ಬೆಂಗಳೂರು (ಆ. 18): ಶ್ರೀಲಂಕಾದ ಗಲ್ಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಿಂಹಳೀಯರು 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದ್ದಾರೆ. ನಾಯಕ ದಿಮುತ್ ಕರುಣರತ್ನೆ ಅವರ ಶತಕದ ನೆರವಿನಿಂದ ಲಂಕಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಖಾತೆ ತೆರೆದಿದೆ.
ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ ರಾಸ್ ಟೇಲರ್ರ 86 ರನ್ಗಳ ನೆರವಿನಿಂದ 249 ರನ್ಗೆ ಆಲೌಟ್ ಆಯಿತು. ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಕುಲಸ್ ಮೆಂಡಿಸ್, ಆ್ಯಂಜಲೋ ಮ್ಯಾಥ್ಯೂಸ್ ಹಾಗೂ ಡಿಕ್ವೆಲ್ರ ಅರ್ಧಶತಕದ ನೆರವಿನಿಂದ 267 ರನ್ ಬಾರಿಸಿತು.
18 ರನ್ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ನಲ್ಲಿ ಕಿವೀಸ್ 285 ರನ್ ಕಲೆಹಾಕಿತು. ಈ ಮೂಲಕ ಶ್ರೀಲಂಕಾಕ್ಕೆ ಗೆಲ್ಲಲು 268 ರನ್ಗಳ ಗುರಿ ನೀಡಿತು. ಈ ಟಾರ್ಗೆಟ್ ಬೆನ್ನಟ್ಟಿದ ಲಂಕಾ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್ಗಳಾದ ನಾಯಕ ದಿಮುತ್ ಕರುಣರತ್ನೆ ಹಾಗೂ ಲಹಿರೂ ತಿರುಮನೆ 161 ರನ್ಗಳ ಜೊತೆಯಾಟ ಆಡಿದರು.
ಟೀಂ ಇಂಡಿಯಾ ಟಿ-20 ತಂಡ ಇನ್ನೂ ಪ್ರಗತಿಯಲ್ಲಿದೆ, ಸಾಕಷ್ಟು ಕೆಲಸ ಬಾಕಿ ಇದೆ; ರವಿಶಾಸ್ತ್ರಿ
ಇವರ ಅತ್ಯುತ್ತಮ ಆಟದ ನೆರವಿನಿಂದ ಶ್ರೀಲಂಕಾ 86.1 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು 268 ರನ್ ಬಾರಿಸಿ ಗೆಲುವು ಸಾಧಿಸಿತು. ವಿಕೆಟ್ ಕೈಚೆಲ್ಲದಂತೆ ಅತ್ಯುತ್ತಮ ಆಟ ಪ್ರದರ್ಶಿಸಿದ ದಿಮುತ್ ಶತಕ ಸಿಡಿಸಿ 243 ಎಸೆತಗಳಲ್ಲಿ 122 ರನ್ ಬಾರಿಸಿದರು. ತಿರುಮಾನೆ 64 ರನ್ ಗಳಿಸಿದರು.
6 ವಿಕೆಟ್ಗಳ ಜಯದೊಂದಿಗೆ ಶ್ರೀಲಂಕಾ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಶುಭಾರಂಭ ಮಾಡಿದೆ. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ದಿಮುತ್ ಕರುಣರತ್ನೆ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ