ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಗುರುವಾರ ಮತ್ತೂಂದು ಆಯಂಜಿಯೋಪ್ಲಾಸ್ಟಿ ನಡೆಸಿ, ಕಟ್ಟಿ ಕೊಂಡಿದ್ದ ಮತ್ತೆರಡು ಹೃದಯನಾಳಗಳಿಗೆ ಸ್ಟೆಂಟ್ ಅಳವಡಿಸಲಾಗಿದೆ. ಬುಧವಾರ ಸೌರವ್ ಗಂಗೂಲಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡನೇ ಹಂತದ ಆಯಂಜೊಯೋಪ್ಲಾಸ್ಟಿಯಲ್ಲಿ ಗಂಗೂಲಿಗೆ ಎರಡು ಸ್ಟಂಟ್‌ಗಳನ್ನು ಅಳವಡಿಸಲಾಗಿದೆ. ಈ ಬಗ್ಗೆ ದಾದಾ ಆಪ್ತರು ಎಎನ್‌ಐ ಸುದ್ಧಿಸಂಸ್ಥೆ ಜೊತೆಗೆ ಮಾಹಿತಿ ನೀಡಿದ್ದು ಶಸ್ತ್ರಚಿಕಿತ್ಸೆಗೆ ಯಶಸ್ವಿಯಾಗಿ ನಡೆದಿದೆ ಎಂಬ ಮಾಹಿತಿ ನೀಡಿದ್ದಾರೆ.
ಜನವರಿಯ ಮೊದಲ ವಾರದಲ್ಲಿ ಗಂಗೂಲಿಗೆ ಲಘು ಹೃದಯಾಘಾತವಾಗಿತ್ತು. ನಂತರ ಅವರಿಗೆ ವುಡ್ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಆ್ಯಂಜಿಯೋಪ್ಲಾಸ್ಟಿ ನಡೆಸಿ, ಸ್ಟಂಟ್ ಅಳವಡಿಸಿ ಜನವರಿ 6 ರಂದು ಡಿಸ್ಚಾರ್ಜ್ ಮಾಡಲಾಗಿತ್ತು. ನಂತರ ಅಗತ್ಯಬಿದ್ದರೆ ಮತ್ತೊಂದು ಆ್ಯಂಜಿಯೋಪ್ಲಾಸ್ಟಿ ಮಾಡುವುದಾಗಿ ಮತ್ತು ಸ್ಟೆಂಟ್‌ಗಳನ್ನು ಅಳವಡಿಸುವುದಾಗಿ ವುಡ್ಲ್ಯಾಂಡ್ಸ್ ಆಸ್ಪತ್ರೆ ವೈದ್ಯರು ಹೇಳಿದ್ದರು.
IPL 2021 Auction: ಫಿಂಚ್ ಕೈಬಿಟ್ಟ ಬಳಿಕ ಈ 3 ಸ್ಟಾರ್ ಬ್ಯಾಟ್ಸ್ಮನ್ಗಳ ಮೇಲೆ ಕಣ್ಣಿಟ್ಟಿದೆ RCB
ಗಂಗೂಲಿ ಆರೋಗ್ಯವನ್ನು ಪರೀಕ್ಷಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ. ಗಂಗೂಲಿ ಅವರೊಂದಿಗಿನ ಭೇಟಿಯ ನಂತರ, ಮಮತಾ ಬ್ಯಾನರ್ಜಿ ಅವರು ಗಂಗೂಲಿಯ ಕಾರ್ಯಾಚರಣೆ ಯಶಸ್ವಿಯಾಗಿದೆ ಮತ್ತು ಅವರು ಎರಡು ಹೊಸ ಸ್ಟೆಂಟ್‌ಗಳನ್ನು ಸೇರಿಸಿದ್ದಾರೆ ಎಂದು ಹೇಳಿದರು.
'ಸೌರವ್ ಎಚ್ಚರವಾಗಿದ್ದಾನೆ ಮತ್ತು ಮಾತನಾಡುತ್ತಿದ್ದಾನೆ" ಎಂದು ಮಮತಾ ಬ್ಯಾನರ್ಜಿ ಭಾರತದ ಮಾಜಿ ನಾಯಕನನ್ನು ಭೇಟಿಯಾದ ನಂತರ ಸುದ್ದಿಗಾರರಿಗೆ ತಿಳಿಸಿದರು. "ಆಪರೇಷನ್ ಯಶಸ್ವಿಯಾಗಿದೆ. ನಾನು ಅವರೊಂದಿಗೆ ಮತ್ತು ಅವರ ಪತ್ನಿ ಡೋನಾ ಅವರೊಂದಿಗೆ ಮಾತನಾಡಿದ್ದೇನೆ" ಎಂದು ಹೇಳಿದ್ದಾರೆ.
ಜನವರಿ ತಿಂಗಳ ಆರಂಭದಲ್ಲಿ ಸೌರವ್ ಗಂಗೂಲಿ ತಮ್ಮ ನಿವಾಸದ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿದ್ದ ವೇಳೆ ಲಘು ಹೃದಯಾಘಾತವಾಗಿತ್ತು. ಬಳಿಕ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಆಂಜಿಯೋಪ್ಲಾಸ್ಟಿ ನಡೆಸಲಾಗಿತ್ತು. ಮತ್ತೆರಡು ಎರಡು ರಕ್ತನಾಳಗಳಲ್ಲಿ ದೋಷವಿರುವುದನ್ನು ಗುರುತಿಸಿದ್ದ ವೈದ್ಯಾಧಿಕಾರಿಗಳು ಕೆಲ ದಿನಗಳ ವಿಶ್ರಾಂತಿಯ ನಂತರ ಆಯಂಜಿಯೋಪ್ಲಾಸ್ಟಿ ನಡೆಸುವ ನಿರ್ಧಾರವನ್ನು ಕೈಗೊಂಡಿದ್ದರು. ಇದೀಗ ಸೌರವ್ ಗಂಗೂಲಿಗೆ ಎರಡನೇ ಆಯಂಜಿಯೋಪ್ಲಾಸ್ಟಿ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ