HOME » NEWS » Sports » CRICKET SPAIN TO HOST THE TRI SERIES BETWEEN SCOTLAND NAMIBIA AND NEPAL ZP

ಕ್ರಿಕೆಟ್ ಆತಿಥ್ಯಕ್ಕೆ ಮುಂದಾದ ಮತ್ತೊಂದು ಯುರೋಪ್ ರಾಷ್ಟ್ರ..!

ಕೊರೋನಾ ಕಾರಣದಿಂದ ಸ್ಥಗಿತಗೊಂಡಿರುವ ಐಪಿಎಲ್​ನ ಉಳಿದ 31 ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅದರಂತೆ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 15 ರವರೆಗೆ ಐಪಿಎಲ್​ನ ಉಳಿದ ಪಂದ್ಯಗಳನ್ನು ನಡೆಸುವುದಾಗಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.

news18-kannada
Updated:June 22, 2021, 3:32 PM IST
ಕ್ರಿಕೆಟ್ ಆತಿಥ್ಯಕ್ಕೆ ಮುಂದಾದ ಮತ್ತೊಂದು ಯುರೋಪ್ ರಾಷ್ಟ್ರ..!
ಸ್ಪೇನ್ ಕ್ರಿಕೆಟ್ ಟೀಮ್
  • Share this:
ಕ್ರಿಕೆಟ್ ಜಗತ್ತಿಗೆ ಮತ್ತೊಂದು ರಾಷ್ಟ್ರ ಅಧಿಕೃತವಾಗಿ ಸೇರ್ಪಡೆಯಾಗಲು ಸಜ್ಜಾಗುತ್ತಿದೆ. ಅದು ಕೂಡ ಫುಟ್​ಬಾಲ್​ನ್ನೇ ಉಸಿರಾಗಿಸಿಕೊಂಡಿರುವ ಯುರೋಪಿಯನ್ ರಾಷ್ಟ್ರ ಎಂಬುದು ವಿಶೇಷ. ಹೌದು, ಇದೇ ಮೊದಲ ಬಾರಿಗೆ ಏಕದಿನ ಕ್ರಿಕೆಟ್​ಗೆ ಆತಿಥ್ಯವಹಿಸಲು ಸ್ಪೇನ್ ದೇಶ ಸಜ್ಜಾಗಿ ನಿಂತಿದೆ. ಈ ಮೂಲಕ ನೆದರ್‌ಲ್ಯಾಂಡ್ಸ್ ಜೊತೆಗೆ ಪುರುಷರ ಏಕದಿನ ಕ್ರಿಕೆಟ್‌ಗೆ ಆತಿಥ್ಯ ವಹಿಸಿದ ಎರಡನೇ ಯುರೋಪಿಯನ್ ರಾಷ್ಟ್ರವಾಗಿ ಸ್ಪೇನ್ ಹೊರಹೊಮ್ಮಲಿದೆ.

ಸ್ಕಾಟ್ಲೆಂಡ್, ನಮೀಬಿಯಾ ಮತ್ತು ನೇಪಾಳ ತಂಡವು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಜುಲೈ 20 ರಿಂದ ಸ್ಪೇನ್‌ನಲ್ಲಿ ತ್ರಿಕೋನಾ ಸರಣಿ ನಡೆಯಲಿದೆ. ಈ ಸರಣಿಯು ಸ್ಕಾಟ್ಲೆಂಡ್​ನಲ್ಲಿ ನಡೆಯಬೇಕಿತ್ತು. ಆದರೆ ಕೊರೋನಾ ಕಾರಣದಿಂದ ಪಂದ್ಯವನ್ನು ಸ್ಪೇನ್​ಗೆ ಸ್ಥಳಾಂತರಿಸಲಾಗಿದೆ. ಜುಲೈ 20 ರಿಂದ 30 ರವರೆಗೆ ಅಲ್ಮೇರಿಯಾದ ಡಸರ್ಟ್ ಸ್ಪ್ರಿಂಗ್ಸ್‌ನಲ್ಲಿ ಆರು ಪಂದ್ಯಗಳ ಈ ಸರಣಿ ನಡೆಯಲಿದ್ದು, ಆಗಸ್ಟ್ 26 ರಿಂದ ಸೆಪ್ಟೆಂಬರ್ 25 ರವರೆಗೆ ಸ್ಪೇನ್ ಯುರೋಪಿಯನ್ ಮಹಿಳಾ ಟಿ 20 ವಿಶ್ವಕಪ್ ಅರ್ಹತಾ ಮತ್ತು ಯುರೋಪಿಯನ್ ಅಂಡರ್ 19 ವಿಶ್ವಕಪ್ ಅರ್ಹತಾ ಪಂದ್ಯವನ್ನು ಆಯೋಜಿಸಲಿದೆ.

ಕೊರೋನಾದಿಂದ ಪಂದ್ಯಾವಳಿಗಳು ಸ್ಥಳಾಂತರ:
ಕಳೆದ ವರ್ಷ ಫೆಬ್ರವರಿಯಲ್ಲಿ ನೇಪಾಳದ ಎರಡು ಸರಣಿಗಳಿಗೆ ಯುಎಸ್ ಮತ್ತು ಒಮಾನ್‌ ಆತಿಥ್ಯ ವಹಿಸಿತ್ತು. ಇದೀಗ ಸ್ಕಾಟ್ಲೆಂಡ್​ ಪರವಾಗಿ ಸ್ಪೇನ್ ಆತಿಥ್ಯವಹಿಸುತ್ತಿದೆ. ಇತ್ತ ಭಾರತ ಕೂಡ ಇದೇ ಮೊದಲ ಬಾರಿ ಐಸಿಸಿ ಟಿ20 ವಿಶ್ವಕಪ್​ನ್ನು ಕೂಡ ಸ್ಥಳಾಂತರ ಮಾಡಲು ಯೋಚಿಸುತ್ತಿದೆ. ಅದರಂತೆ ಅಕ್ಟೋಬರ್​ನಲ್ಲಿ ಭಾರತದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರದಿದ್ದರೆ, ಯುಎಇನಲ್ಲಿ ಟಿ20 ವಿಶ್ವಕಪ್ ಆಯೋಜಿಸಲು ಬಿಸಿಸಿಐ ಚಿಂತಿಸಿದೆ.
Youtube Video

ಇನ್ನು ಕಳೆದ ಸೀಸನ್ ಐಪಿಎಲ್​ನ್ನು ಬಿಸಿಸಿಐ ಯುಎಇನಲ್ಲಿ ಆಯೋಜಿಸಿತ್ತು. ಅದಕ್ಕೂ ಮುನ್ನ 2009 ರಲ್ಲಿ ಐಪಿಎಲ್​ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಇದೀಗ ಕೊರೋನಾ ಕಾರಣದಿಂದ ಸ್ಥಗಿತಗೊಂಡಿರುವ ಐಪಿಎಲ್​ನ ಉಳಿದ 31 ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಅದರಂತೆ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 15 ರವರೆಗೆ ಐಪಿಎಲ್​ನ ಉಳಿದ ಪಂದ್ಯಗಳನ್ನು ನಡೆಸುವುದಾಗಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ತಿಳಿಸಿದ್ದಾರೆ.
Published by: zahir
First published: June 22, 2021, 3:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories