HOME » NEWS » Sports » CRICKET SOURAV GANGULY CONFIRMS ENGLAND WILL PLAY 5 T20IS 4 TESTS AND 3 ODIS IN INDIA ZP

ಭಾರತ-ಇಂಗ್ಲೆಂಡ್ ನಡುವಣ ಪಂದ್ಯಗಳ ಮಾಹಿತಿ ಹಂಚಿಕೊಂಡ ಸೌರವ್ ಗಂಗೂಲಿ..!

ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೇ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಯುಎಇ ನಲ್ಲಿ ಆಯೋಜಿಸುವ ಬಗ್ಗೆ ಕೂಡ ಚಿಂತಿಸಲಾಗಿದೆ ಎನ್ನಲಾಗುತ್ತಿದೆ.

news18-kannada
Updated:November 24, 2020, 10:08 PM IST
ಭಾರತ-ಇಂಗ್ಲೆಂಡ್ ನಡುವಣ ಪಂದ್ಯಗಳ ಮಾಹಿತಿ ಹಂಚಿಕೊಂಡ ಸೌರವ್ ಗಂಗೂಲಿ..!
India vs England
  • Share this:
ಆಸ್ಟ್ರೇಲಿಯಾ ವಿರುದ್ಧದ ಸರಣಿ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಆಡಲಿರುವುದು ಬಹುತೇಕ ಖಚಿತವಾಗಿದೆ. ಭಾರತದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಇಂಗ್ಲೆಂಡ್ ಐದು ಟಿ20, 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

ದ್ವಿಪಕ್ಷೀಯ ಸರಣಿಯಲ್ಲಿ ಎರಡೇ ತಂಡಗಳು ಇರುವುದರಿಂದ ಆಯೋಜನೆ ಸುಲಭ. ಆದರೂ ನಾವು ಕೊರೋನಾ ಪರಿಸ್ಥಿಗಳ ಬಗ್ಗೆ ಗಮನ ನೀಡಲಿದ್ದೇವೆ ಎಂದು ಗಂಗೂಲಿ ತಿಳಿಸಿದರು. ಇನ್ನು 4 ಟೆಸ್ಟ್​ ಪಂದ್ಯಗಳಲ್ಲಿ ಒಂದನ್ನು ಡೇ-ನೈಟ್ ನಡೆಸಲಿದ್ದು, ಅದು ಅಹ್ಮದಾಬಾದ್​ನಲ್ಲಿ ನಡೆಸುವ ಬಗ್ಗೆ ಚರ್ಚೆಗಳು ಸಹ ನಡೆಯುತ್ತಿದೆ.

ಆದರೆ ಈ ಸರಣಿ ದಿನಾಂಕಗಳು ಇನ್ನಷ್ಟೇ ನಿಗದಿಯಾಗಬೇಕಿದ್ದು, ಕೊರೋನಾ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಬಿಸಿಸಿಐ ಮುಂದಾಗಿದೆ.

ಸದ್ಯ ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೇ ಕಾರಣದಿಂದ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಯುಎಇ ನಲ್ಲಿ ಆಯೋಜಿಸುವ ಬಗ್ಗೆ ಕೂಡ ಚಿಂತಿಸಲಾಗಿದೆ ಎನ್ನಲಾಗುತ್ತಿದೆ. ಏಕೆಂದರೆ ಇಂಡಿಯನ್ ಪ್ರೀಮಿಯರ್ ಲೀಗ್​ನ್ನು ದುಬೈನಲ್ಲಿ ಯಶಸ್ವಿಯಾಗಿ ಆಯೋಜಿಸಿರುವ ಬಿಸಿಸಿಐ ಇದೀಗ ಇಂಗ್ಲೆಂಡ್ ನಡುವಣ ಪಂದ್ಯವನ್ನೂ ಸಹ ವಿದೇಶದಲ್ಲಿ ನಡೆಸುವ ಇಂಗಿತದಲ್ಲಿದೆ. ಆದರೆ ಇದೆಲ್ಲವೂ ಕೊರೋನಾ ಪರಿಸ್ಥಿತಿ ಹಾಗೂ ಕೊರೋನಾ ಲಸಿಕೆ ಲಭ್ಯತೆಯನ್ನು ಅವಲಂಭಿಸಿರಲಿದೆ.

ಇದನ್ನೂ ಓದಿ: IPL 2021: RCB ಖರೀದಿಸಲು ಕಣ್ಣಿಟ್ಟಿರುವ ಐವರು ಆಟಗಾರರು ಇವರೇ..!
Published by: zahir
First published: November 24, 2020, 10:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading