Sri Lanka vs West Indies: ಅವಿಷ್ಕಾ ಆರ್ಭಟ: ವಿಂಡೀಸ್​ಗೆ ಬೃಹತ್ ಗುರಿ ನೀಡಿದ ಲಂಕನ್ನರು

zahir | news18
Updated:July 1, 2019, 7:15 PM IST
Sri Lanka vs West Indies: ಅವಿಷ್ಕಾ ಆರ್ಭಟ: ವಿಂಡೀಸ್​ಗೆ ಬೃಹತ್ ಗುರಿ ನೀಡಿದ ಲಂಕನ್ನರು
Sri Lanka vs West Indies
zahir | news18
Updated: July 1, 2019, 7:15 PM IST
ವಿಶ್ವಕಪ್​​ನ 39ನೇ ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ವಿರುದ್ಧ ಶ್ರೀಲಂಕಾ ತಂಡ ಬೃಹತ್ ಮೊತ್ತ ಕಲೆಹಾಕಿದೆ. ಅವಿಷ್ಕಾ ಫೆರ್ನಾಂಡೊ ಅವರ ಭರ್ಜರಿ ಶತಕದ ನೆರವಿನಿಂದ ಕೆರಿಬಿಯನ್ನರಿಗೆ ಲಂಕಾ ತಂಡ 339 ರನ್​ಗಳ ಕಠಿಣ ಗುರಿಯನ್ನು ನೀಡಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದ ವಿಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆದರೆ ವೆಸ್ಟ್​ ಇಂಡೀಸ್ ಕಪ್ತಾನನ ಲೆಕ್ಕಚಾರಗಳನ್ನು ತಲೆ ಕೆಳಗಾಗುವಂತೆ ಬ್ಯಾಟ್ ಬೀಸಿದ ಲಂಕಾ ಆರಂಭಿಕರರಾದ ನಾಯಕ ದಿಮುತ್ ಕರುಣರತ್ನೆ- ಕುಸಲ್ ಪೆರೇರಾ ಮೊದಲ ವಿಕೆಟ್​ಗೆ 93 ರನ್​ಗಳ ಜೊತೆಯಾಟ ಆಡಿದರು.

ಉತ್ತಮ ಅಡಿಪಾಯ ಹಾಕಿದ ಲಂಕಾ ಓಪರ್​ಗಳ ವಿಕೆಟ್​ಗಾಗಿ ವಿಂಡೀಸ್ ಬೌಲರುಗಳು ಪರದಾಡಿದರು. ಕೊನೆಗೂ 16ನೇ ಒವರ್​ನಲ್ಲಿ ಹೋಲ್ಡರ್ ಎಸೆತವನ್ನು ಮುನ್ನುಗ್ಗಿ ಹೊಡೆಯಲು ಯತ್ನಿಸಿದ ಕರುಣರತ್ನೆ(32) ಕೀಪರ್​ಗೆ ಕ್ಯಾಚಿತ್ತು ಹೊರ ನಡೆದರು. ಇದರ ಬೆನ್ನಲ್ಲೇ ಅನವಶ್ಯಕ ರನ್​ಗಾಗಿ ಓಡಿ ಕುಸಲ್ ಪೆರೇರಾ(64) ರನೌಟ್ ಆಗುವ ಮೂಲಕ ಪೆವಿಲಿಯನ್ ಸೇರಿದರು.

ಈ ಹಂತದಲ್ಲಿ ಮೇಲುಗೈ ಸಾಧಿಸಿದ ಕೆರಿಬಿಯನ್ ಬೌಲರ್​ಗಳನ್ನು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿಸಿದ್ದು ಅವಿಷ್ಕಾ ಫೆರ್ನಾಂಡೊ. ಕುಸಾಲ್ ಮೆಂಡಿಸ್ ಜೊತೆಗೂಡಿದ ಯುವ ಆಟಗಾರ ಫೆರ್ನಾಂಡೊ ತಂಡದ ಸ್ಕೋರ್​ ಅನ್ನು ಹೆಚ್ಚಿಸುವ ಕಾಯಕಕ್ಕೆ ಕೈ ಹಾಕಿದರು. ಅದರಂತೆ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಅವಿಷ್ಕಾ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು.

103 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಬಾರಿಸಿದ ಅವಿಷ್ಕಾ ಫೆರ್ನಾಂಡೊ 104 ರನ್​ಗಳಿಸಿದಾಗ ಕಾಟ್ರೆಲ್​ಗೆ ವಿಕೆಟ್ ಒಪ್ಪಿಸಿದರು. ಕೊನೆಯ ಹಂತದಲ್ಲಿ ಲಹಿರು ತಿರುಮನೆ ಅವರ ಸ್ಪೋಟಕ ಬ್ಯಾಟಿಂಗ್​ ನೆರವಿನಿಂದ ಶ್ರೀಲಂಕಾ 6 ವಿಕೆಟ್​ಗಳ ನಷ್ಟಕ್ಕೆ 338 ರನ್​ ಪೇರಿಸಿತು. ಇನ್ನು ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ವೆಸ್ಟ್​ ಇಂಡೀಸ್ ಪರ ಶೆಲ್ಡೊನ್ ಕಾಟ್ರೆಲ್ ಹತ್ತು ಓವರ್​ನಲ್ಲಿ 69ಕ್ಕೆ 2 ವಿಕೆಟ್​ ಕಬಳಿಸಿ ಯಶಸ್ವಿ ಬೌಲರ್​ ಎನಿಸಿಕೊಂಡರು.
First published:July 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...