HOME » NEWS » Sports » CRICKET SORRY TO MOHAMMED SIRAJ AND INDIAN TEAM SAYS DAVID WARNER ZP

David Warner: ಯಾರೋ ಮಾಡಿದ ತಪ್ಪಿಗೆ, ಟೀಮ್ ಇಂಡಿಯಾ ಕ್ಷಮೆಯಾಚಿಸಿದ ಡೇವಿಡ್ ವಾರ್ನರ್..!

ಜನವರಿ 15 ರಿಂದ ಭಾರತ-ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ಬಿಸ್ಬೇನ್​ನಲ್ಲಿ ಆರಂಭವಾಗಲಿದ್ದು, ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದರಿಂದ ಅಂತಿಮ ಟೆಸ್ಟ್ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ.

news18-kannada
Updated:January 12, 2021, 4:56 PM IST
David Warner: ಯಾರೋ ಮಾಡಿದ ತಪ್ಪಿಗೆ, ಟೀಮ್ ಇಂಡಿಯಾ ಕ್ಷಮೆಯಾಚಿಸಿದ ಡೇವಿಡ್ ವಾರ್ನರ್..!
david warner
  • Share this:
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಹಲವು ರೀತಿಯಲ್ಲಿ ಸುದ್ದಿಯಲ್ಲಿದೆ. ಒಂದೆಡೆ ರೋಚಕ ಹೋರಾಟಕ್ಕೆ ಸಾಕ್ಷಿಯಾದರೆ, ಮತ್ತೊಂದೆಡೆ ಆಟಗಾರರ ನಡುವೆ ವಾಕ್ಸಮರ. ಇನ್ನೊಂದೆಡೆ ಸ್ಟೀವ್ ಸ್ಮಿತ್ ಅವರ ಮೋಸದಾಟ ಕೂಡ ಸುದ್ದಿಗೆ ಕಾರಣವಾಗಿತ್ತು. ಹೀಗೆ ನಾನಾ ರೀತಿಯಲ್ಲಿ ಸುದ್ದಿಯಲ್ಲಿರುವ ಇಂಡಿಯಾ-ಆಸ್ಟ್ರೇಲಿಯಾ ಸರಣಿಯಲ್ಲಿ ನಡೆದ ಅಹಿತಕರ ಘಟನೆಗೂ ಸಾಕ್ಷಿಯಾಗಿತ್ತು. ಹೌದು, ಸಿಡ್ನಿಯಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದ ವೇಳೆ ಜಸ್​ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ (Mohammed Siraj) ಆಸ್ಟ್ರೇಲಿಯಾ ಪ್ರೇಕ್ಷಕರಿಂದ ನಿಂದನೆಗೆ ಗುರಿಯಾಗಿದ್ದರು. ಅದರಲ್ಲೂ ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸಿರಾಜ್ ಹಲವು ಬಾರಿ ವರ್ಣಭೇದ ನಿಂದನೆಗೊಳಗಾಗಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ (David Warner), ಆಸೀಸ್ ಪ್ರೇಕ್ಷಕರ ನಡುವಳಿಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತವರಿನ ಪ್ರೇಕ್ಷಕರಿಂದ ನಾನು ಉತ್ತಮ ನಡೆಯನ್ನು ನಿರೀಕ್ಷಿಸುತ್ತೇನೆ ಎಂದಿದ್ದಾರೆ.

ಅಲ್ಲದೆ ಈ ಕಹಿ ಘಟನೆಗೆ ನಾನು ಭಾರತೀಯ ಆಟಗಾರರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸುತ್ತನೆ. ನಾನು ಮೊಹಮ್ಮದ್ ಸಿರಾಜ್ ಹಾಗೂ ಟೀಮ್ ಇಂಡಿಯಾ ಆಟಗಾರರ ಬಳಿ ಜನಾಂಗೀಯ ನಿಂದನೆ ಘಟನೆಗೆ ಕ್ಷಮೆಯಾಚಿಸುತ್ತೇನೆ. ನಿಂದಿಸುವುದು ಯಾವುದು ಸಂದರ್ಭದಲ್ಲಿ, ಕ್ಷಣದಲ್ಲಿ ಹಾಗೂ ಸ್ಥಳದಲ್ಲಿ ಒಪ್ಪಿಕೊಳ್ಳುವಂತದ್ದಲ್ಲ. ಹಾಗೆಯೇ ಇದನ್ನು ಸಹಿಸುವುದಿಲ್ಲ. ನಮ್ಮ ಪ್ರೇಕ್ಷಕರಿಂದ ನಾನು ಇದಕ್ಕಿಂತ ಉತ್ತಮ ನಡೆಯನ್ನು ಬಯಸುತ್ತೇನೆ" ಎಂದು ವಾರ್ನರ್ ಹೇಳಿದ್ದಾರೆ.

ಇನ್ನು 3ನೇ ಟೆಸ್ಟ್ ಪಂದ್ಯದ ಫಲಿತಾಂಶದ ಬಗ್ಗೆ ಮಾತನಾಡಿದ ವಾರ್ನರ್, ಇದು ನಮಗೆ ಉತ್ತಮ ಫಲಿತಾಂಶವಾಗಿರಲಿಲ್ಲ. ಆದರೆ ಟೆಸ್ಟ್ ಕ್ರಿಕೆಟ್ ಅಂದರೆ ಇದೇನೆ. ಐದು ದಿನಗಳ ಕ್ರಿಕೆಟ್​ ಆಡುವುದು ತುಂಬಾ ಕಠಿಣ. ನಮ್ಮ ತಂಡದ ಆಟಗಾರರು ಸಾಕಷ್ಟು ಹೋರಾಟ ನಡೆಸಿದ್ದರು. ಭಾರತ ತಂಡ ಕೂಡ ಅದ್ಭುತವಾಗಿ ಆಡಿ ಡ್ರಾ ಮಾಡಿಕೊಂಡಿತು. ಇದೇ ಕಾರಣಕ್ಕೆ ನಾವು ಟೆಸ್ಟ್ ಕ್ರಿಕೆಟ್​ನ್ನು ಪ್ರೀತಿಸುತ್ತೇವೆ ಎಂದು ಡೇವಿಡ್ ವಾರ್ನರ್ ತಿಳಿಸಿದ್ದಾರೆ.

ಜನವರಿ 15 ರಿಂದ ಭಾರತ-ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ಬಿಸ್ಬೇನ್​ನಲ್ಲಿ ಆರಂಭವಾಗಲಿದ್ದು, ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದರಿಂದ ಅಂತಿಮ ಟೆಸ್ಟ್ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ.
Published by: zahir
First published: January 12, 2021, 4:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories