ಬಾಂಗ್ಲಾ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್; ಗೆಲುವನ್ನು ಕುಲಶೇಖರಗೆ ಅರ್ಪಿಸಿದ ಶ್ರೀಲಂಕಾ

122 ರನ್​ಗಳ ಅಮೋಘ ಜಯದೊಂದಿಗೆ ಶ್ರೀಲಂಕಾ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಅಲ್ಲದೆ ಇತ್ತೀಚೆಗಷ್ಟೆ ನಿವೃತ್ತಿ ನೀಡಿದ ನುವನ್ ಕುಲಶೇಖರಗೆ ಇಂದಿನ ಪಂದ್ಯವನ್ನು ಅರ್ಪಣೆ ಮಾಡಿದೆ.

ಶ್ರೀಲಂಕಾ ಕ್ರಿಕೆಟ್ ತಂಡ

ಶ್ರೀಲಂಕಾ ಕ್ರಿಕೆಟ್ ತಂಡ

  • News18
  • Last Updated :
  • Share this:
ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಪಂದ್ಯಗಳಲ್ಲಿ ಮೂರನ್ನು ಗೆದ್ದು ಬೀಗಿರುವ ಶ್ರೀಲಂಕಾ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇಂದು ನಡೆದ ಅಂತಿಮ ಪಂದ್ಯದಲ್ಲಿ 122 ರನ್​ಗಳ ಭರ್ಜರಿ ಜಯ ಸಾಧಿಸಿ ಗೆಲುವನ್ನು ಶ್ರೀಲಂಕಾ ನುವನ್ ಕುಲಶೇಖರಗೆ ಅರ್ಪಣೆ ಮಾಡಿದೆ.

ಮೊದಲ ಬ್ಯಾಟ್ ಮಾಡಿದ ಸಿಂಹಳೀಯರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಆ್ಯಂಜಲೊ ಮ್ಯಾಥ್ಯೂಸ್ 90 ಎಸೆತಗಳಲ್ಲಿ 87 ರನ್ ಬಾರಿಸಿದರೆ, ಕುಸಲ್ ಮೆಂಡಿಸ್ 54 ರನ್ ಗಳಿಸಿದರು. ಇವರ ಜೊತೆ ನಾಯಕ ದಿಮುತ್ ಕರುಣರತ್ನೆ 46 ಹಾಗೂ ಕುಸಲ್ ಪೆರೇರಾ 42 ರನ್ ಗಳಿಸಿದರು. ಅಂತಿಮ ಹಂತದಲ್ಲಿ ಡಸನ್ ಶನಕ 14 ಎಸೆತಗಳಲ್ಲಿ 30 ರನ್ ಚಚ್ಚಿದ ಪರಿಣಾಮ ಲಂಕಾ 50 ಓವರ್​ಗೆ 8 ವಿಕೆಟ್ ಕಳೆದುಕೊಂಡು 294 ರನ್ ಕಲೆಹಾಕಿತು.

ಇಂದಿನ ವರೆಗೂ ಎಂ ಎಸ್ ಧೋನಿಯೇ ಭಾರತದ ಬೆಸ್ಟ್​ ಫಿನಿಶರ್; ಪ್ರಸಾದ್

295 ರನ್​ಗಳ ಕಠಿಣ ಗುರಿ ಬೆನ್ನಟ್ಟಿದ ಬಾಂಗ್ಲಾ ಆರಂಭದಿಂದಲೆ ವಿಕೆಟ್ ಕಳೆದುಕೊಂಡು ಸಾಗಿತು. ತಂಡದ ಪರ ಸೌಮ್ಯ ಸರ್ಕಾರ್ 69 ರನ್ ಹಾಗೂ ತೈಜುಲ್ ಇಸ್ಲಾಮ್ ಅಜೇಯ 39 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 15ರ ಗಡಿ ದಾಟಲಿಲ್ಲ. ಪರಿಣಾಮ ಬಾಂಗ್ಲಾದೇಶ 36 ಓವರ್​ನಲ್ಲಿ ಕೇವಲ 172 ರನ್​ಗೆ ಆಲೌಟ್ ಆಯಿತು. ಲಂಕಾ ಪರ ಶನಕ 3 ವಿಕೆಟ್ ಕಿತ್ತರೆ, ಕುಸಲ್ ರಂಜಿತ್ ಹಾಗೂ ಲಹಿರು ತಿರುಮಾನೆ ತಲಾ 2 ವಿಕೆಟ್ ಕಿತ್ತರು.

122 ರನ್​ಗಳ ಅಮೋಘ ಜಯದೊಂದಿಗೆ ಶ್ರೀಲಂಕಾ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಇದರ ಜೊತೆಗೆ ಸುಮಾರು ನಾಲ್ಕು ವರ್ಷಗಳಿ ಬಳಿಕ ತವರಿನಲ್ಲಿ ಏಕದಿನ ಸರಣಿ ಗೆದ್ದಿದೆ. ಮೊದಲ ಏಕದಿನ ಪಂದ್ಯವನ್ನು ಲಸಿತ್ ಮಾಲಿಂಗ ವಿದಾಯದ ಪಂದ್ಯವಾಗಿ ಶ್ರೀಲಂಕಾ ಕ್ರಿಕೆಟ್ ಹೇಳಿ ಜಯದೊಂದಿಗೆ ನಿವೃತ್ತಿ ನೀಡಿತ್ತು. ಅಂತೆಯೆ ಇಂದಿನ ಪಂದ್ಯ ಇತ್ತೀಚೆಗಷ್ಟೆ ನಿವೃತ್ತಿ ನೀಡಿದ ನುವನ್ ಕುಲಶೇಖರಗೆ ಅರ್ಪಣೆ ಮಾಡಿದೆ.

 

First published: