ರೆಬೆಲ್ ಕೊಹ್ಲಿ; ಬೇಡ ಅಂದ್ರೂ ಟಿ20 ಕ್ಯಾಪ್ಟನ್ಸಿ ಬಿಟ್ರು; ಬಿಡಿ ಎಂದ್ರೂ ಓಡಿಐ ಕ್ಯಾಪ್ಟನ್ಸಿ ಬಿಡಲಿಲ್ಲವಂತೆ

Sourav Ganguly comment on Virat Kohli: ಟಿ20 ಕ್ಯಾಪ್ಟನ್ಸಿ ಬಿಡಬೇಡಿ ಎಂದರೂ ಕೊಹ್ಲಿ ಕೇಳಲಿಲ್ಲ. ಟಿ20 ಮತ್ತು ಓಡಿಐ ಎರಡಕ್ಕೂ ಒಬ್ಬರೇ ನಾಯಕ ಇದ್ದರೆ ಸೂಕ್ತ ಎಂದು ರೋಹಿತ್ ಶರ್ಮಾ ಅವರನ್ನ ಎರಡಕ್ಕೂ ನಾಯಕನನ್ನಾಗಿ ಆರಿಸಲಾಯಿತು ಎಂದು ಬಿಸಿಸಿಐ ಅಧ್ಯಕ್ಷರು ಹೇಳಿದ್ದಾರೆ.

ಸೌರವ್ ಗಂಗೂಲಿ ಜೊತೆ ವಿರಾಟ್ ಕೊಹ್ಲಿ

ಸೌರವ್ ಗಂಗೂಲಿ ಜೊತೆ ವಿರಾಟ್ ಕೊಹ್ಲಿ

 • Share this:
  ನವದೆಹಲಿ, ಡಿ. 9: ಟಿ20 ತಂಡದ ನಾಯಕ ಸ್ಥಾನಕ್ಕೆ ತಿಲಾಂಜಲಿ ಆಡಿ, ಓಡಿಐ ಮತ್ತು ಟೆಸ್ಟ್ ತಂಡಗಳಿಗೆ ನಾಯಕನಾಗಿ ಮುಂದುವರಿಯುತ್ತೇನೆ ಎಂದು ಹೇಳಿದ್ದ ವಿರಾಟ್ ಕೊಹ್ಲಿ ಅವರು ಓಡಿಐ ಕ್ಯಾಪ್ಟನ್ಸಿಯನ್ನೂ ಕಳೆದುಕೊಂಡಿದ್ದಾರೆ. ರೋಹಿತ್ ಶರ್ಮಾ ಅವರನ್ನ ಟಿ20 ಮತ್ತು ಓಡಿಐ ತಂಡಗಳಿಗೆ ನಾಯಕನಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ಏಕದಿನ ಕ್ರಿಕೆಟ್​ನಲ್ಲಿ ಐಸಿಸಿ ಟೂರ್ನಿ ಬಿಟ್ಟು ಉಳಿದ ಬಹುತೇಕ ಮಹತ್ವದ ಗೆಲುವುಗಳನ್ನ ನಾಯಕನಾಗಿ ಕೊಹ್ಲಿ ಕಂಡಿದ್ಧಾರೆ. ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ ಅವರಾಗಿದ್ದಾರೆ. ಹೀಗಿರುವಾಗ ಕೊಹ್ಲಿ ಇಚ್ಛೆಗೆ ವಿರುದ್ಧವಾಗಿ ಓಡಿಐ ಕ್ಯಾಪ್ಟನ್ಸಿಯನ್ನ ಕಿತ್ತುಕೊಳ್ಳುವುದು ಅಂದರೆ ಏನು? ಅಂಥದ್ದೇನು ಘಟಿಸಿತು ಎಂಬ ಕುತೂಹಲ ಸಹಜ.

  ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರು ಈ ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ. ವಿರಾಟ್ ಕೊಹ್ಲಿ ಅವರಿಂದ ಓಡಿಐ ನಾಯಕಸ್ಥಾನ ಕಸಿದುಕೊಳ್ಳುವ ನಿರ್ಧಾರದ ಹಿಂದಿನ ಬೆಳವಣಿಗೆ ಬಗ್ಗೆ ಎಎನ್​ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ್ಧಾರೆ.

  ಟಿ20 ಕ್ಯಾಪ್ಟನ್ಸಿ ಬಿಡಬೇಡಿ ಎಂದು ಕೊಹ್ಲಿಗೆ ಹೇಳಿತ್ತಾ ಬಿಸಿಸಿಐ?:

  ವಿರಾಟ್ ಕೊಹ್ಲಿ ಅವರು ಇಂಗ್ಲೆಂಡ್ ಪ್ರವಾಸದ ಬಳಿಕ ಟಿ20 ತಂಡದ ಕ್ಯಾಪ್ಟನ್ಸಿ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದರು. ಆ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಬಿಸಿಸಿಐ ಕೊಹ್ಲಿಗೆ ಮನವಿ ಮಾಡಿತ್ತು. ಆದರೆ, ವಿರಾಟ್ ಕೊಹ್ಲಿ ಇದಕ್ಕೆ ಕಿವಿಗೊಡದೆ ಟಿ20 ಟೀಮ್​ನ ನಾಯಕತ್ವ ಬಿಟ್ಟು ಕೆಳಗಿಳಿಯುವ ನಿರ್ಧಾರ ಘೋಷಿಸಿದರು ಎಂದು ಸೌರವ್ ಗಂಗೂಲಿ ಹೇಳಿದ್ಧಾರೆ.

  ಇದನ್ನೂ ಓದಿ: ಉಮೇಶ್ ಯಾದವ್ ಲೆಕ್ಕಕ್ಕುಂಟು ಆಟಕ್ಕಿಲ್ಲದಂತಾಗಿದ್ಧಾರೆ: ಮಾಜಿ ಆಟಗಾರ ಆಕ್ರೋಶ

  ಸೀಮಿತ ಓವರ್​ಗಳ ಎರಡು ಮಾದರಿ ಕ್ರಿಕೆಟ್​ಗೆ ಇಬ್ಬರಿಬ್ಬರು ನಾಯಕರು ಇರುವುದು ಸಮಂಜಸ ಎನಿಸುವುದಿಲ್ಲ. ಟಿ20 ಮತ್ತು ಓಡಿಐ ಎರಡಕ್ಕೂ ಒಬ್ಬರೇ ನಾಯಕರಿರಬೇಕು. ಟಿ20 ನಾಯಕತ್ವ ಮುಂದುವರಿಸಿ ಎಂದು ಹೇಳಿದರೂ ಕೊಹ್ಲಿ ಕೇಳಲಿಲ್ಲ. ಹೀಗಾಗಿ, ಟಿ20 ಜೊತೆಗೆ ಓಡಿಐ ತಂಡದ ನಾಯಕತ್ವ ಎರಡನ್ನೂ ರೋಹಿತ್ ಶರ್ಮಾ ಅವರೊಬ್ಬರಿಗೇ ನೀಡಬೇಕೆಂದು ಬಿಸಿಸಿಐ ಮತ್ತು ಆಯ್ಕೆಗಾರರ ಸಮಿತಿ ಒಮ್ಮತದಿಂದ ನಿರ್ಧಾರ ತೆಗೆದುಕೊಂಡಿತು ಎಂದು ಬಿಸಿಸಿಐ ಅಧ್ಯಕ್ಷ ಗಂಗೂಲಿ ತಿಳಿಸಿದ್ಧಾರೆ.

  “ವಿರಾಟ್ ಕೊಹ್ಲಿ ಟೆಸ್ಟ್ ಕ್ಯಾಪ್ಟನ್ ಆಗಿ ಮುಂದುವರಿಯಬೇಕು, ರೋಹಿತ್ ಶರ್ಮಾ ವೈಟ್ ಬಾಲ್ (ಟಿ20 ಮತ್ತು ಓಡಿಐ) ಕ್ಯಾಪ್ಟನ್ ಆಗಬೇಕು ಎಂಬುದು ನಿರ್ಧಾರ ಆಯಿತು. ನಾನು ಅಧ್ಯಕ್ಷನಾಗಿ ವಿರಾಟ್ ಕೊಹ್ಲಿ ಜೊತೆ ವೈಯಕ್ತಿಕವಾಗಿ ಮಾತನಾಡಿದೆ. ಆಯ್ಕೆಗಾರರ ಸಮಿತಿ ಅಧ್ಯಕ್ಷ (ಚೇತನ್ ಶರ್ಮಾ) ಕೂಡ ಕೊಹ್ಲಿ ಜೊತೆ ಮಾತನಾಡಿದರು” ಎಂದು ಸೌರವ್ ಗಂಗೂಲಿ ಮಾಹಿತಿ ನೀಡಿದ್ಧಾರೆ.

  ಓಡಿಐ ಕ್ಯಾಪ್ಟನ್ಸಿ ತ್ಯಜಿಸಿ ಎಂದರೂ ಕೇಳಲಿಲ್ಲವಾ ಕೊಹ್ಲಿ?:

  ಕೆಲ ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಅವರಿಗೆ ತಾವಾಗಿಯೇ ಓಡಿಐ ನಾಯಕತ್ವ ಬಿಟ್ಟುಕೊಡುವ ನಿರ್ಧಾರ ಪ್ರಕಟಿಸುವ ಅವಕಾಶ ಕೊಡಲಾಗಿತ್ತು. ಆದರೂ ಅವರು ಕ್ಯಾಪ್ಟನ್ಸಿ ತೊರೆಯಲಿಲ್ಲ. ಅನಿವಾರ್ಯವಾಗಿ ಬಿಸಿಸಿಐ ಮಧ್ಯ ಪ್ರವೇಶಿಸಿ ರೋಹಿತ್ ಶರ್ಮಾ ಅವರನ್ನ ಸೀಮಿತ ಓವರ್​ಗಳ ಕ್ರಿಕೆಟ್ ತಂಡಗಳಿಗೆ ನಾಯಕರನ್ನಾಗಿ ಘೋಷಣೆ ಮಾಡಿತು.

  ಇದನ್ನೂ ಓದಿ: ರೋಹಿತ್ ಶರ್ಮಾ ಓಡಿಐ ಟೀಮ್​ಗೂ ಕ್ಯಾಪ್ಟನ್; ದಕ್ಷಿಣ ಆಫ್ರಿಕಾ ಸರಣಿಗೆ ಟೆಸ್ಟ್ ತಂಡ ಪ್ರಕಟ

  “ರೋಹಿತ್ ಶರ್ಮಾ ಅವರ ನಾಯಕತ್ವ ಸಾಮರ್ಥ್ಯದ ಬಗ್ಗೆ ನಮಗೆ ಪೂರ್ಣ ವಿಶ್ವಾಸ ಇ ದೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ಯಾಪ್ಟನ್ ಆಗಿ ಮುಂದುವರಿಯುತ್ತಾರೆ. ಭಾರತೀಯ ಕ್ರಿಕೆಟ್ ಈಗ ಸುರಕ್ಷಿತ ಕೈಗಳ್ಳಲ್ಲಿದೆ. ವೈಟ್ ಬಾಲ್ ಕ್ರಿಕೆಟ್​ನಲ್ಲಿ ನಾಯಕನಾಗಿ ಸೇವೆ ಸಲ್ಲಿಸಿದ ವಿರಾಟ್ ಕೊಹ್ಲಿಗೆ ಬಿಸಿಸಿಐ ಧನ್ಯವಾದ ಹೇಳುತ್ತದೆ” ಎಂದು ಗಂಗೂಲಿ ತಿಳಿಸಿದ್ಧಾರೆ.

  ಇದೇ ಡಿಸೆಂಬರ್ 26ರಂದು ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಆರಂಭವಾಗುತ್ತದೆ. ಟೆಸ್ಟ್ ತಂಡ ಈಗಾಗಲೇ ಪ್ರಕಟವಾಗಿದೆ, ವಿರಾಟ್ ಕೊಹ್ಲಿ ನಾಯಕರಾದರೆ ರೋಹಿತ್ ಶರ್ಮಾ ವೈಸ್ ಕ್ಯಾಪ್ಟನ್ ಆಗಿ ಬಡ್ತಿ ಪಡೆದಿದ್ಧಾರೆ. ಮೂರು ಟೆಸ್ಟ್ ಪಂದ್ಯಗಳ ಬಳಿಕ ಮೂರು ಏಕದಿನ ಪಂದ್ಯಗಳ ಸರಣಿ ನಡೆಯುತ್ತದೆ. ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಿದ್ದಾರೆ. ಓಡಿಐ ತಂಡವನ್ನ ಮುಂದಿನ ದಿನಗಳಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.
  Published by:Vijayasarthy SN
  First published: