ಈಗೇನಿದ್ದರೂ ಜೀನಾಧರಿತ ಸಿನಿಮಾಗಳ ಕಾಲ. ಅದರಲ್ಲೂ ಖ್ಯಾತ ಕ್ರಿಕೆಟಿಗರ ಬಯೋಪಿಕ್ ಬಾಲಿವುಡ್ನಲ್ಲಿ ಸಾಕಷ್ಟು ಸದ್ದು ಮಾಡಿವೆ. ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್, ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ, ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಅನೇಕರ ಜೀವನಾಧಾರಿತ ಚಿತ್ರಗಳು ಈಗಾಗಲೇ ತೆರೆಕಂಡಿವೆ. ಹಾಗೆಯೇ ಲೆಜೆಂಡ್ ಕಪಿಲ್ ದೇವ್ ಅವರ ಕಹಾನಿ ತಿಳಿಸಲಿರುವ 83 ಚಿತ್ರ ತೆರೆಕಾಣಲು ಸಜ್ಜಾಗಿ ನಿಂತಿದೆ. ಅಷ್ಟೇ ಅಲ್ಲದೆ ಸುರೇಶ್ ರೈನಾ ಅವರ ಜೀವನವನ್ನು ಆಧರಿಸಿ ಸಿನಿಮಾ ಬರುವ ಸಾಧ್ಯತೆ ಕೂಡ ಇದೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಗೌರವ್ ಗಂಗೂಲಿ.
ಹೌದು, ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಜೀವನಾಧಾರಿತ ಚಿತ್ರದ ಕುರಿತು ಕಳೆದ ಕೆಲ ದಿನಗಳಿಂದ ಹಲವು ಸುದ್ದಿಗಳು ಹರಿದಾಡಿದ್ದವು. ಇದೀಗ ಈ ಬಗ್ಗೆ ಖುದ್ದು ಗಂಗೂಲಿ ಅವರೇ ಮೌನ ಮುರಿದಿದ್ದಾರೆ. ನನ್ನ ಬಯೋಪಿಕ್ ಮಾಡಲು ನಾನು ಅನುಮತಿ ನೀಡಿರುವುದಾಗಿ ದಾದಾ ತಿಳಿಸಿದ್ದಾರೆ. ಈ ಚಿತ್ರವು ಬಾಲಿವುಡ್ನಲ್ಲಿ ಮೂಡಿಬರಲಿದ್ದು, ನಿರ್ದೇಶಕರು ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ ಎಂದಿದ್ದಾರೆ.
ದಾದಾ ಜೀವನಾಧಾರಿತ ಸಿನಿಮಾ ನಿರ್ಮಿಸಲು ಬಾಲಿವುಡ್ನ ಪ್ರಮುಖ ನಿರ್ಮಾಣ ಸಂಸ್ಥೆ ಮುಂದಾಗಿದ್ದು, ಈ ಚಿತ್ರಕ್ಕಾಗಿ 200 ರಿಂದ 250 ಕೋಟಿ ರೂ ಬಂಡವಾಳ ಹೂಡಲಿದೆ ಎಂದು ತಿಳಿಸಲಾಗಿದೆ. ಅಲ್ಲದೆ ಈಗಾಗಲೇ ಹಲವು ಬಾರಿ ಚಿತ್ರಕಥೆಗಾಗಿ ಗಂಗೂಲಿ ಅವರನ್ನು ಸಂಪರ್ಕಿಸಿದ್ದು, ಕೆಲಸಗಳು ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.
ಇನ್ನು ತಮ್ಮ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಬೇಕು ಎಂಬ ಆಸೆಯನ್ನು ಕೂಡ ಗಂಗೂಲಿ ವ್ಯಕ್ತಪಡಿಸಿದ್ದಾರೆ. ಅವರ ಅಭಿಲಾಷೆಯಂತೆ ತೆರೆ ಮೇಲೆ ದಾದಾ ಆಗಿ ಬಾಲಿವುಡ್ ನಟ ರಣಬೀರ್ ಕಪೂರ್ ನಟಿಸಿದರೆ ಉತ್ತಮ ಎಂದು ಗಂಗೂಲಿ ಅಭಿಪ್ರಾಯಪಟ್ಟಿದ್ದಾರಂತೆ. ಹೀಗಾಗಿ ಸಂಜು ಚಿತ್ರದ ಬಳಿಕ ಮತ್ತೊಮ್ಮೆ ರಣಬೀರ್ ಕಪೂರ್ ಬಯೋಪಿಕ್ನಲ್ಲಿ ಬಣ್ಣ ಹಚ್ಚುವುದು ಬಹುತೇಕ ಖಚಿತ ಎನ್ನಲಾಗಿದೆ. ಒಟ್ಟಿನಲ್ಲಿ ಸೌರವ್ ಗಂಗೂಲಿ ಅವರ ದಾದಾಗಿರಿಯನ್ನು ತೆರೆ ಮೇಲೆ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಗುವುದಂತು ಕನ್ಫರ್ಮ್ ಆಗಿದೆ.
(
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ