(Video) ಕ್ರಿಕೆಟ್ ಮಧ್ಯೆ Squid Gameನಲ್ಲಿ ಕೊಹ್ಲಿ ಟೀಮ್; ಮಕ್ಕಳಾಟದಂತಿರುವ ಸ್ಕ್ವಿಡ್ ಇಷ್ಟು ಜನಪ್ರಿಯ ಯಾಕೆ?

Dalgona Sugar Candy Challenge- ಡಲ್ಗೋನಾ ಶುಗರ್ ಕ್ಯಾಂಡಿ ಚಾಲೆಂಜ್ ಟ್ಯಾಸ್ಕ್ ವಿಶ್ವಾದ್ಯಂತ ಟ್ರೆಂಡ್ ಆಗುತ್ತಿದೆ. ಟೀಮ್ ಇಂಡಿಯಾದ ಕೆಲ ಅಟಗಾರರು ಈ ಕಷ್ಟದ ಕಾರ್ಯಕ್ಕೆ ಕೈಹಾಕಿ ಮಿಶ್ರಫಲ ಕಂಡಿದ್ಧಾರೆ. ಅಷ್ಟಕ್ಕೂ ಏನಿದು ಕ್ಯಾಂಡಿ ಚಾಲೆಂಜ್.

ಕ್ಯಾಂಡಿ ಚಾಲೆಂಜ್​ನಲ್ಲಿ ಟೀಮ್ ಇಂಡಿಯಾ ಆಟಗಾರರು

ಕ್ಯಾಂಡಿ ಚಾಲೆಂಜ್​ನಲ್ಲಿ ಟೀಮ್ ಇಂಡಿಯಾ ಆಟಗಾರರು

 • Share this:
  ದುಬೈ: ನಿರಂತರ ಕ್ರಿಕೆಟ್​ನಿಂದ ಮಾನಸಿಕವಾಗಿ ಸಾಕಾಗಿರುವ ಟೀಮ್ ಇಂಡಿಯಾ ಆಟಗಾರರು ತಮ್ಮ ಪುನಶ್ಚೇತನಕ್ಕೆ ಯಾವುದಾದರೂ ಮೋಜಿನಾಟ ಅಗತ್ಯ. ಐಪಿಎಲ್ ಬಳಿಕ ನಡೆದ ಫೋಟೋಶೂಟ್​ನಲ್ಲಿ ಮಿಂಚಿದ ಆಟಗಾರರು ಇದೀಗ ಸ್ಕ್ವಿಡ್ ಗೇಮ್​ನಲ್ಲಿ (Squid Game) ಮಕ್ಕಳಂತೆ ಮುಳುಗಿಹೋಗಿದ್ಧಾರೆ. ಅದರ ಒಂದು ವಿಡಿಯೋ ಇನ್ಸ್​ಟಾಗ್ರಾಮ್​ನಲ್ಲಿ ವೈರಲ್ ಆಗಿದೆ. ಡಲ್ಗೋನಾ ಕ್ಯಾಂಡಿ ಚಾಲೆಂಜ್ (Dalgona Candy Challenge) ಎಂದು ಕರೆಯಲಾದ ಈ ಫನಿ ಗೇಮ್​ನಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿ, ಕೆಎಲ್ ರಾಹುಲ್, ಜಸ್​ಪ್ರೀತ್ ಬುಮ್ರಾ ಅವರು ಕ್ಯಾಂಡಿ ಚಾಲೆಂಜ್​ನಲ್ಲಿ ಪಾಲ್ಗೊಂಡು ಅದೃಷ್ಟ ಪರೀಕ್ಷೆ ಮಾಡಿದರು. ಈ ಪ್ರಯತ್ನದಲ್ಲಿ ಅವರ ಪರಿಪಾಟಲು, ಪರದಾಟ, ನಿರಾಸೆ, ಗೆಲುವಿನ ಹುಮ್ಮಸ್ಸು ಇತ್ಯಾದಿ ಭಾವನೆಗಳು ಅನಾವರಣಗೊಂಡವು.

  ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯೇ (ಐಸಿಸಿ) ಸ್ವತಃ ಈ ವಿಡಿಯೋ ಶೇರ್ ಮಾಡಿದೆ. “ಈ ರೋಚಕ ಆಟದಲ್ಲಿ ಭಾರತವನ್ನ ಪರೀಕ್ಷಿಸಲಾಯಿತು. ವಿಶ್ವದ ಅತ್ಯಂತ ಜನಪ್ರಿಯ ಶೋಗಳಲ್ಲೊಂದೆನಿಸಿದ ಕಾರ್ಯಕ್ರಮದಿಂದ ಜನಪ್ರಿಯವಾದ ಆ ಆಟವನ್ನು ಭಾರತ ಕ್ರಿಕೆಟ್ ತಂಡದ ಸ್ಟಾರ್​ಗಳು ಆಡಿದರು” ಎಂದು ಐಸಿಸಿ ಈ ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದೆ. ನಮ್ಮ ಬೆಂಗಳೂರು ಹುಡುಗ ಮಿಸ್ಟರ್ ನಾಗ್ಸ್ ಡಾನಿಶ್ ಸೇಟ್ ಕೂಡ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

  ಏನು ಸವಾಲು?

  ಡಲ್ಗೋನಾ (Dalgona) ಎಂಬ ಮಿಶ್ರಣದಿಂದ ತಯಾರಿಸಿದ ಕ್ಯಾಂಡಿಯನ್ನ ನೀಡಲಾಗುತ್ತದೆ. ಆ ಕ್ಯಾಂಡಿಯಲ್ಲಿ ಅದಾಗಲೇ ಒಂದು ಆಕಾರ ಕೊರೆಯಲಾಗಿರುತ್ತದೆ. ಸೂಜಿ ಅಥವಾ ಮತ್ತೊಂದರಿಂದ ಆ ಆಕಾರವನ್ನು ಹೊರತೆಗೆಯುವುದು ಸವಾಲು. ಗೇಮ್​ನಲ್ಲಿ ಪಾಲ್ಗೊಂಡ ಭಾರತೀಯ ಆಟಗಾರರಿಗೆ ಈ ಶೋ ಬಹಳ ಮಜಾ ಕೊಟ್ಟಿದ್ದಷ್ಟೇ ಅಲ್ಲ, ತಲೆಗೆ ಕಸರತ್ತು ಕೂಡ ಕೊಟ್ಟಿತ್ತು. ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ವರುಣ್ ಚಕ್ರವರ್ತಿ, ಜಸ್​ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಅವರು ಆಟ ಆಡಿ ಚಾಲೆಂಜ್ ಗೆಲ್ಲುವ ಪ್ರಯತ್ನ ಮಾಡಿದರು. ಆದರೆ, ಯಶಸ್ವಿಯಾಗಿದ್ದು ರೋಹಿತ್ ಮತ್ತು ಶಮಿ ಮಾತ್ರ. ಉಳಿದ ನಾಲ್ವರಿಂದ ಸಾಧ್ಯವಾಗಲಿಲ್ಲ.
  View this post on Instagram


  A post shared by ICC (@icc)

  ಇದು ಯಾಕೆ ಜನಪ್ರಿಯ?

  ಕಳೆದ ವರ್ಷ ಕೋವಿಡ್ ಸೋಂಕು ಸ್ಫೋಟಗೊಂಡಾಗ ವಿಶ್ವದ ಕೆಲ ದೇಶಗಳಲ್ಲಿನ ಜನರು ತಮ್ಮ ಮನೆಯಲ್ಲಿ ಡಲ್ಗೋನಾ ಕಾಫಿ ತಯಾರಿಸಿ ಅದನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಟ್ರೆಂಡ್ ಇತ್ತು. ಈ ವರ್ಷ ನೆಟ್​ಫ್ಲಿಕ್ಸ್​ನಲ್ಲಿ “ಸ್ಕ್ವಿಡ್ ಗೇಮ್” (Squid Game) ಎಂಬ ಕಾಮಿಡಿ ಶೋ ಜನಪ್ರಿಯವಾಗಿದೆ. ಈ ಶೋನ ಮೂರನೇ ಎಪಿಸೋಡ್​ನಲ್ಲಿ ಸ್ಪರ್ಧಿಗಳಿಗೆ ಬಹಳ ಕೃಶವಾದ, ಸೂಕ್ಷ್ಮವಾದ ಕ್ಯಾಂಡಿಗಳನ್ನ ನೀಡಲಾಗುತ್ತದೆ. ಡಲ್ಗೋನಾ ಎಂಬ ಮಿಶ್ರಣದಿಂದ ಈ ಶುಗರ್ ಕ್ಯಾಂಡಿ ತಯಾರಿಸಲಾಗಿರುತ್ತದೆ. ಇವು ಸ್ವಲ್ಪ ಹೆಚ್ಚುಕಡಿಮೆ ಮಾಡಿದರೂ ಸುಲಭವಾಗಿ ಮುರಿದುಹೋಗುತ್ತದೆ. ಈ ಕ್ಯಾಂಡಿಯಲ್ಲಿ ಮೊದಲೇ ಮೂಡಿಸಲಾಗಿದ್ದ ಆಕಾರವನ್ನು ಸೂಜಿ ಬಳಸಿ ಹೊರತೆಗೆಯಬೇಕು. ಇದು ಸವಾಲು. ಇದರಲ್ಲಿ ಸೋತರೆ ಆಟಗಾರರಿಗೆ ಅಪಾಯಗಳ ಸರಮಾಲೆಯೇ ಎದುರಾಗುತ್ತದೆ.

  ಇದನ್ನೂ ಓದಿ: T20 Wold Cup- ಕೊಹ್ಲಿಗೂ ಹೆದರಲ್ಲ, ಬಾಬರ್​ಗೂ ಹೆದರಲ್ಲ: ತೊಡೆತಟ್ಟಿದ ಸ್ಕಾಟ್ಲೆಂಡ್ ಆಟಗಾರ

  ಭಾರತದ ಅನುಪಮ್ ತ್ರಿಪಾಠಿ ನಟನೆ:

  ಈ ಸ್ಕ್ವಿಡ್ ಗೇಮ್ ಎಂಬ ಈ ಸರಣಿಯನ್ನು ದಕ್ಷಿಣ ಕೊರಿಯಾದ ನಿರ್ದೇಶಕ ಹ್ವಾಂಗ್ ಡೋಂಗ್-ಹ್ಯುಕ್ ಅವರು ಬರೆದು ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ಭಾರತದ ಅನುಪಮ್ ತ್ರಿಪಾಠಿ ಎಂಬ ನಟ ಕೂಡ ನಟಿಸಿದ್ದಾರೆ. ಅವರು ಪಾಕಿಸ್ತಾನೀ ವಲಸೆ ಕಾರ್ಮಿಕ ಜಾವೆದ್ ಅಲಿ ಎಂಬ ಪಾತ್ರ ಮಾಡುತ್ತಿದ್ಧಾರೆ.

  ಅನುಪಮ್ ತ್ರಿಪಾಠಿ ಅವರಿಗೆ ಕೊರಿಯನ್ ಮನರಂಜನಾ ಕ್ಷೇತ್ರ ಹೊಸತಲ್ಲ. 2014ರಲ್ಲಿ ಅವರು ಸೌಥ್ ಕೊರಿಯಾದ “Ode to My Father” ಎಂಬ ಚಿತ್ರದಲ್ಲಿ ನಟಿಸಿದ್ದರು. ಕೊರಿಯಾದ ಕೆಲ ಜನಪ್ರಿಯ ಧಾರವಾಹಿಗಳಲ್ಲಿ ಅವರು ನಟಿಸಿದ್ದಾರೆ. ಸ್ಪೇಸ್ ಸ್ವೀಪರ್ಸ್ ಎಂಬ ಸಿನಿಮಾದಲ್ಲಿ ಅವರು ನಟಿಸಿದ್ದು, ಅದು ಬಿಡುಗಡೆಗೆ ಸಿದ್ಧವಾಗಿದೆ.
  Published by:Vijayasarthy SN
  First published: