90ರ ದಶಕದ ಬಹುಭಾಷಾ ತಾರೆ ನಗ್ಮಾ ಇಂದಿಗೂ ಕೂಡ ಅವಿವಾಹಿತೆ, ಇದಕ್ಕೆ ಕಾರಣ ಆ ಕ್ರಿಕೆಟಿಗ…!

ಗಂಗೂಲಿ ನನ್ನ ನಡುವೆ ನಿಜವಾದ ಪ್ರೀತಿಯಿತ್ತು. ನಾವು ಮದುವೆಯಾಗಿರಲಿಲ್ಲ. ಕಾರಣ ನಮ್ಮ ವೃತ್ತಿ. ಮದುವೆಯಾದರೆ ನಾನು ನನ್ನ ವೃತ್ತಿ ಜೀವನವನ್ನು ನಿಲ್ಲಿಸಬೇಕಿತ್ತು. ಅದು ನನಗೆ ಇಷ್ಟವಿರಲಿಲ್ಲ. ಇಬ್ಬರು ವೃತ್ತಿ ಜೀವನದ ಯಶಸ್ಸಿಗಾಗಿ ನಾವು ಬೇರೆಯಾದೆವು

ಬಹುಭಾಷಾ ತಾರೆ ನಗ್ಮಾ

ಬಹುಭಾಷಾ ತಾರೆ ನಗ್ಮಾ

  • News18
  • Last Updated :
  • Share this:
90ರ ದಶಕದ ಬಹುಭಾಷಾ ತಾರೆ ನಗ್ಮಾ ಇಂದಿಗೂ ಕೂಡ ಅವಿವಾಹಿತೆ. ಆಕೆಯ ತಂಗಿ ಜ್ಯೋತಿಕಾ ಹೆಸರಾಂತ ನಟನನ್ನು ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಆದರೆ, ನಗ್ಮಾ ಮಾತ್ರ ಇನ್ನು ಸಿಂಗಲ್​ ಆಗಿದ್ದಾರೆ ಇದಕ್ಕೆ ಕಾರಣ ಆ ಕ್ರಿಕೆಟಿಗ. ಹೌದು, ಮುಂಬಯಿ ಮೂಲದ ಈ ನಟಿಗೆ ಕೈ ಹಿಡಿದಿದ್ದು ತಮಿಳು ಚಿತ್ರರಂಗ. 90ರ ದಶಕದಲ್ಲಿ ಕನ್ನಡ, ತೆಲುಗು, ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದ ಈ ನಟಿ ಹೆಸರು ಹೆಸರಾಂತ ಕ್ರಿಕೆಟಿಗ ಸೌರವ್​  ಗಂಗೂಲಿ ಜೊತೆ ತಳಕು ಹಾಕಿಕೊಂಡಿತು.ಇವರಿಬ್ಬರ  ನಡುವೆ ಪ್ರೀತಿ ಇದೆ ಎಂಬ ಸುದ್ದಿ ಹರಿದಾಡಿತು. ಇದರ ಜೊತೆಗೆ ಸಾಕ್ಷಿಯೆಂಬಂತೆ ಕಾಳಹಸ್ತಿಯಲ್ಲಿ ಜಂಟಿಯಾಗಿ ಪೂಜೆ ನಡೆಸಿದ್ದರು. ಆದರೆ, ಇದಾದ ಬಳಿಕ ನಮ್ಮಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಇಬ್ಬರು ಸ್ಪಷ್ಟಪಡಿಸಿದ್ದರು.

ಇವರಿಬ್ಬರ ನಡುವೆ ಪ್ರೀತಿ ಮುರಿದು ಬಿದ್ದ ನಂತರ ಗಂಗೂಲಿ ಕ್ರಿಕೆಟ್​ನಲ್ಲಿ ಬ್ಯುಸಿಯಾದರೆ, ನಗ್ಮಾ ತಮ್ಮ ನಟನೆಯಲ್ಲಿ ತಲ್ಲೀನರಾದರು. ಆದರೆ, ಈಗ ಹಲವು ವರ್ಷಗಳ ಬಳಿಕ ನಗ್ಮಾ ತಮ್ಮ ಹಳೆಯ ನೆನಪನ್ನು ಮೆಲಕು ಹಾಕಿಕೊಂಡಿದ್ದಾರೆ.

ಹೌದು, ಗಂಗೂಲಿ ನನ್ನ ನಡುವೆ ನಿಜವಾದ ಪ್ರೀತಿಯಿತ್ತು. ನಾವು ಮದುವೆಯಾಗಿರಲಿಲ್ಲ. ಕಾರಣ ನಮ್ಮ ವೃತ್ತಿ. ಮದುವೆಯಾದರೆ ನಾನು ನನ್ನ ವೃತ್ತಿ ಜೀವನವನ್ನು ನಿಲ್ಲಿಸಬೇಕಿತ್ತು. ಅದು ನನಗೆ ಇಷ್ಟವಿರಲಿಲ್ಲ. ಇಬ್ಬರು ವೃತ್ತಿ ಜೀವನದ ಯಶಸ್ಸಿಗಾಗಿ ನಾವು ಬೇರೆಯಾದೆವು ಎಂದಿದ್ದಾರೆ.

ಸದ್ಯ ರಾಜಕೀಯದಲ್ಲಿ ಸಕ್ರಿಯವಾಗಿರುವ ನಗ್ಮಾಗೆ ಯಾಕೆ ಇನ್ನು ಮದುವೆಯಾಗಿಲ್ಲ ಎಂಬು ಕುರಿತಾಗಿ ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಈ ಉತ್ತರ ನೀಡಿದ್ದಾರೆ.
Published by:Seema R
First published: