• Home
  • »
  • News
  • »
  • sports
  • »
  • Chamika Karunaratne: ಕ್ಯಾಚ್ ಹಿಡಿಯೋ ವೇಳೆ ಎಡವಟ್ಟು; ನಾಲ್ಕು ಹಲ್ಲುಗಳನ್ನು ಕಳೆದುಕೊಂಡ ಶ್ರೀಲಂಕಾ ಕ್ರಿಕೆಟಿಗ

Chamika Karunaratne: ಕ್ಯಾಚ್ ಹಿಡಿಯೋ ವೇಳೆ ಎಡವಟ್ಟು; ನಾಲ್ಕು ಹಲ್ಲುಗಳನ್ನು ಕಳೆದುಕೊಂಡ ಶ್ರೀಲಂಕಾ ಕ್ರಿಕೆಟಿಗ

ಚಾಮಿಕ ಕರುಣರತ್ನೆ

ಚಾಮಿಕ ಕರುಣರತ್ನೆ

ಕ್ಯಾಚ್ ಹಿಡಿಯೋ ವೇಳೆ ಚೆಂಡು ನೇರವಾಗಿ ಅವರ ಮುಖಕ್ಕೆ ಬಡಿದಿತ್ತು. ಚೆಂಡು ಬಡಿದ ರಭಸಕ್ಕೆ ಕರುಣರತ್ನೆ ಅವರ ಒಂದು ಹಲ್ಲು ಆನ್​ಫೀಲ್ಡ್​ನಲ್ಲೇ ಮುರಿದಿತ್ತು

  • Share this:

ಯಾವುದೇ ಆದ್ರು ಪ್ಲೇಯರ್ಸ್ ಗಾಯಗೊಳ್ಳುವುದು ಸಾಮಾನ್ಯ ಸಂಗತಿ. ಕ್ರಿಕೆಟ್ ಆಟದಲ್ಲಂತೂ ಫೀಲ್ಡರ್​ಗಳು ಕ್ಯಾಚ್ ಹಿಡಿಯೋ ವೇಳೆ ಆಗಾಗ ಗಾಯಗೊಳ್ತಾ (Freak Injury) ಇರ್ತಾರೆ. ಇಂತಹದ್ದೇ ಘಟನೆಯೊಂದು ಲಂಕಾ ಪ್ರೀಮಿಯರ್ ಲೀಗ್ (Lanka Premier League) ಸಂದರ್ಭದಲ್ಲಿ ನಡೆದಿದೆ. ಶ್ರೀಲಂಕಾ ಕ್ರಿಕೆಟಿಗ ಚಮಿಕ ಕರುಣರತ್ನೆ (Chamika Karunaratne) ಕ್ಯಾಚ್  ಹಿಡಿಯೋ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ನಡೆದ ಲೀಗ್ ಪಂದ್ಯದಲ್ಲಿ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರೋ ಕರುಣರತ್ನೆ ತಮ್ಮ ನಾಲ್ಕು ಹಲ್ಲುಗಳನ್ನು ಕಳೆದುಕೊಂಡಿದ್ದಾರೆ. ತಮ್ಮ ಆರೋಗ್ಯದ ಸ್ಥಿತಿ ಕುರಿತಂತೆ ಮಾಹಿತಿ ಹಂಚಿಕೊಂಡಿರೋ ಕರುಣರತ್ನೆ, ಮೂವತ್ತು ಹೊಲಿಗೆ ಹಾಕಿದ್ದಾರೆ, ಆದ್ರೆ ಸ್ವಲ್ಪ ನಗಲು ಸಾಧ್ಯವಾಗುತ್ತಿದೆ ಎಂದು ತಿಳಿಸಿ ಸೆಲ್ಫಿ ಫೋಟೋ ಹಂಚಿಕೊಂಡಿದ್ದಾರೆ.


ಚೆಂಡು ಬಡಿದ ರಭಸಕ್ಕೆ ಕರುಣರತ್ನೆ ಮುಖದಿಂದ ಚಿಮ್ಮಿದ ರಕ್ತ


26 ವರ್ಷದ ಕರುಣರತ್ನೆ ಎಲ್​​ಪಿಎಲ್​ನಲ್ಲಿ ಕ್ಯಾಂಡಿ ಫಾಲ್ಕನ್ಸ್ ತಂಡದ ಪರ ಆಡುತ್ತಿದ್ದಾರೆ. ಗಾಲೆ ಗ್ಲಾಡಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ನುವಾನಿಡು ಫೆರ್ನಾಂಡೋ ಬ್ಯಾಟ್​​ನಿಂದ ಸಿಡಿದ ಚೆಂಡು ಗಾಳಿಯಲ್ಲಿ ಚಿಮ್ಮಿತ್ತು, ಈ ಚೆಂಡನ್ನು ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ಕರುಣರತ್ನೆ ಎಡವಿದ್ದರು.


ಹಿಮ್ಮುಖವಾಗಿ ಓಡುತ್ತಾ ಕ್ಯಾಚ್​ ಹಿಡಿದಿದ್ದರು, ಈ ವೇಳೆ ತಂಡದ ಇತರೆ ಆಟಗಾರರು ಸಂತಸದಿಂದ ಅಭಿನಂದಿಸಲು ಮುಂದಾದ ವೇಳೆ ಕರುಣರತ್ನೆ, ಅವರನ್ನು ದೂರ ಇರುವಂತೆ ಸನ್ನೆ ಮಾಡಿದ್ದರು.ಇದನ್ನೂ ಓದಿ: IND vs AUS 2023: 5 ವರ್ಷಗಳ ನಂತರ ದೆಹಲಿಯಲ್ಲಿ ಟೆಸ್ಟ್ ಪಂದ್ಯ, ಬಾರ್ಡರ್ ಗವಾಸ್ಕರ್ ಟ್ರೋಫಿಯ ಸಂಪೂರ್ಣ ವೇಳಾಪಟ್ಟಿ


ಆಸ್ಪತ್ರೆಯಲ್ಲಿ ಮೂರು ಹಲ್ಲುಗಳನ್ನು ತೆಗೆದ ವೈದ್ಯರು


ಕ್ಯಾಚ್ ಹಿಡಿಯೋ ವೇಳೆ ಚೆಂಡು ನೇರವಾಗಿ ಅವರ ಮುಖಕ್ಕೆ ಬಡಿದಿತ್ತು. ಚೆಂಡು ಬಡಿದ ರಭಸಕ್ಕೆ ಕರುಣರತ್ನೆ ಅವರ ಒಂದು ಹಲ್ಲು ಆನ್​ಫೀಲ್ಡ್​ನಲ್ಲೇ ಮುರಿದಿತ್ತು. ಇದರೊಂದಿಗೆ ರಕ್ತಸ್ರಾವ ಕೂಡ ಆಗಿತ್ತು. ಕೂಡಲೇ ಅವರನ್ನು ಗಾಲೆಯ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಕರುಣರತ್ನೆಗೆ ಚಿಕಿತ್ಸೆ ನೀಡಿದ ವೈದ್ಯರು ಅಲ್ಲಿ ಅವರಿಗೆ ಮತ್ತೆ ಮೂರು ಹಲ್ಲುಗಳನ್ನು ತೆಗೆದು ಹಾಕಿದ್ದಾರೆ.


ಉಳಿದಂತೆ ಅವರು ಆರೋಗ್ಯವಾಗಿದ್ದಾರೆ, ಅಲ್ಪವಿಶ್ರಾಂತಿಯ ಬಳಿಕ ಅವರು ಮುಂದಿನ ಸ್ಟೇಜ್ ಪಂದ್ಯಗಳಿಗೆ ಲಭ್ಯರಾಗುತ್ತಾರೆ ಎಂದು ಕ್ಯಾಂಡಿ ಫಾಲ್ಕನ್ ಫ್ರಾಂಚೈಸಿಗಳು ತಿಳಿಸಿದ್ದಾರೆ. ಇನ್ನು, ಈ ಪಂದ್ಯದಲ್ಲಿ ಕ್ಯಾಂಡಿ ಫಾಲ್ಕನ್ ತಂಡ ಎದುರಾಳಿ ತಂಡದ ವಿರುದ್ಧ 5 ವಿಕೆಟ್​ಗಳ ಅಂತರದೊಂದಿಗೆ ಗೆಲುವು ಪಡೆದುಕೊಂಡಿದೆ.


ಇದನ್ನೂ ಓದಿ: Rohit Sharma: ಏಕದಿನ ವಿಶ್ವಕಪ್​ಗೂ ಮುನ್ನ ಸಂಕಷ್ಟದಲ್ಲಿ ರೋಹಿತ್, ಬದಲಾಗುತ್ತಾ ಟೀಂ ಇಂಡಿಯಾ ನಾಯಕತ್ವ?


ದಾಸುನ್ ಶನಕ ನಾಯಕತ್ವದ ಕೀ ಪ್ಲೇಯರ್


ಘಟನೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ವಿಡಿಯೋದಲ್ಲಿ ಕರುಣರತ್ನೆ ಅವರಿಗೆ ರಕ್ತಸ್ತಾವ ಆಗ್ತಿರೋದು ಕಾಣಬಹುದಾಗಿದೆ. 26 ವರ್ಷದ ಯುವ ಆಟಗಾರ ಶ್ರೀಲಂಕಾ ತಂಡದ ಪರ ಒಂದು ಟೆಸ್ಟ್, 18 ಏಕದಿನ ಹಾಗೂ 38 ಟಿ20 ಮಾದರಿ ಪಂದ್ಯಗಳನ್ನು ಆಡಿದ್ದಾರೆ. ದಾಸುನ್ ಶನಕ ನಾಯಕತ್ವದ ತಂಡದಲ್ಲಿ ಕರುಣರತ್ನೆ ಪ್ರಮುಖ ಕೀ ಪ್ಲೇಯರ್ ಆಗಿದ್ದರು.
ಗಾಯಗೊಂಡು ಆನ್​ಫೀಲ್ಡ್​ನಿಂದ ಹೊರ ಬಂದ ಬಳಿಕ ಅಭಿಮಾನಿಗಳಿಗೆ ಸೆಲ್ಫಿ ಫೋಟೋ ಮೂಲಕ ಪ್ರತಿಕ್ರಿಯೆ ನೀಡಿರುವ ಸ್ಟಾರ್ ವೇಗಿ, ನಾಲ್ಕು ಹಲ್ಲುಗಳನ್ನು ಕಳೆದುಕೊಂಡು ಮತ್ತೆ ಪಡೆದುಕೊಂಡಿದ್ದೇನೆ. ವೈದ್ಯರು 30 ಹೊಲಿಗೆ ಹಾಕಿದ್ದು, ಆದರೂ ಸ್ವಲ್ಪ ಸ್ಮೈಲ್ ಮಾಡಲು ಆಗ್ತಿದೆ. ಮತ್ತೆ ಸ್ಟ್ರಾಂಗ್ ಆಗಿ ಕಮ್​​ಬ್ಯಾಕ್ ಮಾಡ್ತೀನಿ, ಶೀಘ್ರವೇ ಭೇಟಿ ಆಗೋಣ ಎಂದು ಬರೆದುಕೊಂಡಿದ್ದಾರೆ.


ಕ್ಯಾಚ್ ಹಿಡಿಯೋ ವೇಳೆ ಮುಖಕ್ಕೆ ಚೆಂಡು ಬಡಿದರೂ ಕೂಡ ಕರುಣರತ್ನೆ ಕ್ಯಾಚ್ ಪೂರ್ಣಗೊಳಿಸಿದ್ದರು. ಕ್ಯಾಂಡಿ ಫಾಲ್ಕನ್ಸ್ ಹಾಗೂ ಗಾಲೆ ಗ್ಲಾಡಿಯರ್ಸ್ ನಡುವಿನ ಪಂದ್ಯದ, ಇನ್ನಿಂಗ್ಸ್​​ನ 4ನೇ ಓವರ್​​ ಮೊದಲ ಎಸೆತದಲ್ಲಿ ಘಟನೆ ನಡೆದಿತ್ತು.

Published by:Sumanth SN
First published: