Sri lanka: ಮೂವರು ಲಂಕಾ ಕ್ರಿಕೆಟಿಗರಿಗೆ ಒಂದು ವರ್ಷ ನಿಷೇಧ

ಶ್ರೀಲಂಕಾ ತಂಡದ ಪ್ರಸ್ತುತ ಪ್ರದರ್ಶನದ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದ್ದು, ಕಳೆದ ಒಂದು ವರ್ಷದಿಂದ ಶ್ರೀಲಂಕಾ ಸತತ ಐದು ಟಿ20 ಸರಣಿಗಳನ್ನು ಸೋತಿದೆ.

Sri Lanka

Sri Lanka

  • Share this:
    ಇಂಗ್ಲೆಂಡ್‌ನಲ್ಲಿ ಬಯೋ-ಬಬಲ್ ಉಲ್ಲಂಘನೆ ಮಾಡಿದ್ದ ಶ್ರೀಲಂಕಾ ತಂಡದ ದನುಷ್ಕ ಗುಣತಿಲಕೆ, ಕುಸಾಲ್‌ ಮೆಂಡಿಸ್‌ ಹಾಗೂ ನಿರೋಶನ್‌ ಡಿಕ್ವೆಲ್‌ ಅವರಿಗೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಒಂದು ವರ್ಷದವರೆಗೆ ನಿಷೇಧ ಹೇರಿದೆ ಎಂದು ವರದಿಯಾಗಿದೆ. ಅದರಂತೆ ಈ ಆಟಗಾರರು ಇನ್ನು ಒಂದು ವರ್ಷಗಳ ಕಾಲ ರಾಷ್ಟ್ರೀಯ ತಂಡಗಳ ಆಯ್ಕೆಗೆ ಲಭ್ಯರಿರುವುದಿಲ್ಲ. ಈಗಾಗಲೇ ಸತತ ಸೋಲಿನಿಂದ ಕಂಗೆಟ್ಟಿರುವ ಲಂಕಾ ತಂಡಕ್ಕೆ ಇದೀಗ ಮೂವರ ನಿಷೇಧ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಏಕೆಂದರೆ ಶ್ರೀಲಂಕಾ ತಂಡ ಟಿ20 ವಿಶ್ವಕಪ್ ಅರ್ಹತಾ ಪಂದ್ಯವನ್ನು ಆಡಬೇಕಿದ್ದು, ಇದಕ್ಕೂ ಮುನ್ನ ತಂಡದಲ್ಲಿದ್ದ ಮೂವರು ಸ್ಟಾರ್ ಆಟಗಾರರು ಹೊರಬಿದ್ದಿದ್ದಾರೆ.

    ಇಂಗ್ಲೆಂಡ್‌ ವಿರುದ್ದದ ಟಿ20 ಸರಣಿಯನ್ನು 3-0 ಅಂತರದಲ್ಲಿ ಶ್ರೀಲಂಕಾ ಸೋತ ಬಳಿಕ ತಂಡದ ಪ್ರದರ್ಶನ ಬಗ್ಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈ ಸರಣಿಯ ಸೋಲಿನ ಬಳಿಕ ಲಂಕಾ ಆಟಗಾರರಾದ ದನುಷ್ಕ ಗುಣತಿಲಕೆ, ನಿರೋಶನ್‌ ಡಿಕ್ವೆಲ್‌ ಹಾಗೂ ಕುಸಾಲ್‌ ಮೆಂಡಿಸ್‌ ಅವರು ಬಯೋ-ಬಬಲ್‌ ಉಲ್ಲಂಘನೆ ಮಾಡಿ ಡರ್ಹಾನ್‌ ಪ್ರದೇಶದಲ್ಲಿ ನೈಟ್ ಔಟ್​ಗೆ ತೆರಳಿದ್ದರು.

    ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಈ ಮೂವರನ್ನು ಏಕದಿನ ತಂಡದಿಂದ ಅಮಾನತುಗೊಳಿಸಿ ಲಂಕಾಗೆ ವಾಪಸ್ ಕರೆಸಿಕೊಂಡಿತ್ತು. ಇದೀಗ ಈ ಬಗ್ಗೆ ತನಿಖೆ ನಡೆಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿರೋಶನ್‌ ಡಿಕ್ವೆಲ್‌, ದುನುಷ್ಕ ಗುಣತಿಲಕೆ ಹಾಗೂ ಕುಸಾಲ್‌ ಮೆಂಡಿಸ್‌ ಅವರನ್ನು ಒಂದು ವರ್ಷ ಬ್ಯಾನ್ ಮಾಡಿದ್ದಾರೆ.



    ಇನ್ನು ಶ್ರೀಲಂಕಾ ತಂಡದ ಪ್ರಸ್ತುತ ಪ್ರದರ್ಶನದ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿದ್ದು, ಕಳೆದ ಒಂದು ವರ್ಷದಿಂದ ಶ್ರೀಲಂಕಾ ಸತತ ಐದು ಟಿ20 ಸರಣಿಗಳನ್ನು ಸೋತಿದೆ. ತಂಡದ ಕಳಪೆ ಪ್ರದರ್ಶನದ ಬಗ್ಗೆ ಮಾಜಿ ಆಟಗಾರರಾದ ಸನತ್‌ ಜಯಸೂರ್ಯ, ಮುತ್ತಯ್ಯ ಮುರಳಿಧರನ್‌, ರೋಷನ್‌ ಮಹನಾಮ, ಹಾಗೂ ತಿಲಕರತ್ನೆ ದಿಲ್ಶಾನ್ ಬೇಸರ ವ್ಯಕ್ತಪಡಿಸಿದ್ದಾರೆ.
    Published by:zahir
    First published: