ಪಾಕ್ ನೆಲದಲ್ಲಿ ಸಿಂಹಳೀಯರ ಮೆರೆದಾಟ; ಸರಣಿ ಕ್ಲೀನ್​ಸ್ವೀಪ್ ಮಾಡಿ ಇತಿಹಾಸ ಸೃಷ್ಟಿಸಿದ ಲಂಕಾನ್ನರು

ಲಂಕಾ ತಂಡದ ಖಾಯಂ ಟಿ-20 ನಾಯಕ ಲಸಿತ್ ಮಾಲಿಂಗ, ದಿಮುತ್ ಕರುಣರತ್ನೆ, ಆ್ಯಂಜಲೊ ಮ್ಯಾಥ್ಯೂಸ್​ರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಅವರದೇ ನೆಲದಲ್ಲಿ ಡಸನ್ ಶನಕ ಪಡೆ ಪಾಕ್​ಗೆ ಸೋಲುಣಿಸಿದೆ.

Vinay Bhat | news18-kannada
Updated:October 10, 2019, 8:23 AM IST
ಪಾಕ್ ನೆಲದಲ್ಲಿ ಸಿಂಹಳೀಯರ ಮೆರೆದಾಟ; ಸರಣಿ ಕ್ಲೀನ್​ಸ್ವೀಪ್ ಮಾಡಿ ಇತಿಹಾಸ ಸೃಷ್ಟಿಸಿದ ಲಂಕಾನ್ನರು
ಲಂಕಾ ತಂಡದ ಖಾಯಂ ಟಿ-20 ನಾಯಕ ಲಸಿತ್ ಮಾಲಿಂಗ, ದಿಮುತ್ ಕರುಣರತ್ನೆ, ಆ್ಯಂಜಲೊ ಮ್ಯಾಥ್ಯೂಸ್​ರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಅವರದೇ ನೆಲದಲ್ಲಿ ಡಸನ್ ಶನಕ ಪಡೆ ಪಾಕ್​ಗೆ ಸೋಲುಣಿಸಿದೆ.
  • Share this:
ಬೆಂಗಳೂರು (ಅ. 10): ಪಾಕಿಸ್ತಾನ ಪ್ರವಾಸ ಬೆಳೆಸಿದ್ದ ಶ್ರೀಲಂಕಾ ಕ್ರಿಕೆಟ್ ತಂಡ ಏಕದಿನ ಸರಣಿಯನ್ನು ಕೈಚೆಲ್ಲಿತ್ತು. ಆದರೆ, ಟಿ-20 ಸರಣಿಯನ್ನು ವೈಟ್​ವಾಶ್ ಮಾಡುವ ಮೂಲಕ ನಂಬರ್ ಓನ್ ಟಿ-20 ಟೀಂ ಸರ್ಫರಾಜ್ ಪಡೆಗೆ ಶಾಕ್ ನೀಡಿದೆ.

ನಿನ್ನೆ ನಡೆದ ಅಂತಿಮ ಮೂರನೇ ಟಿ-20 ಪಂದ್ಯದಲ್ಲಿ ಬೌಲರ್​ಗಳ ಸಂಘಟಿತ ಹೋರಾಟ ಫಲವಾಗಿ ಶ್ರೀಲಂಕಾ 13 ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ 3-0 ಯಿಂದ ಸರಣಿ ಕೈವಶ ಮಾಡಿ ಇತಿಹಾಸ ಸೃಷ್ಟಿಸಿದೆ.

ಪಾಕಿಸ್ತಾನ ತಂಡವನ್ನು ಅವರದೇ ನೆಲದಲ್ಲಿ ಟಿ-20 ಸರಣಿಯ ಎಲ್ಲಾ ಪಂದ್ಯಗಳಲ್ಲಿ ಸೋಲಿಸಿದ ಮೊದಲ ತಂಡ ಶ್ರೀಲಂಕಾ ಎನಿಸಿಕೊಂಡಿದೆ. ಅದುಕೂಡ ಪ್ರಮುಖ ಸ್ಟಾರ್ ಆಟಗಾರರ ವೈಫಲ್ಯದಲ್ಲಿ ಎಂಬುದು ವಿಶೇಷ.

 


ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಉತ್ತಮ ಆರಂಭ ಪಡೆದುಕೊಂಡಿಲ್ಲವಾದರು ತಂಡದ ಪರ ಏಕಾಂಗಿ ಹೋರಾಟ ನಡೆಸಿದ್ದು ಓಶಾಡ ಫೆರ್ನಾಂಡೊ. ಪಾಕ್ ಬೌಲರ್​ಗಳನ್ನು ಕಾಡಿದ ಫೆರ್ನಾಂಡೊ ಅತ್ಯುತ್ತಮ ಆಟ ಪ್ರದರ್ಶಿಸಿದರು. 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ ಫೆರ್ನಾಂಡೊ ಅಜೇಯ 78 ರನ್ ಬಾರಿಸಿದರು.

VIDEO: ವಿಂಡೀಸ್ ಆಟಗಾರರ ನಡುವೆ ತಾರಕ್ಕೇರಿದ ಜಗಳ: ಅಂಪೈರ್ ಮಧ್ಯ ಪ್ರವೇಶಿಸದಿದ್ದರೆ..!

ಫೆರ್ನಾಂಡೊ ಇಷ್ಟು ರನ್ ಸಿಡಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ 15ರ ಗಡಿ ದಾಟಲಿಲ್ಲ. 20 ಓವರ್​​ಗೆ ಶ್ರೀಲಂಕಾ 7 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿತು. ಪಾಕ್ ಪರ ಮೊಹಮ್ಮದ್ ಅಮೀರ್ 3 ವಿಕೆಟ್ ಕಿತ್ತರೆ, ಇಮಾದ್ ವಾಸಿಮ್ ಹಾಗೂ ವಹಾಬ್ ರಿಯಾಝ್ 1 ವಿಕೆಟ್ ಪಡೆದರು.

148 ರನ್​ಗಳ ಸಾಧಾರಣ ಟಾರ್ಗೆಟ್ ಬೆನ್ನಟ್ಟಿದ ಪಾಕಿಸ್ತಾನ ಮೊದಲ ಓವರ್​ನ ಮೊದಲ ಎಸೆತದಲ್ಲೇ ಫಖರ್ ಜಮಾನ್ ವಿಕೆಟ್ ಕಳೆದುಕೊಂಡಿತು. ಆದರೆ, 2ನೇ ವಿಕೆಟ್​ಗೆ ಬಾಬರ್ ಅಜಮ್ ಹಾಗೂ ಹ್ಯಾರಿಸ್ ಸೊಹೈಲ್ ಉತ್ತಮ ಜೊತೆಯಾಟ ಆಡಿದರು. ಗೆಲುವಿಗಾಗಿ ಕಠಿಣ ಹೋರಾಟ ನಡೆಸಿದರು.

 ಅದರಂತೆ ಈ ಜೋಡಿ ಖಾತೆಯಿಂದ 76 ರನ್​ಗಳ ಜೊತೆಯಾಟ ಮೂಡಿಬಂತು. ಬಾಬರ್ 32 ಎಸೆತಗಳಲ್ಲಿ 27 ರನ್ ಗಳಿಸಿ ಔಟ್ ಆದರೆ, ಸೊಹೈಲ್ 50 ಎಸೆತಗಳಲ್ಲಿ 52 ರನ್ ಬಾರಿಸಿದರು. ನಂತರ ದಿಢೀರ್ ಕುಸಿತ ಕಂಡ ಪಾಕಿಸ್ತಾನಕ್ಕೆ ಮೇಲೇಳಲು ಲಂಕಾನ್ನರು ಅವಕಾಶ ಮಾಡಿಕೊಡಲಿಲ್ಲ. 20 ಓವರ್​​ಗೆ 6 ವಿಕೆಟ್ ಕಳೆದುಕೊಂಡು 134 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಗೊಂಡಿತು.

ಲಂಕಾ ಪರ ಹಸರಂಗ 3 ವಿಕೆಟ್ ಕಿತ್ತರೆ, ಲಹಿರು ಕುಮಾರ್ 2 ಹಾಗೂ ಕಸುನ್ ರಜಿತಾ 1 ವಿಕೆಟ್ ಪಡೆದರು.

13 ರನ್​ಗಳ ಭರ್ಜರಿ ಗೆಲುವಿನೊಂದಿಗೆ ಶ್ರೀಲಂಕಾ ಪಾಕಿಸ್ತಾನ ನೆಲದಲ್ಲಿ ನೂತನ ಸಾಧನೆ ಮಾಡಿತು. ಅಲ್ಲದೆ ಲಂಕಾ ತಂಡದ ಖಾಯಂ ಟಿ-20 ನಾಯಕ ಲಸಿತ್ ಮಾಲಿಂಗ, ದಿಮುತ್ ಕರುಣರತ್ನೆ, ಆ್ಯಂಜಲೊ ಮ್ಯಾಥ್ಯೂಸ್​ರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಅವರದೇ ನೆಲದಲ್ಲಿ ಡಸನ್ ಶನಕ ಪಡೆ ಪಾಕ್​ಗೆ ಸೋಲುಣಿಸಿದೆ.

ಟೂರ್ನಿಯಿದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ವನಿಂದು ಹಸರಂಗ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಬಾಜಿಕೊಂಡರು.

 

First published:October 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading