ಸೂರ್ಯಕುಮಾರ್ ಯಾದವ್ ಯಾಕೆ ಆಯ್ಕೆಯಾಗಿಲ್ಲ: ಕೊನೆಗೂ ಮೌನ ಮುರಿದ ಸೌರವ್ ಗಂಗೂಲಿ

Suryakumar Yadav: ಟೀಮ್ ಇಂಡಿಯಾ ಆಯ್ಕೆ ವೇಳೆ ಸೂರ್ಯಕುಮಾರ್ ಅವರಷ್ಟೇ ಉತ್ತಮ ಪ್ರದರ್ಶನ ನೀಡಿದ ಇತರೆ ಆಟಗಾರರನ್ನು ಪರಿಗಣಿಸಲಾಗಿದೆ.

suryakumar yadav - sourav ganguly

suryakumar yadav - sourav ganguly

 • Share this:
  ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಸರಣಿಗಾಗಿ ಟೀಮ್ ಇಂಡಯಾವನ್ನು ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಏಕದಿನ, ಟೆಸ್ಟ್ ಹಾಗೂ ಟಿ20 ತಂಡಗಳನ್ನು ಆಯ್ಕೆ ಮಾಡಲಾದೆ. ಆದರೆ ಈ ತಂಡಗಳಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಆಟಗಾರ ಸೂರ್ಯಕುಮಾರ್ ಯಾದವ್​ಗೆ ಅವಕಾಶ ನೀಡದಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಐಪಿಎಲ್ ಹಾಗೂ ರಣಜಿಯಲ್ಲಿ ಉತ್ತಮ ಪ್ರದರ್ಶನ ತೋರಿದರೂ ಮುಂಬೈ ಬ್ಯಾಟ್ಸ್​​ಮನ್​​ಗೆ ಸ್ಥಾನ ಸಿಗದಿರುವ ಬಗ್ಗೆ ಹಲವು ದಿಗ್ಗಜ ಕ್ರಿಕೆಟಿಗರು ಧ್ವನಿಯೆತ್ತಿದ್ದರು.

  ಅದರಲ್ಲೂ ಬಿಸಿಸಿಐನ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ದಿಲೀಪ್ ವೆಂಗಸರ್ಕಾರ್ ಪ್ರತಿಭಾವಂತ ಕ್ರಿಕೆಟಿಗ ಸೂರ್ಯಕುಮಾರ್​ರನ್ನು ಯಾಕಾಗಿ ಆಯ್ಕೆಗೆ ಪರಿಗಣಿಸಿಲ್ಲ ಎಂಬುದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರಶ್ನಿಸಲಿ ಎಂದಿದ್ದರು. ಇದರಿಂದ ಸೂರ್ಯನ ಆಯ್ಕೆ ವಿಷಯ ದಾದಾನ ಅಂಗಳಕ್ಕೆ ಬಂದು ಬಿದ್ದಿತ್ತು. ಇದೀಗ ಈ ಬಗ್ಗೆ ಕೊನೆಗೂ ಗಂಗೂಲಿ ಮೌನ ಮುರಿದಿದ್ದಾರೆ.

  ಟೀಮ್ ಇಂಡಿಯಾ ಆಯ್ಕೆ ವೇಳೆ ಸೂರ್ಯಕುಮಾರ್ ಅವರಷ್ಟೇ ಉತ್ತಮ ಪ್ರದರ್ಶನ ನೀಡಿದ ಇತರೆ ಆಟಗಾರರನ್ನು ಪರಿಗಣಿಸಲಾಗಿದೆ. ರಾಹುಲ್ ತ್ರಿಪಾಠಿ, ದೇವದತ್ ಪಡಿಕ್ಕಲ್, ವರುಣ್ ಚಕ್ರವರ್ತಿ, ಸಂಜು ಸ್ಯಾಮ್ಸನ್, ಶುಭ್​ಮನ್ ಗಿಲ್ ಸೇರಿದಂತೆ ಅನೇಕ ಯುವ ತಾರೆಗಳು ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇದರಲ್ಲಿ ಕೆಲವರಿಗೆ ಮಾತ್ರ ರಾಷ್ಟ್ರೀಯ ತಂಡದಲ್ಲಿ ಕೆಲವರಿಗೆ ಅವಕಾಶ ಸಿಕ್ಕಿದೆ. ಎಲ್ಲ ಆಟಗಾರರಿಗೂ ಒಂದೇ ಸಮಯದಲ್ಲಿ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ ಎಂದು ಗಂಗೂಲಿ ತಿಳಿಸಿದ್ದಾರೆ.

  ಖಂಡಿತವಾಗಿಯೂ ಸಮಯ ಬಂದಾಗ ಎಲ್ಲರಿಗೂ ಅವಕಾಶ ಸಿಗಲಿದೆ. ಅದರಂತೆ ಸೂರ್ಯಕುಮಾರ್ ಯಾದವ್ ಕೂಡ ಅತ್ಯುತ್ತಮ ಆಟಗಾರನಾಗಿದ್ದು, ಸಮಯ ಬಂದಾಗ ಅವರಿಗೂ ಚಾನ್ಸ್ ಲಭಿಸಲಿದೆ ಎಂದು ಗಂಗೂಲಿ ತಿಳಿಸಿದರು.

  ಕಳೆದ ಮೂರು ಸೀಸನ್​ಗಳಿಂದಲೂ ಮುಂಬೈ ಇಂಡಿಯನ್ಸ್ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಸೂರ್ಯಕುಮಾರ್ ಯಾದವ್, 2018 ರಲ್ಲಿ 512 ಹಾಗೂ 2019 ರಲ್ಲಿ 424 ರನ್ ಬಾರಿಸಿದ್ದರು. ಹಾಗೆಯೇ ಪ್ರಸಕ್ತ ಟೂರ್ನಿಯಲ್ಲಿ 13 ಪಂದ್ಯಗಳಿಂದ 41.56 ಸರಾಸರಿಯಲ್ಲಿ 374 ರನ್ ಕಲೆಹಾಕಿದ್ದಾರೆ.
  POINTS TABLE:

  SCHEDULE TIME TABLE:

  ORANGE CAP:

  PURPLE CAP:

  RESULT DATA:

  MOST SIXES:

  ಇದನ್ನೂ ಓದಿ: MS Dhoni: ಯುವ ಪೀಳಿಗೆಗೆ ಜವಾಬ್ದಾರಿ ನೀಡಬೇಕಿದೆ: ಮುಂದಿನ ನಡೆಯ ಬಗ್ಗೆ ಸುಳಿವು ನೀಡಿದ ಧೋನಿ
  Published by:zahir
  First published: