ಪಾಕ್​ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಗುಂಡಿನ ದಾಳಿ; ಬೆಚ್ಚಿ ಬೀಳಿಸುತ್ತೆ ದಶಕದ ಹಿಂದಿನ ಘಟನೆ

ಈ ದಾಳಿಯಲ್ಲಿ ಆಗಿನ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕರಾಗಿದ್ದ ಮಹೇಲ ಜಯವರ್ಧನೆ, ಉಪನಾಯಕ ಕುಮಾರ್ ಸಂಗಕ್ಕರ, ತಿಲನ್ ಸಮರವೀರ, ಅಜಂತ ಮೆಂಡಿಸ್, ತರಂಗ ಪರ್ಣವಿತನ ಅವರಿಗೆ ಗಾಯಗಳಾಗಿದ್ದವು.

Vinay Bhat | news18
Updated:March 13, 2019, 5:15 PM IST
ಪಾಕ್​ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡದ ಮೇಲೆ ಗುಂಡಿನ ದಾಳಿ; ಬೆಚ್ಚಿ ಬೀಳಿಸುತ್ತೆ ದಶಕದ ಹಿಂದಿನ ಘಟನೆ
ಶ್ರೀಲಂಕಾ ಆಟಗಾರರು ತವರಿಗೆ ಮರಳುತ್ತಿರುವುದು
  • News18
  • Last Updated: March 13, 2019, 5:15 PM IST
  • Share this:
ಅಂದು ಶ್ರೀಲಂಕಾ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸದಲ್ಲಿತ್ತು. ಎರಡನೇ ಟೆಸ್ಟ್​ ಪಂದ್ಯದ ಮೂರನೇ ದಿನವದು. ಲಾಹೋರ್​​ನ ಗಡ್ಡಾ ಕ್ರಿಕೆಟ್ ಮೈದಾನಕ್ಕೆ ಶ್ರೀಲಂಕಾ ಆಟಗಾರರು ಬಸ್​​ನಲ್ಲಿ ತೆರಳುತ್ತಿದ್ದರು. ಈ ಸಂದರ್ಭ ಒಮ್ಮೆಲೆ ಗನ್ ಹಿಡಿದುಕೊಂಡು ಬಂದ ಭಯೋತ್ಪಾದಕ ಶ್ರೀಲಂಕಾ ಆಟಗಾರರಿರುವ ಬಸ್​​ ಮೇಲೆ ಮನಬಂದಂತೆ ಗುಂಡು ಹಾರಿಸಿದ. ಈ ಭೀಕರ ಘಟನೆಗೆ ಹತ್ತು ವರ್ಷಗಳಾಗಿವೆ. 2009, ಮಾರ್ಚ್​​ 3 ರಂದು ನಡೆದ ಈ ದುರ್ಘಟನೆ ಕ್ರಿಕೆಟ್ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿದೆ.

ಈ ದಾಳಿಯಲ್ಲಿ ಆಗಿನ ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕರಾಗಿದ್ದ ಮಹೇಲ ಜಯವರ್ಧನೆ, ಉಪನಾಯಕ ಕುಮಾರ್ ಸಂಗಕ್ಕರ, ತಿಲನ್ ಸಮರವೀರ, ಅಜಂತ ಮೆಂಡಿಸ್, ತರಂಗ ಪರ್ಣವಿತನ ಅವರಿಗೆ ಗಾಯಗಳಾಗಿದ್ದವು. ಅಂತೆಯೆ ಬಸ್ ಹಿಂದೆಯಿಂದ ಕಾರಿನಲ್ಲಿದ್ದ ಕಾಯ್ದಿಟ್ಟ ಅಂಪೈರ್​ ಎಹಸಾನ್​​ ಅವರ ದೇಹಕ್ಕೆ ಎರಡು ಬುಲೆಟ್​ಗಳು ಹೊಕ್ಕಿದ್ದವು. ಇದರಿಂದ ಕೆಲ ದಿನಗಳ ಕಾಲ ಅವರು ಕೋಮಕ್ಕೂ ಜಾರಿದ್ದರು. ಬಳಿಕ ಚೇತರಿಸಿಕೊಂಡಿದ್ದರು. ಈ ಘಟನೆಯಲ್ಲಿ ಆಟಗಾರರೆಲ್ಲರು ಅಪಾಯದಿಂದ ಪಾರಾಗಿದ್ದರಾದರು, 8 ಜನ ಪೊಲೀಸರು ಹಾಗೂ ಹತ್ತು ಮಂದಿ ನಾಗರೀಕರು ಸಾವನ್ನಪ್ಪಿದ್ದರು. ಹಲವರಿಗೆ ಗಾಯಗಳಾಗಿದ್ದವು.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ಪಾಕ್​ ವಿರುದ್ಧ ಭಾರತ ಆಡಬೇಕು; ನಿರ್ಧಾರ ಪ್ರಕಟಿಸಿದ ಐಸಿಸಿ

ಘಟನೆ ನಡೆದ ಬೆನ್ನಲ್ಲಿ ಮೈದಾನದಿಂದಲೇ ಶ್ರೀಲಂಕಾ ಆಟಗಾರರು ವಿಮಾನದಲ್ಲಿ ತವರಿಗೆ ಮರಳಿದ್ದರು. ಆ ಬಳಿಕ ಸ್ವತಃ ಐಸಿಸಿಯೇ ಯಾವುದೇ ವಿದೇಶಿ ತಂಡಗಳು ಪಾಕಿಸ್ತಾನದಲ್ಲೋಗಿ ಕ್ರಿಕೆಟ್ ಆಡದಂತೆ ನಿಷೇಧ ಹೇರಿತ್ತು. ಅಲ್ಲದೆ ದಾಳಿಯಾದ ನಂತರ 6 ವರ್ಷದವರೆಗೆ ಪಾಕಿಸ್ತಾನ ತನ್ನ ಮಣ್ಣಿನಲ್ಲಿ ಯಾವುದೇ ಕ್ರಿಕೆಟ್ ಟೂರ್ನಿ ಆಯೋಜಿಸಿಲ್ಲ. ಕಳೆದ ಕೆಲ ವರ್ಷಗಳ ಹಿಂದೆ ವೆಸ್ಟ್​ ಇಂಡೀಸ್ ಹಾಗೂ ಜುಂಬಾಬ್ವೆ ತಂಡಗಳು ಪಾಕ್ ಪ್ರವಾಸ ಮಾಡಿತ್ತಷ್ಟೆ.

First published:March 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading