ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಟಿ-20 ಸರಣಿ ಆಡುತ್ತಿದೆ. ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಕಾಂಗರೂ ಪಡೆ ಆಫ್ರಿಕಾ ವಿರುದ್ಧ 107 ರನ್ಗಳ ಬೃಹತ್ ಅಂತರದ ಗೆಲುವು ಸಾಧಿಸಿತು.
ಆಸ್ಟ್ರೇಲಿಯಾ ನೀಡಿದ್ದ ಬೃಹತ್ 197 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 14.3 ಓವರ್ನಲ್ಲಿ ಕೇವಲ 89 ರನ್ಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿತು. ಹರಿಣಗಳು ಇಷ್ಟು ಕಡಿಮೆ ಮೊತ್ತಕ್ಕೆ ಪತನಗೊಳ್ಳಲು ಪ್ರಮುಖ ಕಾರಣ ಆಸೀಸ್ ಸ್ಪಿನ್ನರ್ ಆಶ್ಟನ್ ಅಗರ್.
![‘He’s a rockstar’: Hat-trick hero Ashton Agar reveals how Ravindra Jadeja ‘inspired’ him in difficult times]()
ರವೀಂದ್ರ ಜಡೇಜಾ, ಟೀಂ ಇಂಡಿಯಾ ಆಟಗಾರ.
India vs New Zealand: ವಿಲಿಯಮ್ಸನ್ ಭರ್ಜರಿ ಆಟ; ನ್ಯೂಜಿಲೆಂಡ್ 51 ರನ್ಗಳ ಮುನ್ನಡೆ
ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ ಅಗರ್, 4 ಓವರ್ಗೆ 24 ರನ್ ನೀಡಿ ಒಟ್ಟು 5 ವಿಕೆಟ್ ಕಬಳಿಸಿದರು. ತನ್ನ ಮೊದಲ ಓವರ್ನಲ್ಲೇ ಫಾಫ್ ಡುಪ್ಲೆಸಿಸ್, ಆ್ಯಂಡಿಲ್ ಫೆಹ್ಲುಕ್ವಾಯೊ ಮತ್ತು ಡೇಲ್ ಸ್ಟೈನ್ ಅವರನ್ನು ಔಟ್ ಮಾಡಿ ಹ್ಯಾಟ್ರಿಕ್ ಸಾಧನೆ ಮಾಡಿದರು.
ಪಂದ್ಯ ಮುಗಿದ ಬಳಿಕ ಮಾತನಾಡಿದ ಅಗರ್, ನನ್ನ ಈ ಪ್ರದರ್ಶನಕ್ಕೆ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಪ್ರೇರಣೆ ಎಂದು ಹೇಳಿದ್ದಾರೆ.
"ಭಾರತ ಪ್ರವಾಸ ಕೈಗೊಂಡಿದ್ದ ವೇಳೆ ನಾನು ಜಡೇಜಾ ಅವರೊಂದಿಗೆ ಮಾತುಕತೆ ನಡೆಸಿದ್ದೆ. ಅವರಿಂದ ಒಂದಿಷ್ಟು ವಿಚಾರಗಳನ್ನು ಕಲಿತುಕೊಂಡೆ. ಕ್ರಿಕೆಟ್ ಜಗತ್ತಲ್ಲಿ ಜಡೇಜಾ ನನ್ನ ನೆಚ್ಚಿನ ಆಟಗಾರ" ಎಂಬುದು ಅಗರ್ ಮಾತು.
"ಜಡೇಜಾ ರೀತಿಯಲ್ಲಿ ನಾನು ಕ್ರಿಕೆಟ್ ಆಡಲು ಇಷ್ಟ ಪಡುತ್ತೇನೆ. ಅವರೊಬ್ಬ ರಾಕ್ ಸ್ಟಾರ್. ಫಿಲ್ಡಿಂಗ್, ಬೌಲಿಂಗ್, ಬ್ಯಾಟಿಂಗ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಅವರಂತೆ ನಾನು ಆಗಬೇಕೆಂದು" ಜಡೇಜಾರನ್ನು ಹಾಡಿಹೊಗಳಿದ್ದಾರೆ.
IND vs NZ: (VIDEO) ರಹಾನೆ ಔಟ್ ಆಗಬಾರದೆಂದು ತಾನೇ ರನೌಟ್ಗೆ ಬಲಿಯಾದ್ರಾ ಪಂತ್?
ಮೊದಲ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಬಾರಿಸಿತು. ಸ್ಟೀವ್ ಸ್ಮಿತ್ 32 ಎಸೆತಗಳಲ್ಲಿ 45 ರನ್, ನಾಯಕ ಆ್ಯರೋನ್ ಫಿಂಚ್ 27 ಎಸೆತಗಳಲ್ಲಿ 42 ಹಾಗೂ ಅಲೆಕ್ಸ್ ಕ್ಯಾರಿ 27 ರನ್ ಬಾರಿಸಿದರು.
ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 14.3 ಓವರ್ನಲ್ಲಿ 89 ರನ್ಗೆ ಸರ್ವಪತನ ಕಂಡಿತು. ಆಫ್ರಿಕಾ ಪರ ಫಾಫ್ ಡುಪ್ಲೆಸಿಸ್ 24 ಹಾಗೂ ಕಗಿಸೊ ರಬಾಡ 22 ರನ್ ಗಳಿಸಿದ್ದೇ ಹೆಚ್ಚು.
107 ರನ್ಗಳ ಬೃಹತ್ ಅಂತರದ ಗೆಲುವಿನೊಂದಿಗೆ ಫಿಂಚ್ ಪಡೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ