• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Sophie Devine: 9 ಸೂಪರ್ ಸಿಕ್ಸ್, 7 ಭರ್ಜರಿ ಬೌಂಡರಿ: ಸೋಫಿ ಸಿಡಿಲಬ್ಬರಕ್ಕೆ ಟಿ20 ದಾಖಲೆ ಉಡೀಸ್..!

Sophie Devine: 9 ಸೂಪರ್ ಸಿಕ್ಸ್, 7 ಭರ್ಜರಿ ಬೌಂಡರಿ: ಸೋಫಿ ಸಿಡಿಲಬ್ಬರಕ್ಕೆ ಟಿ20 ದಾಖಲೆ ಉಡೀಸ್..!

Sophie Devine

Sophie Devine

ವೆಸ್ಟ್​ ಇಂಡೀಸ್ ಆಟಗಾರ್ತಿ ಡಿಯಾಂಡ್ರ ಡಾಟಿನ್ ಹೆಸರಿನಲ್ಲಿದ್ದ 38 ಎಸೆತಗಳ ಸೆಂಚುರಿ ದಾಖಲೆಗಳನ್ನು ಅಳಿಸಿ ಹಾಕಿದರು. ಡಾಟಿನ್ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 38 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದರು.

  • Share this:

ನ್ಯೂಜಿಲೆಂಡ್‌ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಸೋಫಿ ಡಿವೈನ್‌ ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ನ್ಯೂಜಿಲೆಂಡ್​ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್​ ಮಹಿಳಾ ಟಿ20 ಟೂರ್ನಿಯಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ಸೋಫಿ ನೂತನ ವಿಶ್ವ ದಾಖಲೆ ಬರೆದರು. ವೆಲ್ಲಿಂಗ್ಟನ್ ಬ್ಲೇಜ್ ಹಾಗೂ ಒಟಾಗೊ ಸ್ಪಾರ್ಕ್ಸ್​ ನಡುವಣ ಪಂದ್ಯದಲ್ಲಿ ಸೋಫಿ ಕೇವಲ 36 ಎಸೆತಗಳಲ್ಲಿ ಶತಕ ಬಾರಿಸಿದರು.


ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸೋಫಿ ಡಿವೈನ್ ಪಾತ್ರರಾದರು. ಓಪನರ್​ ಆಗಿ ಕಣಕ್ಕಿಳಿದ ಸೋಫಿ ಒಟಾಗೊ ಸ್ಪಾರ್ಕ್ ತಂಡದ​ ಬೌಲಿಂಗ್​ನ್ನು ಧೂಳೀಪಟಗೈದರು. ಈ ವೇಳೆ 9 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 38 ಎಸೆತಗಳಲ್ಲಿ ಅಜೇಯ 108 ರನ್ ಸಿಡಿಸಿದರು.


ಈ ಸಿಡಿಲಬ್ಬರದ ಸೆಂಚುರಿಯೊಂದಿಗೆ ವೆಸ್ಟ್​ ಇಂಡೀಸ್ ಆಟಗಾರ್ತಿ ಡಿಯಾಂಡ್ರ ಡಾಟಿನ್ ಹೆಸರಿನಲ್ಲಿದ್ದ 38 ಎಸೆತಗಳ ಸೆಂಚುರಿ ದಾಖಲೆಗಳನ್ನು ಅಳಿಸಿ ಹಾಕಿದರು. ಡಾಟಿನ್ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 38 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದೀಗ 36 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ನ್ಯೂಜಿಲೆಂಡ್ ಮಹಿಳಾ ತಂಡದ ನಾಯಕಿ ಇತಿಹಾಸ ನಿರ್ಮಿಸಿದ್ದಾರೆ.




ಈ ಅಬ್ಬರ ಸೆಂಚುರಿ ನೆರವಿನಿಂದ ವೆಲ್ಲಿಂಗ್ಟನ್ ಬ್ಲೇಜ್ ತಂಡ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಇನ್ನು ಸಿಡಿಲಬ್ಬರದ ಶತಕ ಬಾರಿಸಿದ ಸೋಫಿ ಡಿವೈನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

top videos
    First published: