ವಿಕೆಟ್ ಪಡೆದಾಗ ಆಫ್ರಿಕಾದ ಈ ಬೌಲರ್ ಸಂಭ್ರಮಿಸುವುದು ಮ್ಯಾಜಿಕ್ ಮಾಡಿ; ಇಲ್ಲಿದೆ ವೈರಲ್ ವಿಡಿಯೋ

ಶಂಸಿ ಅವರು ವಿಕೆಟ್ ಪಡೆದಾಗ ಮೈದಾನದಲ್ಲಿ ಜಾದೂ ಮಾಡಿ ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಪಾರ್ಲ್ ರಾಕ್ಸ್ ವಿರುದ್ಧ ಡರ್ಬನ್ ಹೀಟ್ ತಂಡ 6 ವಿಕೆಟ್​ಗಳ ಜಯ ಸಾಧಿಸಿತು.

news18-kannada
Updated:December 5, 2019, 2:58 PM IST
ವಿಕೆಟ್ ಪಡೆದಾಗ ಆಫ್ರಿಕಾದ ಈ ಬೌಲರ್ ಸಂಭ್ರಮಿಸುವುದು ಮ್ಯಾಜಿಕ್ ಮಾಡಿ; ಇಲ್ಲಿದೆ ವೈರಲ್ ವಿಡಿಯೋ
ತಬ್ರೈಜ್ ಶಂಸಿ
  • Share this:
ಬೆಂಗಳೂರು (ಡಿ. 05): ಕ್ರಿಕೆಟ್ ಪಂದ್ಯ ನಡೆಯುತ್ತಿರುವಾಗ ಬ್ಯಾಟ್ಸ್​ಮನ್​ ಶತಕ ಸಿಡಿಸಿದ ವೇಳೆ ಅಥವಾ ಬೌಲರ್ ವಿಕೆಟ್ ಪಡೆದುಕೊಂಡ ವೇಳೆ ಮೈದಾನದಲ್ಲಿ ವಿಶೇಷವಾಗಿ ಸಂಭ್ರಮಿಸುವ ಕೆಲವು ಆಟಗಾರರನ್ನು ನೀವು ನೋಡಿರುತ್ತೀರಿ.

ವೆಸ್ಟ್​ ಇಂಡೀಸ್​ ತಂಡದ ಬೌಲರ್ ಶೆಲ್ಡನ್ ಕಾಟ್ರೆಲ್ ವಿಕೆಟ್ ಪಡೆದಾಗ ಸೆಲ್ಯೂಟ್ ಹೊಡೆದು ಸಂಭ್ರಮಿಸಿದರೆ, ಬ್ರಾವೋ ಡ್ಯಾನ್ಸ್ ಮೂಲಕ ರಂಚಿಸುತ್ತಾರೆ. ಇನ್ನು ದ. ಆಫ್ರಿಕಾದ ಇಮ್ರಾನ್ ತಾಹಿರ್ ಮೈದಾನದಲ್ಲೇ ಓಡಿ ಖುಷಿ ಹಂಚಿಕೊಳ್ಳುತ್ತಾರೆ.

‘ಬುಮ್ರಾ ಬೇಬಿ ಬೌಲರ್’ ಎಂದ ಪಾಕ್ ಕ್ರಿಕೆಟಿಗನಿಗೆ ಮೈಚಳಿ ಬಿಡಿಸಿದ ಜಸ್​ಪ್ರೀತ್ ಅಭಿಮಾನಿಗಳು!

ಆದರೆ, ಸೌತ್ ಆಫ್ರಿಕಾ ಬೌಲರ್ ತಬ್ರೈಜ್ ಶಂಸಿ ವಿಕೆಟ್ ಪಡೆದಾಗ ಮ್ಯಾಜಿಕ್ ಮಾಡಿ ಹೊಸ ರೀತಿಯಲ್ಲಿ ಸಂಭ್ರಮಾಚರಣೆ ಮಾಡುತ್ತಾರೆ. ಹೌದು, ತಾನು ವಿಕೆಟ್ ಪಡೆದಾಗ ಪ್ರೇಕ್ಷಕರತ್ತ ಮುಖಮಾಡಿ ಮ್ಯಾಜಿಕ್ ಮೂಲಕ ಸಂತಸ ಹಂಚಿಕೊಳ್ಳುತ್ತಾರೆ.

ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಸಾಗುತ್ತಿರುವ ಮಾಂಝಿ ಸೂಪರ್ ಲೀಗ್‌ನಲ್ಲಿ ವಿಕೆಟ್ ಪಡೆದಾಗ ಶಂಸಿ ಮಾಡಿರುವ ಮ್ಯಾಜಿಕ್ ಸಖತ್ ವೈರಲ್ ಆಗುತ್ತಿದೆ. ಪಾರ್ಲ್ ರಾಕ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಶಂಸಿ, ಡರ್ಬನ್ ಹೀಟ್ ವಿರುದ್ಧ ಪಂದ್ಯದಲ್ಲಿ ಜಾದೂ ಮೆರೆದಿದ್ದಾರೆ. ಶಂಸಿ ಬೌಲಿಂಗ್​ನಲ್ಲಿ ವಿಹಾಬ್ ಲುಬ್ಬೆ ಸಿಕ್ಸ್​ಗೆಂದು ಅಟ್ಟಿದ ಚೆಂಡು ನೇರವಾಗಿ ಹರ್ಡಸ್ ವಿಲ್‌ಜಿಯೋನ್ ಕೈಯೊಳಗೆ ಸೆರೆಯಾಯಿತು.

ಈ ಸಂದರ್ಭ ಶಂಸಿ ಕೈಯಲ್ಲಿದ್ದ ಕೆಂಪು ಕರವಸ್ತ್ರವನ್ನು ಕೋಲಾಗಿ ಮ್ಯಾಜಿಕ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, "ಚಿಕ್ಕವನಿಂದಲೇ ನನಗೆ ಮ್ಯಾಜಿಕ್ ಎಂದರೆ ತುಂಬಾ ಇಷ್ಟ. ಮ್ಯಾಜಿಕ್ ನನ್ನ ಹವ್ಯಾಸ. ನಾನು 15 ವರ್ಷ ಇರುವಾಗಲೇ ಜಾದೂಗಾರನಾಗಲು ಬಯಸಿದ್ದೆ" ಎಂದು ಹೇಳಿದರು.

 


ವಿಂಡೀಸ್ ವಿರುದ್ಧದ ಸರಣಿಯಲ್ಲೂ ಕಣಕ್ಕಿಳಿಯಲ್ಲ ಸ್ಯಾಮ್ಸನ್​; ಯಾಕೆ?, ಇಲ್ಲಿವೆ ಕಾರಣ!

ಸದ್ಯ ಶಂಸಿ ಅವರು ವಿಕೆಟ್ ಪಡೆದಾಗ ಮೈದಾನದಲ್ಲಿ ಜಾದೂ ಮಾಡಿ ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಪಾರ್ಲ್ ರಾಕ್ಸ್ ವಿರುದ್ಧ ಡರ್ಬನ್ ಹೀಟ್ ತಂಡ 6 ವಿಕೆಟ್​ಗಳ ಜಯ ಸಾಧಿಸಿತು.

ಮೊದಲು ಬ್ಯಾಟ್ ಮಾಡಿದ ರಾಕ್ಸ್​ ತಂಡ 20 ಓವರ್​ಗೆ 2 ವಿಕೆಟ್ ಕಳೆದುಕೊಂಡು 195 ರನ್ ಬಾರಿಸಿತು. ಕ್ಯಾಮ್ರೊನ್ ಡೆಲ್ಪೋರ್ಟ್​ 84 ರನ್ ಸಿಡಿಸಿದರೆ ನಾಯಕ ಫಾಫ್ ಡುಪ್ಲೆಸಿಸ್ ಅಜೇಯ 66 ರನ್ ಕಲೆಹಾಕಿದರು. 196 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಡರ್ಬರ್ ತಂಡ 18.5 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿ ಗೆಲುವು ಸಾಧಿಸಿತು. ಅಲೆಕ್ಸ್​ ಹೇಲ್ಸ್ ಅಜೇಯ 97 ರನ್ ಚಚ್ಚಿದರು.

First published:December 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ