SL vs SA T20 Cricket| ತವರಿನಲ್ಲೇ ಶ್ರೀಲಂಕಾಗೆ ಮುಖಭಂಗ; ಟಿ20 ಸರಣಿ ಕ್ಲೀನ್ ಸ್ವೀಪ್ ಮಾಡಿದ ದಕ್ಷಿಣ ಆಫ್ರಿಕಾ

ಶ್ರೀಲಂಕಾ ಸೋಲಿಗೆ ಅವರ ಬ್ಯಾಟಿಂಗ್ ವೈಫಲ್ಯವೇ ಕಾರಣ ಎನ್ನಲಾಗುತ್ತಿದೆ. ಯಾವುದೇ ಬ್ಯಾಟ್ಸ್​ಮನ್​ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಲಂಕಾ ಸತತ ಸೋಲಿನಿಂದ ಕಂಗೆಟ್ಟಿದ್ದು, ಟಿ20 ವಿಶ್ವಕಪ್ ನೇರ ಪ್ರವೇಶಕ್ಕೂ ಆಯ್ಕೆಯಾಗದೆ ಅರ್ಹತಾ ಸುತ್ತಿನಲ್ಲಿ ಆಡಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಕ್ವಿಂಟನ್​ ಡಿ ಕಾಕ್-ಹೆಂಡ್ರಿಕ್ಸ್​

ಕ್ವಿಂಟನ್​ ಡಿ ಕಾಕ್-ಹೆಂಡ್ರಿಕ್ಸ್​

 • Share this:
  ಅಕ್ಟೋಬರ್​ನಲ್ಲಿ ಆರಂಭವಾಗಲಿರುವ ಟಿ-20 ವಿಶ್ವಕಪ್​ಗೆ (T20 World Cup) ಎಲ್ಲಾ ದೇಶಗಳು ಭಾರೀ ಸಿದ್ಧತೆ ನಡೆಸುತ್ತಿವೆ. ಟಿ20 ಸರಣಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸುತ್ತಿವೆ. ಇತ್ತೀಚೆಗೆ ಬಾಂಗ್ಲಾದೇಶ (Bangladesh Cricket) ತಂಡ ಸಹ ಒಂದೇ ತಿಂಗಳಲ್ಲಿ ಮೂರು ಟಿ20 ಸರಣಿಗಳನ್ನು ಗೆಲ್ಲುವ ಮೂಲಕ ತಾವೂ ಸಹ ಈ ಭಾರಿಯ ಟೂರ್ನಿಯಲ್ಲಿ ಕಠಿಣ ಸ್ಪರ್ಧಿ ಎಂದು ಸಾರಿದ್ದರು. ಆದರೆ, ಒಂದು ಕಾಲದಲ್ಲಿ ಬಲಿಷ್ಠ ತಂಡವಾಗಿದ್ದ, ಹೆಸರಾಂತ ಆಟಗಾರರನ್ನು ವಿಶ್ವ ಕ್ರಿಕೆಟ್​ಗೆ ಕೊಡುಗೆ ನೀಡಿದ್ದ ಮತ್ತು ಮಾಜಿ ಚಾಂಪಿಯನ್ (Farmer Champion) ತಂಡ ಎನಿಸಿಕೊಂಡಿದ್ದ ಶ್ರೀಲಂಕಾ ಕ್ರಿಕೆಟ್ (Srilanka Cricket)​ ಮಾತ್ರ ಇದೀಗ ಶೋಚನೀಯ ಸ್ಥಿತಿ ಅನುಭವಿಸುತ್ತಿದೆ. ಸತತ ಸೋಲುಗಳ ಬೆನ್ನತ್ತಿರುವ ಶ್ರೀಲಂಕಾ ಟಿ20 ವಿಶ್ವಕಪ್​ಗೂ ಮುಂಚಿತವಾಗಿ ತವರಿನಲ್ಲೇ ಆಯೋಜಿಸಿದ್ದ ಕೊನೆಯ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಕ್ಲೀನ್ ಸ್ವೀಪ್ (Clean Sweep) ಸೋಲು ಅನುಭವಿಸುವ ಮೂಲಕ ತೀವ್ರ ಮುಖಭಂಗಕ್ಕೆ ಗುರಿಯಾಗಿದೆ.

  ದಕ್ಷಿಣ ಆಫ್ರಿಕಾ ಕ್ರಿಕೆಟ್​ ತಂಡ ತಲಾ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಯನ್ನು ಆಡುವ ಸಲುವಾಗಿ ಕಳೆದ ಆಗಸ್ಟ್​ನಲ್ಲೇ ಶ್ರೀಲಂಕಾಗೆ ಆಗಮಿಸಿತ್ತು. ಏಕದಿನ ಸರಣಿಯಲ್ಲಿ ಶ್ರೀಲಂಕಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರೂ ಸಹ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಮೊದಲ ಏಕದಿನ ಪಂದ್ಯದಲ್ಲೇ ಅವಿಷ್ಕಾ ಫರ್ನಾಡೋ ಅವರ (118) ಶತಕದ ನೆರವಿನಿಂದ 300 ರನ್ ದಾಖಲಿಸಿತ್ತು. ಗುರಿ ಬೆನ್ನಟ್ಟಿದ್ದ ದಕ್ಷಿಣ ಆಪ್ರಿಕಾ ಕೊನೆಯಲ್ಲಿ ಎಡವುವ ಮೂಲಕ ಸೋಲನುಭವಿಸಿತ್ತು.

  ಆದರೆ, ಜಾನೇಮನ್ ಮಲಾನ್ ಅವರ ಶತಕದ (121) ನೆರವಿನಿಂದ ಎರಡನೇ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ದಕ್ಷಿಣ ಆಫ್ರಿಕಾ, ಮೂರನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ನೀಡಿದ 203 ರನ್​ಗಳ ಕನಿಷ್ಟ ಟಾರ್ಗೆಟ್​ ಅನ್ನು ಬೆನ್ನತ್ತುವಲ್ಲಿ ವಿಫಲರಾಗಿ ಏಕದಿನ ಸರಣಿಯನ್ನು ಕೈಚೆಲ್ಲಿದ್ದರು. ಆದರೆ, ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

  ಟಿ20 ಸರಣಿ ಕ್ಲೀನ್ ಸ್ವೀಪ್;

  ಏಕದಿನ ಸರಣಿಯಲ್ಲಿ ಸೋಲನುಭವಿಸಿದ್ದ ದಕ್ಷಿಣ ಆಫ್ರಿಕಾ ಟಿ20 ಸರಣಿಯಲ್ಲಿ ಆ ಸೇಡನ್ನು ತೀರಿಸಿಕೊಂಡಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಎಲ್ಲಾ ಮೂರೂ ಪಂದ್ಯಗಳನ್ನೂ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿಗೆ ಲಂಕಾ ನೆಲದಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದಂತಾಗಿದೆ.

  ಇದನ್ನೂ ಓದಿ: New IPL Teams- ಅಕ್ಟೋಬರ್ 17ರಂದು ಎರಡು ಹೊಸ ಐಪಿಎಲ್ ತಂಡಗಳಿಗೆ ಹರಾಜು

  ಶ್ರೀಲಂಕಾ ಸೋಲಿಗೆ ಅವರ ಬ್ಯಾಟಿಂಗ್ ವೈಫಲ್ಯವೇ ಕಾರಣ ಎನ್ನಲಾಗುತ್ತಿದೆ. ಯಾವುದೇ ಬ್ಯಾಟ್ಸ್​ಮನ್​ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಲಂಕಾ ಸತತ ಸೋಲಿನಿಂದ ಕಂಗೆಟ್ಟಿದ್ದು, ಟಿ20 ವಿಶ್ವಕಪ್ ನೇರ ಪ್ರವೇಶಕ್ಕೂ ಆಯ್ಕೆಯಾಗದೆ ಅರ್ಹತಾ ಸುತ್ತಿನಲ್ಲಿ ಆಡಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಒಂದು ವೇಳೆ ಅರ್ಹತಾ ಸುತ್ತಿನಲ್ಲೂ ಲಂಕಾದ ಕಳಪೆ ಆಟ ಮುಂದುವರೆದರೆ ಮೊದಲ ಬಾರಿಗೆ ಟಿ20 ವಿಶ್ವಕಪ್​ ಟೂರ್ನಿಯಿಂದ ಶ್ರೀಲಂಕಾ ಹೊರಬಿದ್ದರೂ ಅಚ್ಚರಿ ಇಲ್ಲ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: