Ajantha Mendis: ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ ಕೇರಂ ಬಾಲ್ ಸ್ಪೆಷಲಿಸ್ಟ್​​..!

ವೃತ್ತಿಜೀವನದ ಆರಂಭದಲ್ಲಿ ಅತ್ಯಂತ ಅಪಾಯಕಾರಿ ಅಂತರ್‌ರಾಷ್ಟ್ರೀಯ ಬೌಲರ್ ಎಂದು ಪರಿಗಣಿಸಲ್ಪಟ್ಟಿದ್ದ ಮೆಂಡಿಸ್ ಬಳಿಕ ಇಂಜುರಿಗೆ ತುತ್ತಾದರು. ನಂತರ ಶ್ರೀಲಂಕಾ ತಂಡಕ್ಕೆ ಕಮ್​ಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ.

ಅಜಂತಾ ಮೆಂಡಿಸ್

ಅಜಂತಾ ಮೆಂಡಿಸ್

  • Share this:
ಬೆಂಗಳೂರು (ಆ. 29): ಕೇರಂ ಬಾಲ್ ಮೂಲಕ ಕ್ರಿಕೆಟ್ ಲೋಕವನ್ನೇ ತನ್ನತ್ತ ಸೆಳೆದಿದ್ದ ಶ್ರೀಲಂಕಾ ಕ್ರಿಕೆಟ್ ಕಂಡ ಅತ್ಯದ್ಭುತ ಸ್ಪಿನ್ನರ್ ಅಜಂತಾ ಮೆಂಡಿಸ್​ ಎಲ್ಲಾ ಆವೃತ್ತಿಯ ಕ್ರಿಕೆಟ್​ಗೂ ವಿದಾಯ ಹೇಳಿದ್ದಾರೆ.

34 ವರ್ಷದ ಮೆಂಡಿಸ್ ನ್ಯೂಜಿಲೆಂಡ್ ವಿರುದ್ಧ 2015 ರಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. 2008ರ ಏಪ್ರಿಲ್​​​ನಲ್ಲಿ ವಿಂಡೀಸ್ ವಿರುದ್ಧ 39 ರನ್​ ನೀಡಿ 3 ವಿಕೆಟ್​ ಪಡೆದು ಇವರು ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು.

ಈ ಮೂಲಕ ವಿಶ್ವ ಕ್ರಿಕೆಟ್‌ಗೆ ಕೇರಂ ಬಾಲ್ ಎಸೆತವನ್ನು ಪರಿಚಯಿಸಿದ್ದ ಅಜಂತ ಮೆಂಡಿಸ್ ಓರ್ವ ಅಪೂರ್ವ ಕ್ರಿಕೆಟಿಗನಾಗಿದ್ದರು. ಒಟ್ಟು 87 ಏಕದಿನ ಪಂದ್ಯಗಳನ್ನು ಆಡಿದ ಮೆಂಡಿಸ್ 152 ವಿಕೆಟ್​​, 39 ಟಿ-20ಯಲ್ಲಿ 66 ವಿಕೆಟ್​ ಹಾಗೂ 19 ಟೆಸ್ಟ್​ ಪಂದ್ಯದಲ್ಲಿ 70 ವಿಕೆಟ್​​​ ಪಡೆದ ಸಾಧನೆ ಮಾಡಿದ್ದಾರೆ.

ಟ್ವಿಟ್ಟರ್​ನಲ್ಲಿ ಫೋಟೋ ಹಂಚಿಕೊಂಡು ಈ ಪಾಟಿ ಟ್ರೋಲ್ ಆದ ರವಿಶಾಸ್ತ್ರಿ

 



ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ ಅತ್ಯಂತ ವೇಗವಾಗಿ 50 ವಿಕೆಟ್‌ಗಳನ್ನು ಪೂರೈಸಿದ ಸಾಧನೆ ಮಾಡುವ ಜೊತೆಗೆ ಮೆಂಡಿಸ್ ಟಿ-20 ಕ್ರಿಕೆಟ್‌ನಲ್ಲಿ ಎರಡು ಬಾರಿ 6 ವಿಕೆಟ್ ಗೊಂಚಲು ಪಡೆದಿರುವ ಏಕೈಕ ಬೌಲರ್ ಆಗಿದ್ದಾರೆ.

ವೃತ್ತಿಜೀವನದ ಆರಂಭದಲ್ಲಿ ಅತ್ಯಂತ ಅಪಾಯಕಾರಿ ಅಂತರ್‌ರಾಷ್ಟ್ರೀಯ ಬೌಲರ್ ಎಂದು ಪರಿಗಣಿಸಲ್ಪಟ್ಟಿದ್ದ ಮೆಂಡಿಸ್ ಬಳಿಕ ಇಂಜುರಿಗೆ ತುತ್ತಾದರು. ನಂತರ ಶ್ರೀಲಂಕಾ ತಂಡಕ್ಕೆ ಕಮ್​ಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ.

 



First published: