• Home
  • »
  • News
  • »
  • sports
  • »
  • Sourav Ganguly: ಬೆಂಗಳೂರಿನಲ್ಲಿ ಗಂಗೂಲಿ; ಜನರ ಪ್ರೀತಿಗೆ ಮನಸೋತೆ ಎಂದ ದಾದಾ

Sourav Ganguly: ಬೆಂಗಳೂರಿನಲ್ಲಿ ಗಂಗೂಲಿ; ಜನರ ಪ್ರೀತಿಗೆ ಮನಸೋತೆ ಎಂದ ದಾದಾ

ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ

ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷ

ಗಂಗೂಲಿ ಅಧ್ಯಕ್ಷರಾದ ಬೆನ್ನಲ್ಲೆ ಭಾರತೀಯ ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದ್ದಾರೆ. ಈಗಾಗಲೇ ಬಾಂಗ್ಲಾದೇಶ ವಿರುದ್ಧ ಡೇ ನೈಟ್ ಟೆಸ್ಟ್​ಗೆ ವೇದಿಕೆ ಸಜ್ಜಾಗುತ್ತಿದೆ.

  • Share this:

ಬೆಂಗಳೂರು (ಅ. 31): ಮೊನ್ನೆಯಷ್ಟೆ ಬಿಸಿಸಿಐಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದರು.

ಇಲ್ಲಿರುವ ಎಸ್​ಸಿಎಗೆ ಭೇಟಿ ನೀಡಿ ರಾಹುಲ್ ದ್ರಾವಿಡ್ ಜೊತೆ ಮಾತುಕತೆ ನಡೆಸಿದ್ದಾರೆ. ರಾಷ್ಟ್ರೀಯ ಅಕಾಡೆಮಿಯ ಅಭಿವೃದ್ದಿ ಸೇರಿದಂತೆ ನೂತನ ಬದಲಾವಣೆ ಜೊತೆ ಚರ್ಚೆಸಿದ್ದಾರೆ. ಗಂಗೂಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ವಿಶೇಷವಾಗಿ ಸ್ವಾಗತಕೋರಲಾಯಿತು.

ಅಲ್ಲದೆ ದಾದಾ ಹಿಂತಿರುಗುವಾಗ ಏರ್​ಪೋಟರ್ಟ್​ನಲ್ಲಿ ಸಾಕಷ್ಟು ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಇಲ್ಲಿನ ಸೆಕ್ಯುರಿಟಿ ಸಿಬ್ಬಂದಿ ಹಾಗೂ ಅಭಿಮಾನಿಗಳ ಜೊತೆ ಸೆಲ್ಫಿ ತೆಗೆದುಕೊಂಡ ಗಂಗೂಲಿ ಜನರ ಪ್ರೀತಿಗೆ ಮನಸೋತೆ ಎಂದು ಟ್ವಿಟ್ಟರ್​ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

IND vs BAN: ಮೊದಲ ಟಿ-20 ಪಂದ್ಯಕ್ಕೆ ದಿನಗಣನೆ; ದೆಹಲಿಗೆ ಬಂದಿಳಿದ ಬಾಂಗ್ಲಾ ಆಟಗಾರರು

 ಗಂಗೂಲಿ ಹಂಚಿಕೊಂಡಿರುವ ಈ ಫೋಟೋ ಸದ್ಯ ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಅಕ್ಟೋಬರ್ 23 ರಂದು ಗಂಗೂಲಿ ಬಿಸಿಸಿಐ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.

ಗಂಗೂಲಿ ಅಧ್ಯಕ್ಷರಾದ ಬೆನ್ನಲ್ಲೆ ಭಾರತೀಯ ಕ್ರಿಕೆಟ್​ನಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದ್ದಾರೆ. ಈಗಾಗಲೇ ಬಾಂಗ್ಲಾದೇಶ ವಿರುದ್ಧ ಡೇ ನೈಟ್ ಟೆಸ್ಟ್​ಗೆ ವೇದಿಕೆ ಸಜ್ಜಾಗುತ್ತಿದೆ. “ಇದು ಒಳ್ಳೆಯ ಬೆಳವಣಿಗೆ. ಟೆಸ್ಟ್ ಕ್ರಿಕೆಟ್​ಗೆ ಇಂಥದ್ದೊಂದು ಉತ್ತೇಜನದ ಅವಶ್ಯಕತೆ ಇತ್ತು. ನಾನು ಮತ್ತು ನನ್ನ ತಂಡ ಇದಕ್ಕೆ ಕಟಿಬದ್ಧರಾಗಿದ್ದೆವು. ಇದಕ್ಕೆ ಸಮ್ಮತಿಸಿದ ವಿರಾಟ್ ಕೊಹ್ಲಿಗೆ ಧನ್ಯವಾದ” ಎಂದು ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಡೇ ನೈಟ್ ಟೆಸ್ಟ್​ ಬಗ್ಗೆ ಹೇಳಿದ್ದಾರೆ.

AUS vs SL: ಕ್ರಿಕೆಟ್​ನಲ್ಲೊಂದು ವಿಚಿತ್ರ ಘಟನೆ; ರನೌಟ್ ಮಾಡಲೋಗಿ ಬ್ಯಾಟ್ಸ್​ಮನ್​ಗೆ ಜೀವದಾನ ನೀಡಿದ ಬೌಲರ್!

 

First published: