HOME » NEWS » Sports » CRICKET SOURAV GANGULY DISCHARGED FROM HOSPITAL THANKS DOCTORS FOR TREATMENT AND SAYS HE IS ABSOLUTELY FINE MAK

Sourav Ganguly: ಆಸ್ಪತ್ರೆಯಿಂದ ಸೌರವ್​ ಗಂಗೂಲಿ ಬಿಡುಗಡೆ; ಚಿಕಿತ್ಸೆ ನೀಡಿದ ವೈದ್ಯರಿಗೆ-ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ದಾದ

ಗಂಗೂಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲು ಅಗತ್ಯವಾದ ಎಲ್ಲಾ ಪರಿಚಾರಕಗಳು ಪೂರ್ಣಗೊಂಡಿವೆ. ಅಲ್ಲದೆ, ಮನೆಯಲ್ಲಿ ವಿಶ್ರಾಂತಿ ವೇಳೆ ಅವರು ತೆಗೆದುಕೊಳ್ಳಬೇಕಾದ ಎಲ್ಲಾ ಔಷಧಗಳ ವಿವರಗಳನ್ನು ಗಂಗೂಲಿ ಅವರ ಕುಟುಂಬಸ್ಥರಿಗೆ ನೀಡಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

news18-kannada
Updated:January 7, 2021, 12:47 PM IST
Sourav Ganguly: ಆಸ್ಪತ್ರೆಯಿಂದ ಸೌರವ್​ ಗಂಗೂಲಿ ಬಿಡುಗಡೆ; ಚಿಕಿತ್ಸೆ ನೀಡಿದ ವೈದ್ಯರಿಗೆ-ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ದಾದ
ಸೌರವ್​ ಗಂಗೂಲಿ.
  • Share this:
ಸಣ್ಣ ಪ್ರಮಾಣದ ಹೃದಯಾಘಾತದ ನಂತರ ಆಂಜಿಯೋಪ್ಲ್ಯಾಸ್ಟಿಗೆ ಒಳಗಾದ ಭಾರತದ ಮಾಜಿ ನಾಯಕ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು ಕೋಲ್ಕತ್ತಾದ ವುಡ್​ ಲ್ಯಾಂಡ್ಸ್​ ಆಸ್ಪತ್ರೆಯಿಂದ ಡಿಸ್ಚಾರ್ಚ್​ ಆಗಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, "ನಾನೀಗ ಸಂಪೂರ್ಣ ಆರೋಗ್ಯವಾಗಿದ್ದೇನೆ. ಚಿಕಿತ್ಸೆಯಿಂದಾಗಿ ಚೇತರಿಸಿಕೊಳ್ಳುತ್ತಿದ್ದೇನೆ. ನನಗೆ ಉತ್ತಮ ಚಿಕಿತ್ಸೆ ನೀಡಿದ ವೈದ್ಯರಿಗೆ ಹಾಗೂ ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು" ಎಂದು ತಿಳಿಸಿದ್ದಾರೆ. ಭಾರತದ ಬ್ಯಾಟಿಂಗ್ ದಂತಕಥೆ ಎನಿಸಿಕೊಂಡಿರುವ ಗಂಗೂಲಿ ಬುಧವಾರವೇ ಆಸ್ಪತ್ರೆಯಿಂದ ಬಿಡುಗಡೆಯಾಗಬೇಕಿತ್ತು. ಆದರೆ, ಆಸ್ಪತ್ರೆ ಮತ್ತು ಬೆಹುಲಾದಲ್ಲಿರುವ ತಮ್ಮ ಮನೆಯ ಎದುರು ಸೇರಬಹುದಾದ ಅಪಾರ ಸಂಖ್ಯೆಯ ಅಭಿಮಾನಿಗಳ ಸಮೂಹದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅವರು ಒಂದು ದಿನ ಹೆಚ್ಚಾಗಿ ಆಸ್ಪತ್ರೆಯಲ್ಲೇ ಉಳಿದಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ವುಡ್​ಲ್ಯಾಂಡ್ಸ್​ ಆಸ್ಪತ್ರೆಯ ಎಂಡಿ ಮತ್ತು ಸಿಇಓ ಡಾ.ರೂಪಾಲಿ, "ಸೌರವ್​ ಗಂಗೂಲಿ ಆರೋಗ್ಯವಾಗಿದ್ದಾರೆ. ಕಳೆದ ಒಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಉತ್ತಮವಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನೂ ಒಂದು ದಿನ ಹೆಚ್ಚಾಗಿ ಆಸ್ಪತ್ರೆಯಲ್ಲೇ ಇರಬೇಕೆಂದು ಅವರು ಬಯಸಿದ್ದಾರೆ. ಇದು ಅವರ ವ್ಯಯಕ್ತಿಕ ನಿರ್ಧಾರ" ಎಂದು ಅವರು ತಿಳಿಸಿದ್ದಾರೆ.


ಗಂಗೂಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲು ಅಗತ್ಯವಾದ ಎಲ್ಲಾ ಪರಿಚಾರಕಗಳು ಪೂರ್ಣಗೊಂಡಿವೆ. ಅಲ್ಲದೆ, ಮನೆಯಲ್ಲಿ ವಿಶ್ರಾಂತಿ ವೇಳೆ ಅವರು ತೆಗೆದುಕೊಳ್ಳಬೇಕಾದ ಎಲ್ಲಾ ಔಷಧಗಳ ವಿವರಗಳನ್ನು ಗಂಗೂಲಿ ಅವರ ಕುಟುಂಬಸ್ಥರಿಗೆ ನೀಡಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಇದನ್ನೂ ಓದಿ: India vs Australia Live Score, 3rd Test: ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ವಿಲ್- ಮಾರ್ನಸ್

48 ವರ್ಷದ ಗಂಗೂಲಿ ಕಳೆದ ಶನಿವಾರ ತಮ್ಮ ಜಿಮ್​​ನಲ್ಲಿ ವ್ಯಾಯಾಮ ಮಾಡುವಾಗ ಸಣ್ಣ ಪ್ರಮಾಣದ ಹೃದಯಾಘಾಟಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಆಂಜಿಯೋಪ್ಲ್ಯಾಸ್ಟಿ ಚಿಕಿತ್ಸೆಯ ನಂತರ ಗಂಗೂಲಿ ಇದೀಗ ಚೇತರಿಸಿಕೊಂಡಿದ್ದು, ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.

ಬಿಸಿಸಿಐ ಅಧ್ಯಕ್ಷ ಗಂಗೂಲಿ ಚಿಕಿತ್ಸೆಗೆಂದು ಹಾಜರಾಗಿದ್ದ ವೈದ್ಯರ ತಂಡಕ್ಕೆ ಸೇರಿಕೊಂಡ ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ಅವರು ಮಂಗಳವಾರ ಮಾತನಾಡಿದ್ದು,  "ಗಂಗೂಲಿ ರಾಷ್ಟ್ರಕ್ಕೆ ಒಂದು ಆಸ್ತಿ. ಅವರು ಅನುಭವಿಸಿದ ಸೌಮ್ಯ ಹೃದಯಾಘಾತದಿಂದ ಅವರ ಆರೋಗ್ಯಕ್ಕೆ ಯಾವುದೇ ಹಾನಿಯಾಗಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
Published by: MAshok Kumar
First published: January 7, 2021, 12:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories