ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸೋಫಿ ಡಿವೈನ್ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದರು. ನ್ಯೂಜಿಲೆಂಡ್ನಲ್ಲಿ ನಡೆಯುತ್ತಿರುವ ಸೂಪರ್ ಸ್ಮ್ಯಾಶ್ ಮಹಿಳಾ ಟಿ20 ಟೂರ್ನಿಯ ವೆಲ್ಲಿಂಗ್ಟನ್ ಬ್ಲೇಜ್ ಹಾಗೂ ಒಟಾಗೊ ಸ್ಪಾರ್ಕ್ಸ್ ನಡುವಣ ಪಂದ್ಯದಲ್ಲಿ ಸೋಫಿ ಕೇವಲ 36 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ಸೋಫಿ ನೂತನ ವಿಶ್ವ ದಾಖಲೆ ಬರೆದ್ದಿದ್ದರು.
ಈ ಮೂಲಕ ವುಮೆನ್ಸ್ ಟಿ20 ಕ್ರಿಕೆಟ್ನಲ್ಲಿ ಅತೀ ವೇಗದ ಶತಕ ಸಿಡಿಸಿದ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಸೋಫಿ ಡಿವೈನ್ ಪಾತ್ರರಾದರು. ಓಪನರ್ ಆಗಿ ಕಣಕ್ಕಿಳಿದ ಸೋಫಿ ಒಟಾಗೊ ಸ್ಪಾರ್ಕ್ ತಂಡದ ಬೌಲಿಂಗ್ನ್ನು ಧೂಳೀಪಟಗೈದರು. ಈ ವೇಳೆ 9 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 38 ಎಸೆತಗಳಲ್ಲಿ ಅಜೇಯ 108 ರನ್ ಸಿಡಿಸಿದರು.
94 ರನ್ಗಳಿಸಿದ್ದ ವೇಳೆ ಸಿಕ್ಸ್ ಸಿಡಿಸಿ ಶತಕ ಪೂರೈಸಿದ ಡಿವೈನ್ ಸಂಭ್ರಮಿಸಿರಲಿಲ್ಲ. ಇದಕ್ಕೆ ಕಾರಣ ತಾನು ಬಾರಿಸಿದ ಚೆಂಡು ಪ್ರೇಕ್ಷಕರ ಜಾಗದಲ್ಲಿ ಕುಳಿತಿದ್ದ ಪುಟ್ಟ ಹುಡುಗಿಗೆ ಹೋಗಿ ಬಡಿದಿರುವುದನ್ನು ಸೋಫಿ ಗಮನಿಸಿದ್ದರು. ಕೂಡಲೇ ಪುಟ್ಟ ಕ್ರಿಕೆಟ್ ಅಭಿಮಾನಿಯ ಬಳಿ ಧಾವಿಸಿದ ಡಿವೈನ್ ಅಳುತ್ತಿದ್ದ ಮಗುವಿನ ಮುಂದೆ ಮಂಡಿಯೂರಿ ಕ್ಷಮೆ ಕೇಳಿದ್ದಾರೆ.
— Simran (@CowCorner9) January 14, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ