Lasith Malinga; ನಾಲ್ಕು ಎಸೆತದಲ್ಲಿ 4 ವಿಕೆಟ್ ಕಿತ್ತು ದಾಖಲೆ ಬರೆದ ಮಾಲಿಂಗ

ಇದಕ್ಕೂ ಮುನ್ನ 2007ರ ಏಕದಿನ ವಿಶ್ವಕಪ್‌ ಕೂಟದ ಸೂಪರ್‌-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮಾಲಿಂಗ ಮೊದಲ ಬಾರಿ 4 ಎಸೆತಗಳಲ್ಲಿ 4 ವಿಕೆಟ್ ಕಿತ್ತ ಸಾಧನೆ ಮಾಡಿದ್ದರು.

Vinay Bhat | news18-kannada
Updated:September 7, 2019, 11:26 AM IST
Lasith Malinga; ನಾಲ್ಕು ಎಸೆತದಲ್ಲಿ 4 ವಿಕೆಟ್ ಕಿತ್ತು ದಾಖಲೆ ಬರೆದ ಮಾಲಿಂಗ
ಲಸಿತ್ ಮಾಲಿಂಗ
  • Share this:
ಬೆಂಗಳೂರು (ಸೆ. 07): ನ್ಯೂಜಿಲೆಂಡ್ ವಿರುದ್ಧ ನಡೆದ ಅಂತಿಮ ಮೂರನೇ ಟಿ-20 ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕ ಲಸಿತ್ ಮಾಲಿಂಗಾ 4 ಎಸೆತಗಳಲ್ಲಿ ನಾಲ್ಕು ವಿಕೆಟ್ ಕಿತ್ತು ಮಿಂಚಿದ್ದಾರೆ.

ಲಂಕಾದ ಪಲ್ಲೆಕೆಲೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ದುಕೊಂಡಿತು. ಉತ್ತಮ ಮೊತ್ತ ಕಲೆಹಾಕುವಲ್ಲಿ ಎಡವಿದ ಸಿಂಹಳೀಯರು ಧನುಷ್ಕಾ ಅವರ 30 ಹಾಗೂ ಡಿಕ್ವೆಲ್​ರ 24 ರನ್​ ಗಳ ನೆರವಿನಿಂದ 20 ಓವರ್​ಗೆ 8 ವಿಕೆಟ್ ಕಳೆದುಕೊಂಡು 125 ರನ್ ಕಲೆಹಾಕಿತು. ಕಿವೀಸ್ ಪರ ಸ್ಯಾಂಟನರ್ ಹಾಗೂ ಟಾಡ್ ಅಸ್ಟಲೆ ತಲಾ 3 ವಿಕೆಟ್ ಪಡೆದರು.

126 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್​ಗೆ ಮಾಲಿಂಗ ಮಾರಕವಾಗಿ ಪರಿಣಮಿಸಿದರು. ಪಂದ್ಯದ ಮೂರನೇ ಓವರ್ ಕೈಗೆ ಎತ್ತಿಕೊಂಡ ಲಸಿತ್ 4 ಎಸೆತಗಳಲ್ಲಿ 4 ವಿಕೆಟ್ ಕಿತ್ತರು. ಕ್ರಮವಾಗಿ 3ನೇ ಚೆಂಡಿನಲ್ಲಿ ಮುನ್ರೋ ಬೌಲ್ಡ್ ಆದರೆ, 4ನೇ ಎಸೆತದಲ್ಲಿ ರುದರ್ಫರ್ಡ್ ಎಲ್​​ಬಿಗೆ ಬಲಿಯಾದರು. 5ನೇ ಚೆಂಡಿನಲ್ಲಿ ಗ್ರ್ಯಾಂಡ್ ಹೋಮ್ ಬೌಲ್ಡ್​ ಆದರೆ, ಕೊನೆಯ ಎಸೆತದಲ್ಲಿ ರಾಸ್ ಟೇಲರ್ ಎಲ್​ಬಿ ಬಲೆಗೆ ಸಿಲುಕಿಸಿದರು.

ಇವೆರಡು 2019ರ ಹೃದಯ ವಿದ್ರಾವಕ ಫೋಟೋಗಳು; ಟ್ವಿಟ್ಟರ್​ನಲ್ಲಿ ಭಾರತೀಯರ ಬೇಸರ!

 



ಈ ಮೂಲಕ ಇತಿಹಾಸ ನಿರ್ಮಿಸಿದ 36 ವರ್ಷದ ಮಾಲಿಂಗ ಟಿ-20 ಕ್ರಿಕೆಟ್​ನಲ್ಲೇ 100 ವಿಕೆಟ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಖ್ಯಾತಿ ತಮ್ಮದಾಗಿಸಿದರು. ಇದಕ್ಕೂ ಮುನ್ನ 2007ರ ಏಕದಿನ ವಿಶ್ವಕಪ್‌ ಕೂಟದ ಸೂಪರ್‌-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮಾಲಿಂಗ ಮೊದಲ ಬಾರಿ 4 ಎಸೆತಗಳಲ್ಲಿ 4 ವಿಕೆಟ್ ಕಿತ್ತ ಸಾಧನೆ ಮಾಡಿದ್ದರು.

ಇದೀಗ ಮತ್ತೊಮ್ಮೆ ಈ ಸಾಧನೆಗೈದಿದ್ದಾರೆ. ಮಲಿಂಗ ಟಿ-20 ಮಾದರಿಯಲ್ಲಿ 2 ಬಾರಿ ಹಾಗೂ ಏಕದಿನ ಕ್ರಿಕೆಟ್​ನಲ್ಲಿ 3 ಸಲ ಹ್ಯಾಟ್ರಿಕ್​ ವಿಕೆಟ್​ ಪಡೆದಿದ್ದಾರೆ.

ನ್ಯೂಜಿಲೆಂಡ್ 16 ಓವರ್​​ಗಳಲ್ಲಿ 88 ರನ್​ಗೆ ಆಲೌಟ್ ಆಗುವ ಮೂಲಕ ಲಂಕಾ 37 ರನ್​ಗಳಿಂದ ಗೆದ್ದು ಬೀಗಿತು. ಆದರೆ, ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ನ್ಯೂಜಿಲೆಂಡ್ 2-1ರ ಮುನ್ನಡೆ ಸಾಧಿಸಿ ಸರಣಿ ವಶ ಪಡಿಸಿಕೊಂಡಿತು. ಮಾಲಿಂಗ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರೆ, ಟಿಮ್ ಸೌಥಿ ಸರಣಿಶ್ರೇಷ್ಠ ತಮ್ಮದಾಗಿಸಿದರು.

First published:September 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...