ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನಿಗೂ ತಗುಲಿದ ಡೆಡ್ಲಿ ಕೊರೋನಾ ವೈರಸ್!

ಪಾಕಿಸ್ತಾನದ ಜಫರ್​​ ಸರ್ಫರಾಜ್​​ ಹಾಗೂ ಸ್ಕಾಟ್​ಲ್ಯಾಂಡ್​​​​​ ಮಜೀದ್​​ ಹಕ್​ ಅವರಿಗೆ ಕೊರೋನಾ ವೈರಸ್​​ ತಗುಲಿತ್ತು. ಇದೀಗ ಕ್ರಿಕೆಟ್​ ಲೋಕದಲ್ಲಿ ಕೊರೋನಾ ವೈರಸ್​ ತಗುಲಿದ ಮೂರನೇ ಆಟಗಾರ ನಿಕೊಲಾಸ್​ ಆಗಿದ್ದಾರೆ.

news18-kannada
Updated:May 8, 2020, 4:17 PM IST
ಮತ್ತೊಬ್ಬ ಸ್ಟಾರ್ ಕ್ರಿಕೆಟಿಗನಿಗೂ ತಗುಲಿದ ಡೆಡ್ಲಿ ಕೊರೋನಾ ವೈರಸ್!
ಸೊಲೊ ನಿಕೊಲಾಸ್
  • Share this:
ಮಹಾಮಾರಿ ಕೊರೋನಾ ವೈರಸ್​ ಕ್ರಿಕೆಟ್​ ಲೋಕಕ್ಕೂ ಕಾಲಿರಿಸಿದೆ. ಇದೀಗ ದಕ್ಷಿಣ ಆಫ್ರಿಕಾದ ಆಲ್​ರೌಂಡರ್​ ಆಟಗಾರ ಸೊಲೊ ನಿಕೊಲಾಸ್​ಗೆ ಕೊವೀಡ್​ 19 ಸೋಂಕು ತಗುಲಿರುವುದು ದೃಢಪಟ್ಟಿದೆ. ಕ್ರಿಕೆಟ್​ ಲೋಕದಲ್ಲಿ ಈವರೆಗೆ ಮೂರು ಆಟಗಾರರಿಗೆ ಕೊರೋನಾ ಸೋಂಕು ತಗುಲಿದೆ. 

ಈ ಬಗ್ಗೆ ಟ್ವೀಟ್​ ಮಾಡಿರುವ ಸೊಲೊ ನಿಕೊಲಾಸ್​​ ‘ಕಳೆದ ವರ್ಷ ಜಿಬಿಎಸ್​​ ವೈರಸ್​ನಿಂದ ಬಳಲುತ್ತಿದ್ದ ನಾನು ಕಳೆದ 10 ತಿಂಗಳಿಂದಲೂ ಟಿಬಿ, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದೇನೆ. ಇದೀಗ ಕೊರೋನಾ ವೈರಸ್​ ನನಗೆ ತಗುಲಿದೆ. ಈ ಎಲ್ಲಾ ವೈರಸ್​​ ನನಗೆ ಬರುತ್ತಿರುವುದು ಯಾಕೆ ಎಂಬುದು ಗೊತ್ತಾಗುತ್ತಿಲ್ಲ‘ ಎಂದು ಟ್ವಿಟ್ಟರ್​ನಲ್ಲಿ ಬೇಸರ ಹೊರಹಾಕಿದ್ದಾರೆ.

ಸೊಲೊ ನಿಕೊಲಾಸ್ ಟ್ವೀಟ್​


ನಿಕೊಲಾಸ್​​ ದಕ್ಷಿಣಾ ಆಫ್ರಿಕಾದ ಪರ 36 ಪ್ರಥಮ ದರ್ಜೆ ಕ್ರಿಕೆಟ್​​ ಆಡಿದ್ದಾರೆ. 2012ರಿಂದ ಈಸ್ಟನ್​​ ಪ್ರೊನಿನ್ಸ್​​ ಪರ ಕ್ರಿಕೆಟ್​ ಕಣಕ್ಕೆ ಇಳಿದಿದ್ದರು. ಅಂಡರ್​- 19 ತಂಡದಲ್ಲಿದ್ದಾಗ ದಕ್ಷಿಣ ಆಫ್ರಿಕಾದ ಪರ 8 ಪಂದ್ಯಗಳನ್ನು ಪ್ರದರ್ಶನ ತೋರಿಸಿದ್ದರು. ಪ್ರಾಂಚೈಸಿ ಕ್ರಿಕೆಟ್​ನಲ್ಲೂ ಆಡಿದ್ದಾರೆ.

ಇನ್ನು ಪಾಕಿಸ್ತಾನದ ಜಫರ್​​ ಸರ್ಫರಾಜ್​​ ಹಾಗೂ ಸ್ಕಾಟ್​ಲ್ಯಾಂಡ್​​​​​ ಮಜೀದ್​​ ಹಕ್​ ಅವರಿಗೆ ಕೊರೋನಾ ವೈರಸ್​​ ತಗುಲಿತ್ತು. ಇದೀಗ ಕ್ರಿಕೆಟ್​ ಲೋಕದಲ್ಲಿ ಕೊರೋನಾ ವೈರಸ್​ ತಗುಲಿದ ಮೂರನೇ ಆಟಗಾರ ನಿಕೊಲಾಸ್​ ಆಗಿದ್ದಾರೆ.

Xiaomi Mi 10: ದೇಶಿಯ ಮಾರುಕಟ್ಟೆಗೆ Mi 10 ಸ್ಮಾರ್ಟ್​ಫೋನ್​; 12GB ರ‍್ಯಾಮ್​ 256GB ಸ್ಟೊರೇಜ್!​
First published: May 8, 2020, 4:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading