ಬಿಸಿಸಿಐನಲ್ಲಿ ದಾದಾಗಿರಿ ಆರಂಭ; 39ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸೌರವ್ ಗಂಗೂಲಿ

ಬಿಸಿಸಿಐ ಹೊಸ ಕಾನೂನಿನ ಪ್ರಕಾರ ಆರು ವರ್ಷ ಅಧಿಕಾರ ಅನುಭವಿಸಿದ ಬಳಿಕ ಕೂಲಿಂಗ್ ಆಫ್ ಅವಧಿ ಕಡ್ಡಾಯವಾಗಿದೆ. ಸಿಎಬಿಯ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಗಂಗೂಲಿ ಪ್ರತಿಷ್ಠಿತ ಬಿಸಿಸಿಐ ಆಡಳಿತದ ನೇತೃತ್ವ ವಹಿಸಿಕೊಂಡಿದ್ದಾರೆ.

Vinay Bhat | news18-kannada
Updated:October 23, 2019, 12:20 PM IST
ಬಿಸಿಸಿಐನಲ್ಲಿ ದಾದಾಗಿರಿ ಆರಂಭ; 39ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸೌರವ್ ಗಂಗೂಲಿ
ಅಧಿಕಾರ ಸ್ವೀಕರಿಸುತ್ತಿರುವ ಗಂಗೂಲಿ
  • Share this:
ಬೆಂಗಳೂರು (ಅ. 23): ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಇಂದು ಬಿಸಿಸಿಐನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇಂದು ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಗಂಗೂಲಿ ಅವರನ್ನು 39ನೇ ಅಧ್ಯಕ್ಷರಾಗಿ ಆಯ್ಕೆಯಾದರು.

ಗಂಗೂಲಿ ಬಿಸಿಸಿಐ ಅಧ್ಯಕ್ಷ ಎಂದು ಕಳೆದ ವಾರವೇ ತೀರ್ಮಾನಿಸಲಾಗಿತ್ತು. ಅದಕ್ಕೀಗ ಅಧಿಕೃತ ಮುದ್ರೆ ಬಿದ್ದಿದೆ. ಈ ಮೂಲಕ 33 ತಿಂಗಳ ಸುಪ್ರೀಂ ಕೋರ್ಟ್ ನೇಮಿತ ಕ್ರಿಕೆಟ್ ಆಡಳಿತಾಧಿಕಾರಿ ಸಮಿತಿಯ (ಸಿಒಎ) ಆಡಳಿತಕ್ಕೂ ತೆರೆಬಿದ್ದಿದೆ.

ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಅಧ್ಯಕ್ಷರೂ ಆಗಿರುವ ಸೌರವ್ ಗಂಗೂಲಿ ಅಧ್ಯಕ್ಷರಾಗಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಪುತ್ರ, ಗುಜರಾತ್ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿ ಜಯ್ ಷಾ ಕಾರ್ಯದರ್ಶಿಯಾಗಿ ಅವಿರೋಧವಾಗಿ ಇಂದು ಆಯ್ಕೆಯಾಗಿದ್ದಾರೆ.

 


ಇಂಟರ್​ನೆಟ್​ನಲ್ಲಿ ಧೋನಿ ಅಂತ ಸರ್ಚ್​ ಮಾಡುವ ಮುನ್ನ ಯೋಚಿಸಿ; ಇಲ್ಲಿದೆ ಆಘಾತಕಾರಿ ಸುದ್ದಿ!

ಅಲ್ಲದೆ ಉತ್ತರಾಖಂಡ್​ನ ಮಹಿಮ್ ವರ್ಮ ಉಪಾಧ್ಯಕ್ಷರಾಗಿ, ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಹಣಕಾಸು ರಾಜ್ಯ ಖಾತೆ ಸಚಿವ ಅನುರಾಗ್ ಠಾಕೂರ್ ಕಿರಿಯ ಸಹೋದರ ಅರುಣ್ ಧುಮಾಲ್ ಖಜಾಂಚಿಯಾಗಿ ಕೇರಳದ ಜಯೇಶ್ ಜಾರ್ಜ್ ಜಂಟಿ-ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಮುಂದಿನ 10 ತಿಂಗಳ ಅವಧಿಗೆ ಗಂಗೂಲಿ ಬಿಸಿಸಿಐನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ಸಿಎಬಿ ಅಧ್ಯಕ್ಷರಾಗಿ 5.2 ವರ್ಷ ಕಾರ್ಯನಿರ್ವಹಿಸಿರುವ ಗಂಗೂಲಿ ಮುಂದಿನ ಜುಲೈನಲ್ಲಿ ತಮ್ಮ ಸ್ಥಾನ ತೆರೆವುಗೊಳಿಸಬೇಕಾಗಿದೆ.

ಬಿಸಿಸಿಐ ಹೊಸ ಕಾನೂನಿನ ಪ್ರಕಾರ ಆರು ವರ್ಷ ಅಧಿಕಾರ ಅನುಭವಿಸಿದ ಬಳಿಕ ಕೂಲಿಂಗ್ ಆಫ್ ಅವಧಿ ಕಡ್ಡಾಯವಾಗಿದೆ. ಸಿಎಬಿಯ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಗಂಗೂಲಿ ಪ್ರತಿಷ್ಠಿತ ಬಿಸಿಸಿಐ ಆಡಳಿತದ ನೇತೃತ್ವ ವಹಿಸಿಕೊಂಡಿದ್ದಾರೆ.

 ಪ್ರತಿಭಟನೆ ಹಿನ್ನಲೆ; ಬಾಂಗ್ಲಾದೇಶ ಬದಲು ಟೀಂ ಇಂಡಿಯಾ ಪ್ರವಾಸ ಕೈಗೊಳ್ಳಲಿದೆ ಈ ತಂಡ?

ಹಿತಾಸಕ್ತಿ ಸಂಘರ್ಷ ನಿಯಮದಿಂದ, ಕ್ರಿಕೆಟ್‌ ಸಲಹಾ ಮಂಡಳಿ (ಸಿಎಸಿ) ಮತ್ತು ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಗೆ ಕೆಲವು ಹಿರಿಯ ಆಟಗಾರರ ಸೇವೆ ಪಡೆಯಲು ಸಮಸ್ಯೆಯಾಗುತ್ತಿದೆ. ಈ ಸವಾಲನ್ನೂ ಗಂಗೂಲಿ ನಿಭಾಯಿಸಬೇಕಾಗಿದೆ. ಜೊತೆಗೆ ಶ್ರೀನಿವಾಸನ್‌ ಬಣದ ನಿಷ್ಠರಾಗಿರುವ ಐಪಿಎಲ್‌ ಮುಖ್ಯಸ್ಥ ಬ್ರಿಜೇಶ್‌ ಪಟೇಲ್‌ ಜೊತೆ ಅವರ ಸಂಬಂಧ ಹೇಗಿರುತ್ತದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ