• Home
  • »
  • News
  • »
  • sports
  • »
  • Sourav Ganguly: ಅಧ್ಯಕ್ಷ ಸ್ಥಾನದಿಂದ 'ಔಟ್' ಆಗ್ತಾರಾ 'ದಾದಾ'? ಈ ಬಗ್ಗೆ BCCI ಹೇಳಿದ್ದೇನು?

Sourav Ganguly: ಅಧ್ಯಕ್ಷ ಸ್ಥಾನದಿಂದ 'ಔಟ್' ಆಗ್ತಾರಾ 'ದಾದಾ'? ಈ ಬಗ್ಗೆ BCCI ಹೇಳಿದ್ದೇನು?

ಸೌರವ್ ಗಂಗೂಲಿ

ಸೌರವ್ ಗಂಗೂಲಿ

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಯುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ನಡುವೆ ಕೇಂದ್ರ ಗೃಹಸಚಿವ ಅಮಿತ್ ಶಾ ಪುತ್ರ ಜಯ್ ಶಾ ಹಾಗೂ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ನಡುವೆ ಬಿಸಿಸಿಐ ಅಧ್ಯಕ್ಷಸ್ಥಾನ ಹುದ್ದೆಗೆ ಭಾರಿ ಪೈಪೋಟಿ ಏರ್ಪಟ್ಟಿದೆ.

  • Share this:

    ಭಾರತೀಯ ಕ್ರಿಕೆಟ್ (Cricket) ತಂಡಕ್ಕೆ ವಿರಾಟ್ ಕೊಹ್ಲಿ (Virat Kohli) ರಾಜೀನಾಮೆ ನೀಡಿದಾಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಬಗ್ಗೆ ಸಾಕಷ್ಟು ಗುಸು ಗುಸುಗಳು ಕೇಳಿಬರುತ್ತಿವೆ. ಅದರಲ್ಲೂ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ನಡುವೆ ವೈಮನಸ್ಸಿದೆ ಎಂಬುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.. ಇದರ ನಡುವೆ ರೋಹಿತ್ ಶರ್ಮಾಗೆ (Rohit Sharma) ಎಲ್ಲಾ ಮಾದರಿಯ ಕ್ರಿಕೆಟ್ ನಾಯಕತ್ವ ವಹಿಸಿ ಕೊಟ್ಟಿರುವುದು ಕೊಹ್ಲಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.. ಇಷ್ಟೆಲ್ಲ ಚರ್ಚೆಗಳಿಗೆ ಬ್ರೇಕ್ ಬೀಳುವ ಮೊದಲೇ ಮತ್ತೊಂದು ವಿಷಯ ಬಹಿರಂಗ ಆಗಿದ್ದು ಈಗ ಅದು ಎಲ್ಲರ ಹುಬ್ಬೇರುವಂತೆ ಮಾಡಿದೆ..


    ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಕುತ್ತು..?


    ಕಳೆದ ವರ್ಷ ಬಿಸಿಸಿಐನ ಆಡಳಿತ ಮಂಡಳಿಯ ಸಭೆ ನಡೆಸಬೇಕಿತ್ತು.. ಆದರೆ ಕೊರೋನಾ ಮಹಾಮಾರಿ ಅಡ್ಡಿಯಾಗಿದ್ದ ರಿಂದ ಬಿಸಿಸಿಐನ ಆಡಳಿತ ಮಂಡಳಿಯ ಸಭೆ ನಡೆಸಲಾಗಿರಲಿಲ್ಲ. ಆದರೆ ಈಗ ಮಾರ್ಚ್ 2ರಂದು ಬಿಸಿಸಿಐ ತನ್ನ ಆಡಳಿತ ಮಂಡಳಿಯ ಸಭೆ ನಡೆಸಲಿದೆ ಎಂದು ಮಹತ್ತರವಾದ ಬದಲಾವಣೆ ಆಗುವ ಸಾಧ್ಯತೆ ಇದೆ.. ಅದ್ರಲ್ಲೂ ಪ್ರಮುಖವಾಗಿ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರ ಅಧ್ಯಕ್ಷ ಸ್ಥಾನದ ಮುಂದುವರಿಕೆ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20ವಿಶ್ವಕಪ್ ಸರಣಿಯ ಬಗ್ಗೆ ಚರ್ಚೆಯಾಗಲಿದೆ.


    ಇದನ್ನೂ ಓದಿ: ಪುಟ್ಟ ಮಗುವಿನ ಚಿಕಿತ್ಸೆಗೆ ನೆರವು; ಹೃದಯ ವೈಶಾಲ್ಯತೆ ಮೆರೆದ ಕೆ.ಎಲ್ ರಾಹುಲ್


    ಸಭೆ ಬಳಿಕ ನಡೆಯಲಿದ್ಯಾ ಮಹತ್ತರ ಬದಲಾವಣೆ..?


    ಇನ್ನು ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತೀಯ ಕ್ರಿಕೆಟ್ ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.. ಅಲ್ಲದೆ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗುಲಿ ತೆಗೆದುಕೊಂಡಿರುವ ಹಲವು ನಿರ್ಧಾರಗಳು ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ.. ಇದರ ನಡುವೆ ಬಿಸಿಸಿಐಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಸಲುವಾಗಿ ಮಾರ್ಚ್ 2ರಂದು ಸಭೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ..


    ಆದರೆ ಕೆಲವು ಮೂಲಗಳ ಪ್ರಕಾರ ಸೌರವ್ ಗಂಗೂಲಿ ಅಧ್ಯಕ್ಷ ಅವಧಿ ವಿಸ್ತರಣೆ ಆಗಲಿದೆ ಎಂದು ಹೇಳಲಾಗುತ್ತಿದೆ.. ಆದರೆ ಒಂದು ವೇಳೆ ಸೌರವ್ ಗಂಗೂಲಿ ಅಧಿಕಾರ ಅವಧಿ ವಿಸ್ತರಣೆ ಆಗದಿದ್ದರೆ ಇಬ್ಬರು ಘಟಾನುಘಟಿ ಗಳ ಮಧ್ಯೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಏರ್ಪಡಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ..


    ಜಯ್ ಶಾ, ರಾಜೀವ್ ಶುಕ್ಲಾ ನಡುವೆ ಫೈಟ್


    ಇನ್ನು ಸೌರವ್ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿದರೆ ಮುಂದಿನ ಅಧ್ಯಕ್ಷ ಯಾರು ಎನ್ನುವ ಪ್ರಶ್ನೆಗೆ ಕಂಡು ಬರುತ್ತಿರುವುದು ಕೇವಲ ಇಬ್ಬರು.. ಇದು ಕೇಂದ್ರ ಗೃಹಸಚಿವ ಅಮಿತ್ ಶಾ ಪುತ್ರ ಜಯ್ ಶಾ ಹಾಗೂ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ನಡುವೆ ಬಿಸಿಸಿಐ ಅಧ್ಯಕ್ಷಸ್ಥಾನ ಹುದ್ದೆಗೆ ಭಾರಿ ಪೈಪೋಟಿ ಏರ್ಪಟ್ಟಿದೆ... ರಾಜೀವ್ ಶುಕ್ಲಾ ಐಪಿಎಲ್‌ನ ಅಧ್ಯಕ್ಷರೂ ಆಗಿದ್ದಾರೆ.


    ಇದನ್ನೂ ಓದಿ: ದಬಾಂಗ್ ಡೆಲ್ಲಿ ವಿರುದ್ಧ ಸೋತ ಬೆಂಗಳೂರು ಬುಲ್ಸ್; ಫೈನಲ್ ಕನಸು ಭಗ್ನ


    ಗಂಗೂಲಿ ಅವಧಿಯಲ್ಲಿ ಹಲವು ಬದಲಾವಣೆ ಕಂಡಿರುವ ಬಿಸಿಸಿಐ


    ಇನ್ನು ಸೌರವ್ ಗಂಗೂಲಿ ಮುಖ್ಯಸ್ಥರಾಗಿದ್ದಾಗ ಬಿಸಿಸಿಐ ಹಲವು ಪ್ರಮುಖ ಬದಲಾವಣೆಗಳನ್ನು ಕಂಡಿದೆ. ಅವರ ನಾಯಕತ್ವದಲ್ಲಿ ಆಡಿದ ಹೆಚ್ಚಿನ ಆಟಗಾರರಿಗೆ ಪ್ರಮುಖ ಸ್ಥಾನಗಳನ್ನು ನೀಡಲಾಯಿತು. ರವಿಶಾಸ್ತ್ರಿ ಬದಲಿಗೆ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಆಗಿ ನೇಮಕ ಮಾಡಲಾಗಿದೆ.


    ವಿವಿಎಸ್ ಲಕ್ಷ್ಮಣ್ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ನಾಯಕತ್ವದಿಂದ ಕೆಳಗಿಳಿದ ಬಳಿಕ ವಿರಾಟ್ ಕೊಹ್ಲಿ ಜೊತೆ ಗಂಗೂಲಿ ವಾಗ್ವಾದ ನಡೆಯಿತು. ಈ ಮಹತ್ವದ ಸಭೆಯ ನಂತರ ಕ್ರಿಕೆಟ್ ಅಭಿಮಾನಿಗಳು ಬಹಳಷ್ಟು ಬದಲಾವಣೆಗಳನ್ನು ನೋಡಬಹುದು.

    Published by:ranjumbkgowda1 ranjumbkgowda1
    First published: