IPL 2019, SRH vs CSK: ಇಂದು ಬಲಿಷ್ಠ ಚೆನ್ನೈಗೆ ಹೈದರಾಬಾದ್ ಸವಾಲು

ಬ್ಯಾಟಿಂಗ್​ನಲ್ಲಿ ಶೇನ್ ವಾಟ್ಸನ್​ರಿಂದ ಉತ್ತಮ ಪ್ರದರ್ಶನ ಕಂಡು ಬರದಿದ್ದರೂ, ಫಫ್ ಡು ಪ್ಲೆಸಿಸ್ ಅದ್ಭುತ ಫಾರ್ಮ್​ನಲ್ಲಿದ್ದಾರೆ.

zahir | news18
Updated:April 17, 2019, 2:50 PM IST
IPL 2019, SRH vs CSK: ಇಂದು ಬಲಿಷ್ಠ ಚೆನ್ನೈಗೆ ಹೈದರಾಬಾದ್ ಸವಾಲು
@IPL
zahir | news18
Updated: April 17, 2019, 2:50 PM IST
ಹೈದರಾಬಾದ್​ನ ರಾಜೀವ್​ ಗಾಂಧಿ ಸ್ಟೇಡಿಯಂನಲ್ಲಿ ಇಂದು ನಡೆಯಲಿರುವ ಐಪಿಎಲ್​ನ 33ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಮುಖಾಮುಖಿಯಾಗುತ್ತಿದೆ. ಈ ಆವೃತ್ತಿಯಲ್ಲಿ ಉಭಯ ತಂಡಗಳು ಇದೇ ಮೊದಲ ಬಾರಿಗೆ ಎದುರುಗೊಳ್ಳುತ್ತಿದ್ದು, ಹೀಗಾಗಿ ಈ ಪಂದ್ಯದಲ್ಲಿ ಪ್ರಬಲ ಪೈಪೋಟಿ ಕಂಡು ಬರುವ ನಿರೀಕ್ಷೆಯಿದೆ.

ಈ ಆವೃತ್ತಿಯನ್ನು ಉತ್ತಮವಾಗಿಯೇ ಆರಂಭಿಸಿದ್ದ ಹೈದರಾಬಾದ್ ಇದೀಗ ಸತತ 3 ಸೋಲಿನೊಂದಿಗೆ 6ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಹಾಲಿ ಚಾಂಪಿಯನ್ ಸೂಪರ್ ಕಿಂಗ್ಸ್​ ಜಯದ ನಾಗಾಲೋಟವನ್ನು ಮುಂದುವರೆಸಿದ್ದು, ಈ ಪಂದ್ಯದಲ್ಲೂ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲು ಯೋಜನೆ ಹಾಕಿಕೊಂಡಿದೆ.

ತವರಿನಲ್ಲಿ ನಡೆದ ಕಳೆದೆರಡು ಪಂದ್ಯಗಳಲ್ಲಿ ಹೀನಾಯ ಸೋಲುಂಡಿದ್ದ ಹೈದರಾಬಾದ್​ಗೆ ಮತ್ತೊಮ್ಮೆ ಇದೇ ಅಂಗಳದಲ್ಲಿ ಅಗ್ನಿ ಪರೀಕ್ಷೆ ಎದುರಾಗಿದ್ದು, ಮಹೀ ಪಡೆಯನ್ನು ಮಣಿಸುವುದು ಸುಲಭವಲ್ಲ ಎಂಬುದು ಗೊತ್ತಿದೆ. ಹೀಗಾಗಿ ಕಳಪೆ ಫಾರ್ಮ್​ನಲ್ಲಿರುವ ಆಟಾಗರರನ್ನು ಕೈ ಬಿಟ್ಟು, ಸನ್​ರೈಸರ್ಸ್ ತಂಡ ​ಬೆಂಚು ಕಾಯುತ್ತಿದ್ದ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆಯಿದೆ.

ಈ ಬಾರಿಯ ಐಪಿಎಲ್​ನ ಅತ್ಯುತ್ತಮ ಆರಂಭಿಕ ಜೋಡಿ ಎಂದು ಗುರುತಿಸಿಕೊಂಡಿರುವ ವಾರ್ನರ್-ಬೇರ್​ಸ್ಟೊ ಸನ್​ರೈಸರ್ಸ್​ ತಂಡದ ಪ್ಲಸ್​ ಪಾಯಿಂಟ್. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳ ವಿಫಲತೆಯೇ ಕೇನ್ ವಿಲಿಯಮ್ಸನ್ ಪಡೆಗೆ ಮುಳುವಾಗುತ್ತಿದೆ. ಬೌಲಿಂಗ್ ವಿಭಾಗದಲ್ಲಿ ರಶೀದ್ ಖಾನ್, ಭುವನೇಶ್ವರ್​ ಕುಮಾರ್​ರಂತಹ ಅತಿರಥರು ಇದ್ದರೂ ಪಂದ್ಯವನ್ನು ಗೆಲ್ಲಿಸಿಕೊಡುವಲ್ಲಿ ವಿಫವಾಗುತ್ತಿರುವುದು ಹೈದರಾಬಾದ್​ ಚಿಂತೆಗೆ ಕಾರಣವಾಗಿದೆ. ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಮೊಹಮ್ಮದ್ ನಬಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದ್ದು, ಈ ಮೂಲಕ ಆಲ್​ರೌಂಡರ್ ಕೊರತೆಯನ್ನು ನೀಗಿಸುವ ವಿಶ್ವಾಸದಲ್ಲಿದೆ ಸನ್​ರೈಸರ್ಸ್.

ಇನ್ನು ಹಿರಿಯರನ್ನೇ ನೆಚ್ಚಿಕೊಂಡಿರುವ ಚೆನ್ನೈ ಸೂಪರ್​ ಕಿಂಗ್ಸ್ ಅನುಭವಕ್ಕೆ ತಕ್ಕಂತೆ ಪ್ರದರ್ಶನ ನೀಡುತ್ತಿದ್ದು, ಪ್ರತಿ ಪಂದ್ಯದಲ್ಲೂ ಧೋನಿಯ ಲೆಕ್ಕಾಚಾರನ್ನು ಹಿರಿಯ ಆಟಗಾರರು ಸರಿದೂಗಿಸುತ್ತಿದ್ದಾರೆ. ಅದರಲ್ಲೂ ಇಮ್ರಾನ್ ತಾಹಿರ್, ಹರ್ಭಜನ್ ಸಿಂಗ್ ಹಾಗೂ ರವೀಂದ್ರ ಜಡೇಜ ಬೌಲಿಂಗ್ ವಿಭಾಗವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದು ಸಿಎಸ್​ಕೆ ಗೆಲುವಿನ ಓಟದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.

ಬ್ಯಾಟಿಂಗ್​ನಲ್ಲಿ ಶೇನ್ ವಾಟ್ಸನ್​ರಿಂದ ಉತ್ತಮ ಪ್ರದರ್ಶನ ಕಂಡು ಬರದಿದ್ದರೂ, ಫಫ್ ಡು ಪ್ಲೆಸಿಸ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಹಾಗೆಯೇ ಧೋನಿ-ರೈನಾ ಕೂಡ ಸಂಕಷ್ಟದ ಸಮಯದಲ್ಲಿ ತಮ್ಮ ಅನುಭವವನ್ನು ಧಾರೆಯೆರುವ ಮೂಲಕ ತಂಡಕ್ಕೆ ಉತ್ತಮ ಕಾಣಿಕೆ ನೀಡುತ್ತಿದ್ದಾರೆ. ಹೀಗಾಗಿ ಚೆನ್ನೂ ಸೂಪರ್ ಕಿಂಗ್ಸ್​ ವಿರುದ್ಧ ಜಯಗಳಿಸಲು ಸನ್​ರೈಸರ್ಸ್​ ಹೈದರಾಬಾದ್ ಇಂದು ಸಾಕಷ್ಟು ಬೆವರಿಸಿಳಿಬೇಕಾಗುತ್ತದೆ.
Loading...

ಉಭಯ ತಂಡಗಳು ಇದಕ್ಕೂ ಮುನ್ನ ಹತ್ತು ಬಾರಿ ಮುಖಾಮುಖಿಯಾಗಿದ್ದು, ಅಂಕಿ ಅಂಶದಲ್ಲೂ ಚೆನ್ನೈ ಮುಂದಿದೆ. ಇದರಲ್ಲಿ ಹೈದರಾಬಾದ್ ಕೇವಲ 2 ರಲ್ಲಿ ಜಯ ಸಧಧಿಸಿರೆ, ಸೂಪರ್ ಕಿಂಗ್ಸ್ 8 ಪಂದ್ಯಗಳಲ್ಲಿ ವಿಜಯವನ್ನು ತನ್ನದಾಗಿಸಿಕೊಂಡಿದೆ.

ಉಭಯ ತಂಡಗಳು ಇಂತಿವೆ:

ಸನ್​ರೈಸರ್ಸ್​ ಹೈದರಾಬಾದ್: ಕೇನ್ ವಿಲಿಯಮ್ಸನ್ (ನಾಯಕ), ಡೇವಿಡ್ ವಾರ್ನರ್, ಭುವನೇಶ್ವರ್ ಕುಮಾರ್, ರಶೀದ್ ಖಾನ್, ಮನೀಶ್ ಪಾಂಡೆ, ಯೂಸುಫ್ ಪಠಾಣ್, ಮೊಹಮ್ಮದ್ ನಬಿ, ರಿಕಿ ಭುಯಿ, ಶಕೀಬ್ ಅಲ್ ಹಸನ್, ಶ್ರೀವತ್ಸ ಗೋಸ್ವಾಮಿ, ಜಾನಿ ಬೇರ್​ಸ್ಟೊ, ಬಿಲ್ಲಿ ಸ್ಟಾನ್ಲೇಕ್, ಸಂದೀಪ್ ಶರ್ಮಾ, ವೃದ್ಧಿಮಾನ್ ಸಹಾ, ದೀಪಕ್ ಹೂಡಾ, ಬಾಸಿಲ್ ತಂಪಿ, ಮಾರ್ಟಿನ್ ಗುಪ್ಟಿಲ್, ಅಭಿಷೇಕ್ ಶರ್ಮಾ, ಖಲೀಲ್ ಅಹ್ಮದ್, ಸಿದ್ದಾರ್ಥ್ ಕೌಲ್, ಟಿ. ನಟರಾಜನ್, ವಿಜಯ್ ಶಂಕರ್, ಶಹಬಾಜ್ ನದೀಮ್.

ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ (ನಾಯಕ), ಸುರೇಶ್ ರೈನಾ, ರವೀಂದ್ರ ಜಡೇಜ, ಶೇನ್ ವಾಟ್ಸನ್, ಹರ್ಭಜನ್ ಸಿಂಗ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ದೀಪಕ್ ಚಾಹರ್, ಇಮ್ರಾನ್ ತಾಹಿರ್, ಅಂಬಾಟಿ ರಾಯುಡು, ಸ್ಯಾಮ್ ಬಿಲ್ಲಿಂಗ್ಸ್, ಶಾರ್ದುಲ್ ಠಾಕೂರ್, ಕೆ.ಎಂ. ಆಸಿಫ್, ಧ್ರವ್ ಶೊರೆ, ಫಫ್ ಡು ಪ್ಲೆಸಿಸ್, ಕೇದರ್ ಜಾಧವ್, ಮುರಳಿ ವಿಜಯ್, ಎನ್ ಜಗದೀಶನ್, ಕರಣ್ ಶರ್ಮಾ, ಲುಂಗಿಸನಿ ಎನ್ಗಿಡಿ, ಚೈತನ್ಯ ಬಿಷ್ನೋಯಿ, ಮೊನು ಕುಮಾರ್, ಮೋಹಿತ್ ಶರ್ಮಾ, ಡೇವಿಡ್ ವಿಲ್ಲೆ.
First published:April 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626