ಇಂಗ್ಲೆಂಡ್ನಲ್ಲಿ ಮೇ 30 ರಿಂದ ಆರಂಭವಾಗುವ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಶ್ರೀಲಂಕಾ ತಂಡ 15 ಮಂದಿ ಆಟಗಾರರ ಹೆಸರನ್ನು ಪ್ರಕಟಿಸಿದೆ.
ಈ ಹಿಂದೆ ತಿಳಿಸಿದಂತೆ ದಿಮುತ್ ಕರುಣರತ್ನೆ ನಾಯಕತ್ವದಲ್ಲಿ ಶ್ರೀಲಂಕಾ ತಂಡ ಮುನ್ನಡೆಯುತ್ತಿದ್ದು, ಮೂವರು ಮಾಜಿ ನಾಯಕರಿಗೂ ಸ್ಥಾನ ನೀಡಲಾಗಿದೆ. ಲಸಿತ್ ಮಾಲಿಂಗಾ, ಏಂಜಲೋ ಮ್ಯಾಥ್ಯೂಸ್ ಹಾಗೂ ತಿಸರಾ ಪೆರೇರಾಗೆ ಅವಕಾಶ ಸಿಕ್ಕಿದೆ. ಈ ಮೂಲಕ ಅನಭವಿ ಆಟಗಾರರ ಜೊತೆ ಬಲಿಷ್ಠ ಯುವ ಪಡೆಯನ್ನು ಶ್ರೀಲಂಕಾ ತಂಡ ಹೊಂದಿದೆ.
ಇದನ್ನೂ ಓದಿ: ಈ ಬಾರಿ ನಾವು ಕಪ್ ಗೆಲ್ಲಲ್ಲ; ಟೂರ್ನಿ ಆರಂಭಕ್ಕೂ ಮುನ್ನವೆ ನಿರ್ಧರಿಸಿದ್ರ ಕೊಹ್ಲಿ?
ಶ್ರೀಲಂಕಾ ವಿಶ್ವಕಪ್ ತಂಡ: ದಿಮುತ್ ಕರುಣರತ್ನೆ (ನಾಯಕ), ಅವಿಶ್ಕಾ ಫೆರ್ನಾಂಡೋ, ಲಹಿರು ತಿರುಮನ್ನೆ, ಕುಸಾಲ್ ಪೆರೆರಾ, ಕುಸಾಲ್ ಮೆಂಡಿಸ್, ಏಂಜೆಲೋ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಜೆಫ್ರಿ ವಾಂಡರ್ಸ್ಸೆ, ತಿಸಾರ ಪೆರೇರಾ, ಲಸಿತ್ ಮಾಲಿಂಗ, ಇಸುರು ಉದನ, ಸುರಂಗ ಲಕ್ಮಲ್, ನುವಾನ್ ಪ್ರದೀಪ್, ಜೀವನ್ ಮೆಂಡಿಸ್, ಮಿಲಿಂಡಾ ಸಿರಿವರ್ದನ.
ಇನ್ನು ದಕ್ಷಿಣ ಆಫ್ರಿಕಾ ತಂಡ ಕೂಡ 15 ಆಟಗಾರರ ಹೆಸರನ್ನು ಬಿಡುಗಡೆ ಮಾಡಿದ್ದು, ಕಳೆದ 2015ರ ವಿಶ್ವಕಪ್ನಲ್ಲಿ ಆಡಿದ ಏಳು ಆಟಗಾರರನ್ನು 2019ರ ವಿಶ್ವಕಪ್ನಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಮುಖವಾಗಿ ವೇಗಿ ಡೇಲ್ ಸ್ಟೈನ್ ಹಾಗೂ ಪ್ರಮುಖ ಬ್ಯಾಟ್ಸ್ಮನ್ ಹಶೀಮ್ ಆಮ್ಲಾಗೆ ಅವಕಾಶ ನೀಡಿದೆ.
ಇದನ್ನೂ ಓದಿ: IPL 2019: ಚೆನ್ನೈ ವಿರುದ್ಧ ಹೈದರಾಬಾದ್ ಭರ್ಜರಿ ಜಯ ಸಾಧಿಸಲು ಸಾನಿಯಾ ಮಿರ್ಜಾ ಕಾರಣವಂತೆ..!
ಸೌತ್ಆಫ್ರಿಕಾ ತಂಡ:
ಫಾಫ್ ಡುಪ್ಲೆಸಿಸ್ (ನಾಯಕ), ಜೆ ಪಿ ಡುಮಿನಿ, ಡೇವಿಡ್ ಮಿಲ್ಲರ್, ಡೇಲ್ ಸ್ಟೇನ್, ಆಯಂಡಿಲಿ ಫೆಲಿಕ್ವಾಯೋ, ಇಮ್ರಾನ್ ತಾಹಿರ್, ಕಗಿಸೋ ರಬಾಡ, ಡ್ವೇನ್ ಪ್ರಿಟೋರಿಯಸ್, ಕ್ವಿಂಟನ್ ಡಿಕಾಕ್, ಆಯನ್ರಿಚ್ ನೊರ್ಜೆ, ಲುಂಗಿ ಎನ್ಗಿಡಿ, ಆಡೆನ್ ಮಾಕ್ರಮ್, ರಸಿ ವ್ಯಾಡ್ ಹುಸೈನ್, ಹಶೀಮ್ ಆಮ್ಲಾ, ತಬ್ರಾರಿಜ್ ಶಂಸಿ.