SL vs SA: ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಹರಿಣಗಳು; ವಿಶ್ವಕಪ್​ನಿಂದ ಲಂಕಾ ಔಟ್

Sri Lanka vs South Africa Live Score: ದ. ಆಫ್ರಿಕಾ ಆಡಿರುವ ಏಳು ಪಂದ್ಯಗಳಲ್ಲಿ ಐದರಲ್ಲಿ ಸೋತು ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿದೆ. ಇತ್ತ ಲಂಕಾಗೆ ಇಂದಿನ ಪಂದ್ಯ ಗೆದ್ದರೆ ಸೆಮೀಸ್ ಆಸೆ ಜೀವಂತಾಗಿರಲಿದೆ.

Vinay Bhat | news18
Updated:June 28, 2019, 10:14 PM IST
SL vs SA: ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಹರಿಣಗಳು; ವಿಶ್ವಕಪ್​ನಿಂದ ಲಂಕಾ ಔಟ್
ಹಶೀಮ್ ಆಮ್ಲಾ
  • News18
  • Last Updated: June 28, 2019, 10:14 PM IST
  • Share this:
ಬೆಂಗಳೂರು (ಜೂ. 28): ಚಸ್ಟರ್ ಲಿ ಸ್ಟ್ರೀಟ್​ನಲ್ಲಿ ನಡೆದ ವಿಶ್ವಕಪ್​​ನ 35ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ 9 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್-ಬೌಲಿಂಗ್​ನಲ್ಲಿ ಮಿಂಚಿದ ಹರಿಣಗಳು ಟೂರ್ನಿಯಿಂದ ಔಟ್ ಆಗಿದ್ದರು  2ನೇ ಗೆಲುವು ಸಾಧಿಸಿದೆ. ಇತ್ತ ಶ್ರೀಲಂಕಾ ಹೀನಾಯ ಸೋಲಿನೊಂದಿಗೆ ವಿಶ್ವಕಪ್​ನಿಂದ ಹೊರ ಬಿದ್ದಿದೆ.

ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಶ್ರೀಲಂಕಾ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಹರಿಣಗಳ ಬೌಲಿಂಗ್ ದಾಳಿಗೆ ತರಗೆಲೆಯಂತೆ ಉರುಳಿದ ಲಂಕಾ ಬ್ಯಾಟ್ಸ್​ಮನ್​ಗಳು ಕೇವಲ 203 ರನ್​ಗಳಿಗೆ ಆಲೌಟ್ ಆಯಿತು.

204 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ದ. ಆಫ್ರಿಕಾ ಆರಂಭದಲ್ಲೇ ಆಘಾತ ಅನುಭವಿಸತಾದರು ಬಳಿಕ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಹಶೀಮ್ ಆಮ್ಲಾ ಭರ್ಜರಿ ಶತಕದ ಜೊತೆಯಾಟ ಆಡಿ, ತಂಡಕ್ಕೆ ಬೇಗನೆ ಗೆಲುವು ತಂದಿಟ್ಟರು.

15 ರನ್ ಗಳಿಸಿರುವಾಗ ಕ್ವಿಂಟನ್ ಡಿಕಾಕ್ ಮಲಿಂಗಾ ಬೌಲಿಂಗ್​ನಲ್ಲಿ ಬೌಲ್ಡ್​ ಆದರು. ಬಳಿಕ 2ನೇ ವಿಕೆಟ್​ಗೆ ಡುಪ್ಲೆಸಿಸ್ ಹಾಗೂ ಆಮ್ಲಾ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಎಲ್ಲೂ ವಿಕೆಟ್ ಕೈಚೆಲ್ಲದಂತೆ ಲೀಲಾಜಾಲವಾಗಿ ಬ್ಯಾಟ್ ಬೀಸಿದ ಈ ಜೋಡಿ ಅರ್ಧಶತಕ ಸಿಡಿಸಿ ಗೆಲುವಿನ ರೂವಾರಿಯಾದರು. ಈ ಮೂಲಕ 37.2 ಓವರ್​ನಲ್ಲೇ ಕೇವಲ 1 ವಿಕೆಟ್ ಕಳೆದುಕೊಂಡು 206 ರನ್ ಬಾರಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿತು.

ಡುಪ್ಲೆಸಿಸ್ 103 ಎಸೆತಗಳಲ್ಲಿ 10 ಬೌಂಡರಿ 1 ಸಿಕ್ಸರ್​ನೊಂದಿಗೆ ಅಜೇಯ 96 ರನ್ ಕಲೆಹಾಕಿದರೆ, ಆಮ್ಲಾ 105 ಎಸೆತಗಳಲ್ಲಿ 5 ಬೌಂಡರಿ ಸಿಡಿಸಿ 80 ರನ್ ಬಾರಿಸಿ ಅಜೇಯರಾಗಿ ಉಳಿದರು. ಲಂಕಾ ಪರ ಮಾಲಿಂಗ 1 ವಿಕೆಟ್ ಕಿತ್ತರು.

9 ವಿಕೆಟ್​ಗಳ ಜಯದೊಂದಿಗೆ ದ. ಆಫ್ರಿಕಾ ವಿಶ್ವಕಪ್ ಟೂರ್ನಿಯಲ್ಲಿ 2ನೇ ಜಯ ಸಾಧಿಸಿತು. ಜೊತೆಗೆ ಲಂಕಾನ್ನರನ್ನು ವಿಶ್ವಕಪ್​ನಿಂದ ಹೊರ ದಬ್ಬಿತು.

ಇದಕ್ಕೂ ಮುನ್ನ ಟಾಸ್ ಗೆದ್ದ ದ. ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.ಇದರಂತೆ ಕಣಕ್ಕಿಳಿದ ಲಂಕಾ ನಾಯಕ ದಿಮುತ್ ಕರುಣತ್ನೆ ಮೊದಲ ಓವರ್​ನ ಮೊದಲ ಎಸೆತದಲ್ಲೇ ಔಟ್ ಆದರು. ರಬಾಡ ಬೌಲಿಂಗ್​ನಲ್ಲಿ ದಿಮುತ್ ಡುಪ್ಲೆಸಿಸ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಈ ಸಂದರ್ಭ ಜೊತೆಯಾದ ಕುಸಲ್ ಪೆರೇರಾ ಹಾಗೂ ಆವಿಷ್ಕಾ ಫೆರ್ನಾಂಡೊ ಅರ್ಧಶತಕದ ಜೊತೆಯಾಟ ಆಡಿದರಷ್ಟೆ. ಇಬ್ಬರೂ ಬ್ಯಾಟ್ಸ್​ಮನ್​ಗಳು ತಲಾ 30 ರನ್ ಕಲೆಹಾಕಿ ಪ್ರೆಟೋರಿಯಸ್ ಬೌಲಿಂಗ್​ನಲ್ಲಿ ಔಟ್ ಆದರು. ಅನುಭವಿ ಆ್ಯಂಜಲೋ ಮ್ಯಾಥ್ಯೂಸ್ ಆಟ 11 ರನ್​ಗೆ ಅಂತ್ಯವಾಯಿತು.

ಕುಸಲ್ ಮೆಂಡೀಸ್ 51 ಎಸೆತಗಳಲ್ಲಿ 23 ರನ್ ಗಳಿಸಿ ಬ್ಯಾಟ್ ಕೆಳಗಿಟ್ಟರೆ ಧನಂಜಯ್ ಡಿ ಸಿಲ್ವಾ 41 ಎಸೆತಗಳಲ್ಲಿ 24 ರನ್ ಕಲೆಹಾಕಿ ಬ್ಯಾಟ್ ಕೆಳಗಿಟ್ಟರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಯಾರು ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಅಂತಿಮವಾಗಿ ಶ್ರೀಲಂಕಾ 49.3 ಓವರ್​ನಲ್ಲಿ 203 ರನ್​ಗೆ ಆಲೌಟ್ ಆಯಿತು. ಆಫ್ರಿಕಾ ಪರ ಪ್ರೆಟೋರಿಯಸ್ ಹಾಗೂ ಮೊರೀಸ್ ತಲಾ 3 ವಿಕೆಟ್ ಕಿತ್ತು ಮಿಂಚಿದರೆ, ರಬಾಡ 2, ಫೆಹ್ಲುಕ್ವೇವೊ ಹಾಗೂ ಡುಮಿನಿ ತಲಾ 1 ವಿಕೆಟ್ ಪಡೆದರು.
First published: June 28, 2019, 2:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading