ಟಾರ್ಗೆಟ್ 223; ಗುರಿ ಮುಟ್ಟಿದ್ದು ಕೇವಲ 19.1 ಓವರ್​ನಲ್ಲಿ; ಇಂಗ್ಲೆಂಡ್ ನಾಯಕನ ಸಿಡಿಲಬ್ಬರದ ಬ್ಯಾಟಿಂಗ್!

South Africa vs England T20I: ಡೇವಿಡ್ ಮಲನ್ ಬಂದ ಬೆನ್ನಲ್ಲೆ 11 ರನ್​ಗೆ ಔಟ್ ಆದರು. ಬಳಿಕ ಶುರುವಾಗಿದ್ದು ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಆಟ. ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ಹೊತ್ತ ಮಾರ್ಗನ್ ಮನಬಂದಂತೆ ಬ್ಯಾಟ್ ಬೀಸಿದರು.

ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ರ್ಯಾಂಕಿಂಗ್ನಲ್ಲಿ ಏರಿಕೆ ಕಂಡಿದ್ದಾರೆ. 687 ರೇಟಿಂಗ್ ಹೊಂದಿ 9ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ರ್ಯಾಂಕಿಂಗ್ನಲ್ಲಿ ಏರಿಕೆ ಕಂಡಿದ್ದಾರೆ. 687 ರೇಟಿಂಗ್ ಹೊಂದಿ 9ನೇ ಸ್ಥಾನಕ್ಕೆ ಜಿಗಿದಿದ್ದಾರೆ.

  • Share this:
ಇಂಗ್ಲೆಂಡ್ ತಂಡ ಟಿ-20 ಸರಣಿ ವಶಪಡಿಸಿಕೊಳ್ಳುವ ಮೂಲಕ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಭರ್ಜರಿ ಆಗಿ ಅಂತ್ಯಗೊಳಿಸಿದೆ. ಮೊದಲೆರಡು ಟಿ-20 ಯಂತೆ ಅಂತಿಮ ಮೂರನೇ ಪಂದ್ಯವೂ ರೋಚಕತೆಯಿಂದ ಕೂಡಿತ್ತು. ಇಂಗ್ಲೆಂಡ್ 5 ವಿಕೆಟ್​ಗಳ ಗೆಲುವು ಸಾಧಿಸುವ ಮೂಲಕ 2-1 ಅಂತರದಿಂದ ಸರಣಿ ವಶಪಡಿಸಿಕೊಂಡಿತು.

ಇಡೀ ಪಂದ್ಯದ ಹೈಲೇಟ್ಸ್​ ಇಂಗ್ಲೆಂಡ್ ನಾಯಕ ಇಯಾಮ್ ಮಾರ್ಗನ್ ಆಟ. ಈ ಟಿ-20 ಪಂದ್ಯದಲ್ಲಿ ಹರಿದುಬಂದಿದ್ದು ಬರೋಬ್ಬರಿ 448 ರನ್​ಗಳು, 28 ಸಿಕ್ಸ್​​. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಓಪನರ್​ಗಳಾದ ತೆಂಬಾ ಬವುಮಾ ಹಾಗೂ ನಾಯಕ ಕ್ವಿಂಟನ್ ಡಿಕಾಕ್ ತಲಾ 24 ಎಸೆತಗಳಲ್ಲಿ 49 ಹಾಗೂ 35 ರನ್ ಬಾರಿಸಿದರು.

South Africa vs England, 3rd T20I in Centurion: As it happened
ಇಂಗ್ಲೆಂಡ್ ತಂಡ.


IPL 2020: ಕೊಹ್ಲಿ ಪಡೆಯ ಮೊದಲ ಎದುರಾಳಿ ಕೆಕೆಆರ್; ಆರ್​ಸಿಬಿ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!

ಕಳೆದ ಪಂದ್ಯದಲ್ಲಿ ಮಿಂಚಿದ್ದ ರಾಸ್ಸಿ ವಂಡರ್ ಡಸ್ಸೆನ್ 11 ರನ್​ಗೆ ತೃಪ್ತಿ ಪಟ್ಟರು. ಈ ಸಂದರ್ಭ ಅಬ್ಬರಿಸಲು ಶುರು ಮಾಡಿದ ಹೆನ್ರಿಚ್ ಕ್ಲಾಸೆನ್ ಸ್ಫೋಟಕ ಆಟವಾಡಿದರು. ಕೇವಲ 33 ಎಸೆತಗಳಲ್ಲಿ  ತಲಾ 4 ಬೌಂಡರಿ, 4 ಸಿಕ್ಸರ್ ಸಿಡಿಸಿ 66 ರನ್ ಬಾರಿಸಿದರು.

ಡೇವಿಡ್ ಮಿಲ್ಲರ್ 20 ಎಸೆತಗಳಲ್ಲಿ ಅಜೇಯ 35 ರನ್ ಗಳಿಸಿದರು. ಅಂತಿಮವಾಗಿ ಆಫ್ರಿಕಾ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 222 ರನ್ ಕಲೆಹಾಕಿತು. ಬೃಹತ್ ಟಾರ್ಗೆಟ್ ಬೆನ್ನಟ್ಟಲು ಶುರು ಮಾಡಿದ ಕ್ರಿಕೆಟ್ ಜನಕರು ಆರಂಭದಲ್ಲೇ ಜೇಸನ್ ರಾಯ್(7) ವಿಕೆಟ್ ಕಳೆದುಕೊಂಡಿತು.

2ನೇ ವಿಕೆಟ್​ಗೆ ಜೊತೆಯಾದ ಜಾಸ್ ಬಟ್ಲರ್ ಹಾಗೂ ಜಾನಿ ಬೈರ್​ಸ್ಟೋ ತಂಡದ ಗೆಲುವಿಗೆ ಹೋರಾಟ ನಡೆಸಿದರು. 91 ರನ್​ಗಳ ಜೊತೆಯಾಟ ಆಡಿದರು. 10 ಓವರ್​ಗೂ ಮುನ್ನ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಬಟ್ಲರ್ 29 ಎಸೆತಗಳಲ್ಲಿ 57 ರನ್ ಸಿಡಿಸಿದರೆ, ಬೈರ್​ಸ್ಟೋ 34 ಎಸೆತಗಳಲ್ಲಿ 64 ರನ್ ಗಳಿಸಿದರು.

 IND vs NZ: ಟೀಂ ಇಂಡಿಯಾ ಸೇರಿದ ಮತ್ತೊಬ್ಬ ಸ್ಟಾರ್ ಆಟಗಾರ; ಕಿವೀಸ್ ಪಡೆಯಲ್ಲಿ ಶುರುವಾಗಿದೆ ನಡುಕ

ಡೇವಿಡ್ ಮಲನ್ ಬಂದ ಬೆನ್ನಲ್ಲೆ 11 ರನ್​ಗೆ ಔಟ್ ಆದರು. ಬಳಿಕ ಶುರುವಾಗಿದ್ದು ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಆಟ. ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ಹೊತ್ತ ಮಾರ್ಗನ್ ಮನಬಂದಂತೆ ಬ್ಯಾಟ್ ಬೀಸಿದರು. ಸಿಕ್ಸರ್​ಗಳ ಮಳೆ ಸುರಿಸಿದ ಇವರು ಕೇವಲ 22 ಎಸೆತಗಳಲ್ಲಿ 7 ಸಿಕ್ಸರ್ ಸಿಡಿಸಿ ಅಜೇಯ 57 ರನ್ ಚಚ್ಚಿ ಗೆಲುವು ತಂದುಕೊಟ್ಟರು.

19.1 ಓವರ್​​ನಲ್ಲೇ ಇಂಗ್ಲೆಂಡ್ 5 ವಿಕೆಟ್ ಕಳೆದುಕೊಂಡು 226 ರನ್ ಬಾರಿಸಿ 5 ವಿಕೆಟ್​ಗಳ ಗೆಲುವು ಸಾಧಿಸಿತು. ಮೂರು ಟಿ-20 ಪಂದ್ಯದಲ್ಲಿ 2-1 ಅಂತರದ ಮುನ್ನಡೆ ಸಾಧಿಸಿ ಆಫ್ರಿಕಾ ಪ್ರವಾಸ ಕೊನೆಗೊಳಿಸಿತು. ಪಂದ್ಯಶ್ರೇಷ್ಠ- ಸರಣಿಶ್ರೇಷ್ಠ ಮಾರ್ಗನ್ ಬಾಜಿಕೊಂಡರು.

First published: