿ ಲಂಕಾನ್ನರ ವಿರುದ್ಧ ಆಸೀಸ್ ಮಹಿಳೆಯರು 41 ರನ್​ಗಳಿಂದ ಗೆದ್ದು ಬೀಗಿದರು.

ಶ್ರೀಲಂಕಾ ಸೋತರು ತಂಡದ ನಾಯಕಿ ಚಾಮರಿ ಅಟಪಟ್ಟು ಭರ್ಜರಿ ಶತಕ ಸಿಡಿಸಿ ಒಂದೇ ಪಂದ್ಯದಲ್ಲಿ ಎರಡು ವಿಶ್ವದಾಖಲೆ ನಿರ್ಮಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ವನಿತೆಯರ ಪರ ಬೆಲ್ತ್ ಮೂನೆ ಶತಕ ಸಿಡಿಸಿ ಅಬ್ಬರಿಸಿದರು. ಕೇವಲ 61 ಎಸೆತಗಳಲ್ಲಿ 20 ಬೌಂಡರಿ ಸಿಡಿಸಿ 113 ರನ್ ಚಚ್ಚಿದರು. ಇವರಿಗೆ ಅಲ್ಸಾ ಹೆಲಿ(43) ಹಾಗೂ ಆಶ್ಲೆಗ್ ಹಾರ್ಡನರ್(49) ಉತ್ತಮ ಸಾತ್ ನೀಡಿದರು. ಪರಿಣಾಮ 20 ಓವರ್​ಗೆ ಆಸೀಸ್ 4 ವಿಕೆಟ್ ಕಳೆದುಕೊಂಡು ಬರೋಬ್ಬರಿ 217 ರನ್ ಪೇರಿಸಿತು.

ಬೇರೆಯವರ ಮನೆಗೆ ಕಲ್ಲೆಸೆಯುವ ಪ್ರಯತ್ನ ಬೇಡ; ಪಾಕ್ ಆಟಗಾರರ ಮೈಚಳಿ ಬಿಡಿಸಿದ ಧವನ್

ಈ ಕಠಿಣ ಗುರಿ ಬೆನ್ನಟ್ಟಿದ ಶ್ರೀಲಂಕಾಕ್ಕೆ ನಾಯಕಿ ಚಾಮರಿ ಅಟಪಟ್ಟು ಬಿಟ್ಟರೆ ಮತ್ಯಾವ ಬ್ಯಾಟ್ಸ್​ಮನ್​ಗಳು ಆಸರೆಯಾಗಲಿಲ್ಲ. ಚಾಮರಿ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದರು. ಆದರೆ, ಉಳಿದ ಬ್ಯಾಟ್ಸ್​ಮನ್​ಗಳು ವೈಫಲ್ಯ ಅನುಭಿಸಿದ ಕಾರಣ ತಂಡಕ್ಕೆ ಹಿನ್ನಡೆಯಾಯಿತು. ಲಂಕಾ 20 ಓವರ್​​ಗೆ 7 ವಿಕೆಟ್ ಕಳೆದುಕೊಂಡು 176 ರನ್​ಗಳನ್ನಷ್ಟೆ ಕಲೆಹಾಕಲಾಯಿತು.

 ಆದರೂ ಚಾಮರಿ 66 ಎಸೆತಗಳಲ್ಲಿ 12 ಬೌಂಡರಿ ಹಾಗೂ 6 ಅಮೋಘ ಸಿಕ್ಸ್​ ಸಿಡಿಸಿ 113 ರನ್ ಬಾರಿಸಿದರು. ಈ ಶತಕದೊಂದಿಗೆ ಚಾಮರಿ ವಿಶ್ವದಾಖಲೆ ನಿರ್ಮಿಸಿದರು. ಟಿ-20 ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಶ್ರೀಲಂಕಾ ಮಹಿಳಾ ತಂಡದ ಪರ ಶತಕ ಸಿಡಿಸಿದ ಪ್ರಥಮ ಆಟಗಾರ್ತಿ ಚಾಮರಿ ಆಗಿದ್ದಾರೆ.

ಅಷ್ಟೇ ಅಲ್ಲದೆ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಚೇಸಿಂಗ್ ವೇಳೆ ಮೂರಂಕಿ ಗಡಿ ದಾಟಿದ ಮೊದಲ ಮಹಿಳಾ ನಾಯಕಿ ಚಾಮರಿ ಆದರು.

 ಚಾಮರಿ ಅಟಪಟ್ಟು ಭರ್ಜರಿ ಶತಕದ ಹೊರತಾಗಿಯು ಶ್ರೀಲಂಕಾ ಸೋಲುಂಡಿತು. ಸದ್ಯ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಶ್ರೀಲಂಕಾ 0-1ರ ಹಿನ್ನಡೆಯಲ್ಲಿದೆ.
First published:September 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading