ಬೆಂಗಳೂರು (ಸೆ. 04): ಶ್ರೀಲಂಕಾ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ಟಿ-20 ಪಂದ್ಯವನ್ನಾಡುತ್ತಿದೆ. ನಿನ್ನೆ ನಡೆದ ಎರಡನೇ ಕದನದಲ್ಲಿ ಕಿವೀಸ್ 4 ವಿಕೆಟ್ಗಳ ರೋಚಕ ಜಯ ಸಾಧಿಸಿ ಸರಣಿ ವಶ ಪಡಿಸಿಕೊಂಡಿದೆ. ಈ ಮಧ್ಯೆ ಪಂದ್ಯದ ಅಂತಿಮ ಓವರ್ನಲ್ಲಿ ಬಾಲ್ ಹಿಡಿಯಲೋಗಿ ಇಬ್ಬರು ಶ್ರೀಲಂಕಾ ಆಟಗಾರರು ಮುಖಾಮುಖಿ ಡಿಕ್ಕಿ ಹೊಡೆದು ಗಂಭೀರ ಗಾಯವಾದ ಘಟನೆ ನಡೆದಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ 20 ಓವರ್ಗೆ 9 ವಿಕೆಟ್ ಕಳೆದುಕೊಂಡು 161 ರನ್ ಬಾರಿಸಿತು. 162 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ ಕಾಲಿನ್ ಗ್ರ್ಯಾಂಡ್ಹೋಮ್ ಹಾಗೂ ಟಾಮ್ ಬ್ರೂಸ್ರ ಅರ್ಧಶತಕದ ನೆರವಿನಿಂದ 19 ಓವರ್ ಅಂತ್ಯಕ್ಕೆ 155 ರನ್ ಬಾರಿಸಿತ್ತು. ಕೊನೆಯ 6 ಎಸೆತದಲ್ಲಿ ಕಿವೀಸ್ಗೆ ಗೆಲ್ಲಲು 7 ರನ್ಗಳ ಅವಶ್ಯಕತೆಯಿತ್ತು.
ಮೊದಲ ಎಸೆತದಲ್ಲಿ ಬ್ರೂಸ್(53) ರನೌಟ್ಗೆ ಬಲಿಯಾದರೆ, 2ನೇ ಎಸೆತದಲ್ಲಿ ಡ್ಯಾರಿ ಮಿಚೆಲ್ ಕ್ಯಾಚ್ ನೀಡಿ ನಿರ್ಗಮಿಸಿದರು. ಮೂರನೇ ಎಸೆತದಲ್ಲಿ ನಡೆದಿದ್ದು ಊಹಿಸಲಾಗದ ಘಟನೆ.
ಪಾಕ್ ತಂಡಕ್ಕೆ ನೂತನ ಕೋಚ್ ಆಗಿ ಮಿಸ್ಬಾ ಆಯ್ಕೆ, ವಕಾರ್ ಯೂನಿಸ್ ಬೌಲಿಂಗ್ ಕೋಚ್!
ಹಸರಂಗ ಬೌಲಿಂಗ್ನಲ್ಲಿ ಸ್ಯಾಂಟನರ್ ಚೆಂಡನ್ನು ಡೀಪ್ ಮಿಡ್ ವಿಕೆಟ್ ಮೂಲಕ ಸಿಕ್ಸರ್ಗೆ ಅಟ್ಟಲು ಯತ್ನಿಸಿದರು. ಈ ಸಂದರ್ಭ ಫೀಲ್ಡಿಂಗ್ನಲ್ಲಿದ್ದ ಶೆಹನ್ ಜಯಸೂರ್ಯ ಕ್ಯಾಚ್ಗಾಗಿ ಓಡಿ ಬಂದರು. ಇತ್ತ ಕುಸಲ್ ಮೆಂಡಿಸ್ ಕೂಡ ಸಿಕ್ಸರ್ ಅನ್ನು ತಪ್ಪಿಸಲು ಮುಂದಾದರು. ಆದರೆ, ಜಯಸೂರ್ಯ ಕೈಗೆ ಚೆಂಡು ಸಿಕ್ಕಿದ್ದು, ಇದೇವೇಳೆ ಮೆಂಡೀಸ್ಗೆ ಡಿಕ್ಕಿ ಹೊಡೆದಿದ್ದಾರೆ. ತಕ್ಷಣವೇ ನಿಯಂತ್ರಣ ತಪ್ಪಿ ಜಯಸೂರ್ಯ ಬಾಲ್ ಜೊತೆಗೆ ಬೌಂಡರಿ ಲೈನ್ ಮೇಲೆ ಬಿದ್ದಿದ್ದಾರೆ.
ಕೊಹ್ಲಿ, ಧೋನಿ ಅಲ್ಲ!: ಈ ಆಟಗಾರನನ್ನು ಪಡೆಯಲು ಭಾರತ ಪುಣ್ಯ ಮಾಡಿರಬೇಕು ಎಂದ ಪಠಾಣ್
ಅಂಪೈರ್ ಪರಿಶೀಲಿಸಿ ಸಿಕ್ಸ್ ಎಂಬ ತೀರ್ಪು ನೀಡಿದರು. ಆದರೆ, ತೀವ್ರ ಗಾಯಕ್ಕೊಳಗಾದ ಜಯಸೂರ್ಯ ಹಾಗೂ ಮೆಂಡಿಸ್ ಮೇಲೇಳಲಾರದೆ ಇದ್ದಾಗ ಶ್ರೀಲಂಕಾ ಕ್ರಿಕೆಟ್ನ ವೈದ್ಯಾಧಿಕಾರಿಗಳು ಬಂದು ಪರೀಕ್ಷೆ ನಡೆಸಿದರು. ಸದ್ಯ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ರೋಚಕ ಪಂದ್ಯದ ವಿಡಿಯೋ ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರೀ ಹರಿದಾಡುತ್ತಿದೆ.
3ನೇ ಎಸೆತದಲ್ಲಿ ಸ್ಯಾಂಟನರ್ ಸಿಕ್ಸ್ ಸಿಡಿಸಿದರೆ, ಮುಂದಿನ ಎಸೆತದಲ್ಲಿ ಬೌಂಡರಿ ಬಾರಿಸಿದರು. ಈ ಮೂಲಕ ಇನ್ನೂ 2 ಎಸೆತ ಬಾಕಿ ಇರುವಂತೆ ನ್ಯೂಜಿಲೆಂಡ್ 165 ರನ್ ಗಳಿಸಿ 4 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಕಿವೀಸ್ 2-0 ಮುನ್ನಡೆ ಸಾಧಿಸಿ ಸರಣಿ ವಶ ಪಡಿಸಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ