ವಿಶ್ವಕಪ್​ನಲ್ಲಿ ಭಾರತ-ಶ್ರೀಲಂಕಾ ಫಿಕ್ಸಿಂಗ್ ಆರೋಪ; ಕ್ರಿಮಿನಲ್ ತನಿಖೆಗೆ ಲಂಕಾ ಸರ್ಕಾರ ಆದೇಶ

India vs Sri Lanka: 2011ರಲ್ಲಿ ಶ್ರೀಲಂಕಾ ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ಮಾಜಿ ನಾಯಕ ಅರವಿಂದ ಡಿ ಸಿಲ್ವಾ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಲಾಗಿದೆ.

news18-kannada
Updated:July 1, 2020, 9:02 AM IST
ವಿಶ್ವಕಪ್​ನಲ್ಲಿ ಭಾರತ-ಶ್ರೀಲಂಕಾ ಫಿಕ್ಸಿಂಗ್ ಆರೋಪ; ಕ್ರಿಮಿನಲ್ ತನಿಖೆಗೆ ಲಂಕಾ ಸರ್ಕಾರ ಆದೇಶ
ಭಾರತ-ಶ್ರೀಲಂಕಾ
  • Share this:
2011ರ ವಿಶ್ವಕಪ್​ ಫೈನಲ್​ನ ಭಾರತ ಹಾಗೂ ಶ್ರೀಲಂಕಾ ನಡುವಣ​ ಪಂದ್ಯದಲ್ಲಿ ಫಿಕ್ಸಿಂಗ್​ ನಡೆದಿದೆ ಎಂಬ ಆರೋಪವನ್ನು ಸೂಕ್ಷ್ಮವಾಗಿ ಪರಿಗಣಿಸಿರುವ ಶ್ರೀಲಂಕಾ ಸರ್ಕಾರ ಕ್ರಿಮಿನಲ್​ ತನಿಖೆ ನಡೆಸಲು ಆದೇಶಿಸಿದೆ. 2011ರಲ್ಲಿ ಏಕದಿನ ವಿಶ್ವಕಪ್ ಫೈನಲ್ ವೇಳೆ ಭಾರತ-ಶ್ರೀಲಂಕಾ ಮಧ್ಯೆ ಫಿಕ್ಸಿಂಗ್ ನಡೆದಿತ್ತು, ಶ್ರೀಲಂಕಾ ತಂಡ ಗೆಲುವನ್ನು ಮಾರಿಕೊಂಡಿತ್ತು ಎಂಬರ್ಥದಲ್ಲಿ ಲಂಕಾ ಕ್ರೀಡಾ ಸಚಿವ ಮಹಿಂದಾನಂದ ಅಲುತ್‌ಗಮಗೆ ಅವರು ಆರೋಪಿಸಿದ್ದರು. ಸದ್ಯ ಈ ಆರೋಪದ ಬಗ್ಗೆ ಗಂಭೀರ ತನಿಖೆ ನಡೆಸಲು ಶ್ರೀಲಂಕಾ ಮುಂದಾಗಿದೆ.

ಮಹಿಂದಾನಂದರ ಈ ಆರೋಪವನ್ನು ಶ್ರೀಲಂಕಾ ಮಾಜಿ ಆಟಗಾರರಾದ ಕುಮಾರ್ ಸಂಗಕ್ಕಾರ, ಮಹೇಲಾ ಜಯವರ್ಧನೆ ಅಲ್ಲಗೆಳೆದಿದ್ದರು. ಈ ಬಗ್ಗೆ ಸಾಕ್ಷ್ಯಾಧಾರಗಳು ಇದ್ದರೆ ತೋರಿಸಿ ಎಂದಿದ್ದರು. ಈ ನಡುವೆ 1996ರ ವಿಶ್ವಕಪ್​ ವಿಜೇತ ತಂಡದ ನಾಯಕ ಅರ್ಜುನ್​ ರಣತುಂಗಾ ಕೂಡ ವಿಶ್ವಕಪ್​ ಫೈನಲ್​ ಪಂದ್ಯದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು.

ವಿಶ್ವದಲ್ಲೇ ಅತಿ ಕಡಗಣನೆಗೆ ಒಳಗಾದ ಆಟಗಾರ ರಾಹುಲ್ ದ್ರಾವಿಡ್..!

ಬಳಿಕ ಪೊಲೀಸ್​ ವಿಚಾರಣೆಯಲ್ಲಿ ಮಹಿಂದಾನಂದ, ನಾನು ಫಿಕ್ಸ್ ಆಗಿತ್ತು ಅಂತ ಖಚಿತವಾಗಿ ಹೇಳುತ್ತಿಲ್ಲ. ಆದರೆ, ಮ್ಯಾಚ್​ ಫಿಕ್ಸ್​ ಆಗಿರಬಹುದೆಂಬ ಅನುಮಾನಗಳಿವೆ ಎಂದು ಉಲ್ಟಾ ಹೊಡೆದಿದ್ದರು. ಇದೀಗ ಆ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ಘಟಕಾದಿಂದ ಕ್ರಿಮಿನಲ್​ ವಿಚಾರಣೆ ಆರಂಭಿಸಲಾಗಿದೆ ಎಂದು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ಕೆಡಿಎಸ್ ರುವಾನಚಂದ್ರ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಸ್ಥಳೀಯ ಟಿವಿ ಚಾನೆಲ್ ಜೊತೆ ಮಾತನಾಡಿದ್ದ ಅಲುತ್‌ಗಮಗೆ, 2011ರ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ಮಧ್ಯೆ ಫಿಕ್ಸಿಂಗ್ ನಡೆದಿತ್ತು. 2011ರ ವಿಶ್ವಕಪ್ ಮಾರಾಟವಾಗಿತ್ತು. ನಾನು ಕ್ರೀಡಾ ಸಚಿನವಾಗಿದ್ದಾಗಲೇ ಇದನ್ನು ಹೇಳಿದ್ದೆ ಎಂದಿದ್ದರು. ಅಲುತ್‌ಗಮಗೆಯ ಈ ಹೇಳಿಕೆಯನ್ನು ಶ್ರೀಲಂಕಾ ಗಂಭೀರವಾಗಿ ಪರಿಗಣಿಸಿದೆ.

ಮಾಹಿ ಬರ್ತ್​ ಡೇಗೆ ಸ್ಪೆಷಲ್​ ಸಾಂಗ್​!; ​​​ವಿಂಡೀಸ್​​ ಆಟಗಾರನಿಂದ ಧೋನಿಗೆ ‘ನಂಬರ್​ 7‘ ಗಿಫ್ಟ್​​
ಇನ್ನು 2011ರಲ್ಲಿ ಶ್ರೀಲಂಕಾ ಆಯ್ಕೆ ಸಮಿತಿ ಮುಖ್ಯಸ್ಥ ಹಾಗೂ ಮಾಜಿ ನಾಯಕ ಅರವಿಂದ ಡಿ ಸಿಲ್ವಾ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ಜಾರಿ ಮಾಡಲಾಗಿದೆ. ಶ್ರೀಲಂಕಾದಲ್ಲಿ ಮ್ಯಾಚ್​ ಫಿಕ್ಸಿಂಗ್ ಪ್ರಕರಣಗಳನ್ನು ಕ್ರಿಮಿನಲ್​ ಅಪರಾಧ ಎಂದೇ ಪರಿಗಿಸಲಾಗುತ್ತದೆ. ಈ ಕಾನೂನು ತಂದ ಮೊದಲ ಕ್ರಿಕೆಟ್​ ರಾಷ್ಟ್ರ ಶ್ರೀಲಂಕಾ.
First published: July 1, 2020, 9:02 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading