ಕಂಬಳ ವೀರನ ಮಿಂಚಿನ ವೇಗಕ್ಕೆ ಕ್ರೀಡಾ ಸಚಿವರ ಮೆಚ್ಚುಗೆ; ಟ್ರಯಲ್ಸ್​ಗೆ ಆಹ್ವಾನಿಸಿದ ಕಿರಣ್ ರಿಜಿಜು

ಫೆಬ್ರವರಿ 1ರಂದು ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ತುಳುನಾಡಿನ ಸಾಂಪ್ರದಾಯಿಕ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ ಅವರು 142.50 ಮೀಟರ್ ಕೆರೆ (ಕಂಬಳದ ಕೋಣಗಳ ಟ್ರ್ಯಾಕ್)ಯನ್ನು ಕೇವಲ 13.62 ಸೆಕೆಂಡ್​ಗಳಲ್ಲಿ ಕ್ರಮಿಸಿದ್ದರು.

news18-kannada
Updated:February 15, 2020, 3:57 PM IST
ಕಂಬಳ ವೀರನ ಮಿಂಚಿನ ವೇಗಕ್ಕೆ ಕ್ರೀಡಾ ಸಚಿವರ ಮೆಚ್ಚುಗೆ; ಟ್ರಯಲ್ಸ್​ಗೆ ಆಹ್ವಾನಿಸಿದ ಕಿರಣ್ ರಿಜಿಜು
ಕಂಬಳ ಸ್ಪರ್ಧೆಯಲ್ಲಿ ಶ್ರೀನಿವಾಸ ಗೌಡ ಅವರ ಓಟ.
  • Share this:
ರನ್ನಿಂಗ್​ ರೇಸ್​ ಎಂದಾಕ್ಷಣ ತಕ್ಷಣ ನೆನಪಾಗುವುದು ಜಮೈಕಾದ ಉಸೇನ್ ಬೋಲ್ಟ್. ಒಲಂಪಿಕ್ಸ್​ನಲ್ಲಿ ಈ ಮಹಾನ್ ಓಟಗಾರ ಮಾಡಿರುವ ಸಾಧನೆ ಕಡಿಮೆಯದ್ದೇನಲ್ಲ. ಉಸೇನ್ ಬೋಲ್ಟ್ ಅವರ ಸಾಧನೆಯನ್ನು ಮತ್ತೆ ಉಸೇನ್​ ಬೋಲ್ಟ್​ ಅವರಗೇ ಮುರಿಯಲು ಸಾಧ್ಯವಾಗಿಲ್ಲ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಶ್ರೀನಿವಾಸ ಗೌಡ ಎಂಬುವವರು 100 ಮೀಟರ್​ಅನ್ನು ಕೇವಲ 9.55 ಸೆಕೆಂಡ್​ನಲ್ಲಿ ಕ್ರಮಿಸಿದ್ದಾರೆ. ಅದು ಭತ್ತ ಬೆಳೆಯುವ ಕೆಸರು ಗದ್ದೆಯಲ್ಲಿ. ಇವರ ಶರ ವೇಗಕ್ಕೆ ಇಡೀ ಜಗತ್ತೆ ನಿಬ್ಬೆರಗಾಗಿದೆ.

ಈ ವಿಚಾರ ಸದ್ಯ ಕೇಂದ್ರ ಕ್ರೀಡಾ ಸಚಿವರನ್ನು ತಲುಪಿದೆ. ಖ್ಯಾತ ಉದ್ಯಮಿ ಆನಂದ್ ಮಹಿಂದ್ರಾ ಅವರು ಕೇಂದ್ರ ಕ್ರೀಡಾ ಸಚಿವ ಕಿರಿಣ್ ರಿಜಿಜು ಅವರಿಗೆ, ಕಂಬಳವನ್ನು ಒಲಂಪಿಕ್ಸ್​ಗೆ ಸೇರಿಸಿದರೆ ಶ್ರೀನಿವಾಸ್‍ಗೆ ಚಿನ್ನದ ಪದಕ ಸಿಗುವುದು ಖಚಿತ ಎಂದು ಟ್ವೀಟ್ ಮಾಡಿದ್ದಾರೆ.

 


India vs New Zealand XI: ಸೈನಿ-ಬುಮ್ರಾ ದಾಳಿಗೆ ಕಿವೀಸ್ ಆಲೌಟ್; ದಿನದಾಟದ ಅಂತ್ಯಕ್ಕೆ ಭಾರತ 59/0

“ಒಮ್ಮೆ ಇವರ ಮೈಕಟ್ಟನ್ನು ಗಮನಿಸಿ. ಇವರು ಅಸಾಧಾರಣ ಸಾಹಸ ಮಾಡಲು ಸಮರ್ಥ. ಇವರಿಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು 100 ಮೀ ಓಟಗಾರನಾಗಲು ಸಮರ್ಥ ತರಬೇತಿಯನ್ನು ನೀಡಲು ಅವಕಾಶ ಕಲ್ಪಿಸಬೇಕು. ಕಂಬಳವನ್ನು ಒಲಿಂಪಿಕ್ಸ್​ಗೆ ಸೇರಿಸಬೇಕು. ಶ್ರೀನಿವಾಸ್ ಗೌಡ ಅವರಿಗೆ ಚಿನ್ನದ ಪದಕ ಧಕ್ಕಬೇಕು", ಎಂದು ಆನಂದ್ ಮಹಿಂದ್ರಾ ಟ್ವಿಟ್ಟರ್​​ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಈ ಟ್ವೀಟನ್ನು ಕಿರಣ್ ರಿಜಿಜು ಅವರಿಗೆ ಟ್ಯಾಗ್ ಮಾಡಿದ್ದಾರೆ.

 Virat Kohli: ಅನುಷ್ಕಾ ಜೊತೆ ಸುತ್ತಾಟ ಅಲ್ಲ!; ಕೊಹ್ಲಿ ಅಭ್ಯಾಸ ಪಂದ್ಯದಲ್ಲಿ ಆಡದಿರಲು ಕಾರಣವೇನು ಗೊತ್ತಾ?

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿರಣ್ ರುಜಿಜು ಅವರು, "ಭಾರತೀಯ ಕ್ರೀಡಾ ಪ್ರಾಧಿಕಾರದ ಉನ್ನತ ತರಬೇತುದಾರರ ಬಳಿಗೆ ಟ್ರಯಲ್ಸ್‌ಗೆ ನಾನು ಕರ್ನಾಟಕದ ಶ್ರೀನಿವಾಸ ಗೌಡರನ್ನು ಆಹ್ವಾನಿಸುತ್ತೇನೆ. ಒಲಿಂಪಿಕ್ಸ್‌ನ ಮಾನದಂಡಗಳ ಬಗ್ಗೆ ಜನಸಾಮಾನ್ಯರಲ್ಲಿ ಜ್ಞಾನದ ಕೊರತೆಯಿದೆ. ಅದರಲ್ಲು ಅಥ್ಲೆಟಿಕ್ಸ್‌ನಲ್ಲಿ ಮಾನವನ ಸಾಮರ್ಥ್ಯ ಮತ್ತು ಶಕ್ತಿಯ ಅಂತಿಮಘಟ್ಟವನ್ನು ಮೀರಿಸಲಾಗುತ್ತದೆ. ಭಾರತದ ಯಾವ ಪ್ರತಿಭೆಯೂ ಪರೀಕ್ಷೆಗೊಳಪಡದೇ ಇರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳುತ್ತೇನೆ," ಎಂದು ಅವರು ಹೇಳಿದ್ದಾರೆ.

ಶ್ರೀನಿವಾಸ ಗೌಡ.


 ಫೆಬ್ರವರಿ 1ರಂದು ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ತುಳುನಾಡಿನ ಸಾಂಪ್ರದಾಯಿಕ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ ಅವರು 142.50 ಮೀಟರ್ ಕೆರೆ (ಕಂಬಳದ ಕೋಣಗಳ ಟ್ರ್ಯಾಕ್)ಯನ್ನು ಕೇವಲ 13.62 ಸೆಕೆಂಡ್​ಗಳಲ್ಲಿ ಕ್ರಮಿಸಿದ್ದರು. ಅಲ್ಲಿಗೆ 100 ಮೀಟರ್ ದೂರವನ್ನು ಕೇವಲ 9.55 ಸೆಕೆಂಡ್​ನಲ್ಲಿ ತಲುಪಿದ್ದರು. ಸದ್ಯ ಶ್ರೀನಿವಾಸ್ ಅವರಿಗೆ ಕ್ರೀಡಾ ವಲಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೆ ಟ್ವಿಟ್ಟರ್​ನಲ್ಲಿ ಇವರ ಹೆಸರು ಟ್ರೆಂಡಿಂಗ್​ನಲ್ಲಿದೆ.

SA vs ENG: ಆರ್​ಸಿಬಿ ಆಲ್ರೌಂಡರ್​ನ ಸ್ಫೋಟಕ ಆಟ; ಥ್ರಿಲ್ಲಿಂಗ್ ಪಂದ್ಯದಲ್ಲಿ ಇಂಗ್ಲೆಂಡ್​ಗೆ ರೋಚಕ ಜಯ!

ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿರುವುದಷ್ಟೇ ಅಲ್ಲದೇ, ಶ್ರೀನಿವಾಸ ಗೌಡ ಅವರನ್ನು ಉಸೇನ್ ಬೋಲ್ಟ್ ಅವರೊಂದಿಗೆ ಹೊಲಿಕೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ, ಅಂತರಾಷ್ಟ್ರೀಯ ಗುಣಮಟ್ಟದ ಗಟ್ಟಿಮುಟ್ಟಾದ ಸಿಂಥೆಟಿಕ್ ಟ್ರ್ಯಾಕ್ ಮೇಲೆ ಓಡುವುದಕ್ಕೂ ಕಾಲು ಹೂತು ಹೋಗುವ ಕೆಸರಿನ ಗದ್ದೆಯಲ್ಲಿ ಓಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಟ್ರ್ಯಾಕ್​ ಮೇಲೆ ಓಡಿದಷ್ಟು ಸುಲಭವಾಗಿ ಕೆಸರಿನ ಗದ್ದೆಯಲ್ಲಿ ಓಡುವುದು ಸುಲಭವಲ್ಲ.
First published:February 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ