IND vs SA: ಭಾರತ ವಿರುದ್ಧ ಸೌತ್ ಆಫ್ರಿಕಾಗೆ 7 ವಿಕೆಟ್ ಜಯಭೇರಿ

Johannesburg Test: ನಾಯಕ ಡೀನ್ ಎಲ್ಗಾರ್ ಅವರ ಭರ್ಜರಿ ಆಟದ ನೆರವಿನಿಂದ ಸೌತ್ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯವನ್ನ 7 ವಿಕೆಟ್​ಗಳಿಂದ ಗೆದ್ದಿದೆ. ಈ ಮೂಲಕ ಭಾರತ ವಿರುದ್ಧದ ಟೆಸ್ಟ್ ಸರಣಿ ಸದ್ಯ 1-1ರಲ್ಲಿ ಸಮದಲ್ಲಿದೆ. ಕೇಪ್​ಟೌನ್​ನಲ್ಲಿ 3ನೆ ಪಂದ್ಯ ನಡೆಯಲಿದೆ.

ಡೀನ್ ಎಲ್ಗಾರ್

ಡೀನ್ ಎಲ್ಗಾರ್

  • Share this:
    ಜೋಹಾನ್ಸ್​ಬರ್ಗ್, ಜ. 6: ಸೆಂಚೂರಿಯನ್​ನಲ್ಲಿ ಆದ ಸೋಲಿಗೆ ಜೋನಾಹ್ಸ್​ಬರ್ಗ್​ನಲ್ಲಿ ಆತಿಥೇಯ ಸೌತ್ ಆಫ್ರಿಕಾ ಸೇಡು ತೀರಿಸಿಕೊಂಡಿದೆ. ಭಾರತ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 7 ವಿಕೆಟ್​ಗಳಿಂದ ನಿರಾಯಾಸ ಗೆಲುವು ಪಡೆಯಿತು. ಇಂದು ನಾಲ್ಕನೇ ದಿನ ಅರ್ಧ ದಿನದ ಆಟವನ್ನು ಮಳೆ ನಿಲ್ಲಿಸಿದರೂ ಆತಿಥೇಯರ ಗೆಲುವನ್ನು ತಡೆಯಲು ಆಗಲಿಲ್ಲ. ನಾಯಕ ಡೀನ್ ಎಲ್ಗಾರ್ ಭರ್ಜರಿ ಆಟ ತೋರಿ ಸೌತ್ ಆಫ್ರಿಕಾಗೆ ನಿರೀಕ್ಷೆಮೀರಿದ ಸುಲಭ ಗೆಲುವು ತಂದುಕೊಡಲು ಕಾರಣವಾದರು. ಸೌತ್ ಆಫ್ರಿಕಾದ ಈ ಗೆಲುವಿನೊಂದಿಗೆ ಸರಣಿ ಸದ್ಯ 1-1ರಿಂದ ಸಮಬಲವಾಗಿದೆ.

    ನಿನ್ನೆ ಮೂರನೇ ದಿನಾಂತ್ಯದಲ್ಲಿ 240 ರನ್ ಟಾರ್ಗೆಟ್ ಚೇಸ್ ಮಾಡುತ್ತಾ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದ್ದ ಸೌತ್ ಆಫ್ರಿಕಾ ಇಂದು ಆಟ ಮುಂದುವರಿಸಿತು. ವಾನ್ ಡರ್ ಡುಸೆನ್ ಮತ್ತು ಡೀನ್ ಎಲ್ಗರ್ ಜೊತೆಯಾಟ ಸರಾಗವಾಗಿ ಮುಂದುವರಿಯಿತು. ಇಬ್ಬರೂ 3ನೇ ವಿಕೆಟ್​ಗೆ 82 ರನ್ ಜೊತೆಯಾಟ ಆಡಿದರು. ಡುಸೆನ್ ನಿರ್ಗಮನದ ಬಳಿಕ ಡೀನ್ ಎಲ್ಗಾರ್​ಗೆ ಟೆಂಬ ಬವುಮ ಜೊತೆಯಾದರು. ಇಬ್ಬರೂ ಒಳ್ಳೆಯ ಫಾರ್ಮ್​ನಲ್ಲಿದ್ದವರೇ. ಪಿಚ್ ಕೂಡ ಬ್ಯಾಟಿಂಗ್​ಗೆ ಹೆಚ್ಚು ಸಹಕಾರಿ ಆಗಿತ್ತು. ಹೀಗಾಗಿ, ಬಹಳ ನಿರಾಯಾಸವಾಗಿ ಇಬ್ಬರೂ ರನ್ ಗಳಿಸಿದರು.

    71ನೇ ಟೆಸ್ಟ್ ಪಂದ್ಯ ಆಡಿದ 34 ವರ್ಷದ ಡೀನ್ ಎಲ್ಗಾರ್ ತಮ್ಮ 14ನೇ ಶತಕದಿಂದ ಸ್ವಲ್ಪದರಲ್ಲಿ ವಂಚಿತರಾದರು. ಎಲ್ಗಾರ್ 96 ರನ್ ಗಳಿಸಿ ಅಜೇಯರಾಗಿ ಉಳಿದರು.

    ಇದನ್ನೂ ಓದಿ: World Cup Team India: ಮಾರ್ಚ್​ನಿಂದ ಮಹಿಳಾ ಓಡಿಐ ವಿಶ್ವಕಪ್: ಭಾರತ ತಂಡ ಪ್ರಕಟ, ಮಿಥಾಲಿ ಕ್ಯಾಪ್ಟನ್

    ಮೊದಲ ಬಾರಿಗೆ ಭಾರತವನ್ನ ಸೋಲಿಸಿದ ಸೌತ್ ಆಫ್ರಿಕಾ:

    ಜೋಹಾನ್ಸ್​ಬರ್ಗ್​ನ ಈ ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ಸೌತ್ ಆಫ್ರಿಕಾ ಮೊದಲ ಬಾರಿಗೆ ಟೆಸ್ಟ್ ಪಂದ್ಯ ಗೆದ್ದಿದೆ. ಭಾರತ ಈ ಹಿಂದೆ ವಾಂಡರರ್ಸ್​ನಲ್ಲಿ ಸೋತಿದ್ದೇ ಇಲ್ಲ. ಭಾರತದ ಭದ್ರಕೋಟೆ ಎಂದು ಪರಿಗಣಿಸಲಾಗಿತ್ತು.

    ಕೇಪ್​ಟೌನ್​ನಲ್ಲಿ ಕೊನೆಯ ಪಂದ್ಯ:

    ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನ ಭಾರತ ಗೆದ್ದಿತ್ತು. ಈಗ ಎರಡನೇ ಪಂದ್ಯ ಸೌತ್ ಆಫ್ರಿಕಾ ಪಾಲಾಗಿದೆ. ಸರಣಿಯ ಕೊನೆಯ ಪಂದ್ಯ ಕೇಪ್​ಟೌನ್​ನಲ್ಲಿ ಜ. 11ರಂದು ಆರಂಭವಾಗಲಿದೆ.

    ಇದನ್ನೂ ಓದಿ: Bhanuka Rajapaksa: ಕೇವಲ 30ರ ವಯಸ್ಸಿಗೆ ಲಂಕಾ ಕ್ರಿಕೆಟಿಗ ರಾಜಪಕ್ಸ ನಿವೃತ್ತರಾಗಲು ಏನು ಕಾರಣ

    ಸ್ಕೋರು ವಿವರ:

    ಭಾರತ ಮೊದಲ ಇನ್ನಿಂಗ್ಸ್ 63.1 ಓವರ್ 202/10

    ಸೌತ್ ಆಫ್ರಿಕಾ ಮೊದಲ ಇನ್ನಿಂಗ್ಸ್ 79.4 ಓವರ್ 229/10

    ಭಾರತ ಎರಡನೇ ಇನ್ನಿಂಗ್ಸ್ 60.1 ಓವರ್ 266/10

    ಸೌತ್ ಆಫ್ರಿಕಾ ಎರಡನೇ ಇನ್ನಿಂಗ್ಸ್ 67.4 ಓವರ್ 243/3
    (ಡೀನ್ ಎಲ್ಗರ್ ಅಜೇಯ 96, ಏಡನ್ ಮರ್ಕ್ರಮ್ 31, ಕೀಗನ್ ಪೀಟರ್ಸನ್ 28 ರನ್, ರಸೀ ವಾನ್ ಡರ್ ಡುಸೆನ್ 40, ಟೆಂಬಾ ಬವುಮ ಅಜೇಯ 23 ರನ್)
    Published by:Vijayasarthy SN
    First published: