ತಂದೆಯ ಮರಣ, ತಾಯಿ ಬಸ್ ಕಂಡಕ್ಟರ್; ಏಷ್ಯಾಕಪ್ ಗೆಲ್ಲಿಸಿಕೊಟ್ಟ ಅಥರ್ವನಿಗೆ ಟೀಂ ಇಂಡಿಯಾ ಕನಸು!

ಅಥರ್ವ ಒಬ್ಬ ಅತ್ಯುತ್ತಮ ಕ್ರಿಕೆಟಿಗ ಆಗ ಬೇಕೆಂಬುದು ತಂದೆಯ ಕನಸಾಗಿತ್ತು. ತಂದೆಯ ಕನಸನ್ನು ನನಸು ಮಾಡಲು ಶ್ರಮ ಪಟ್ಟ ಅಥರ್ವ ಕಲಿಕೆಯೂಂದಿಗೆ ಕ್ರೀಡೆಯಲ್ಲೂ ಹೆಚ್ಚಿನ ಗಮನ ಹರಿಸಿದರು.

Vinay Bhat | news18-kannada
Updated:September 16, 2019, 11:12 AM IST
ತಂದೆಯ ಮರಣ, ತಾಯಿ ಬಸ್ ಕಂಡಕ್ಟರ್; ಏಷ್ಯಾಕಪ್ ಗೆಲ್ಲಿಸಿಕೊಟ್ಟ ಅಥರ್ವನಿಗೆ ಟೀಂ ಇಂಡಿಯಾ ಕನಸು!
ಅಥರ್ವ ಹಾಗೂ ತಾಯಿ ವೈದೇಹಿ
  • Share this:
ಬೆಂಗಳೂರು (ಸೆ. 16): ಇತ್ತೀಚೆಗಷ್ಟೆ ಭಾರತದ 19 ವರ್ಷದೊಳಗಿನ ತಂಡವು ಏಳನೇ ಬಾರಿಗೆ ಏಷ್ಯಾಕಪ್ ಟೂರ್ನಿ ಗೆದ್ದು ಬೀಗಿತು. ಫೈನಲ್ ಕದನದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಗೆಲುವು ಸುಲಭವಾಗಿರಲಿಲ್ಲ. ಯಾಕೆಂದರೆ ಭಾರತೀಯ ಕಿರಿಯರು ಎದುರಾಳಿಗರಿಗೆ ಗೆಲ್ಲಲು ಟಾರ್ಗೆಟ್ ನೀಡಿದ್ದು ಕೇವಲ 107 ರನ್​ ಅಷ್ಟೆ. ಹೀಗಾಗಿ ಸುಲಭ ಜಯ ಸಾಧಿಸಿ ಬಹುದು, ಏಷ್ಯಾಕಪ್ ಈ ಬಾರಿ ನಮ್ಮದೆ ಎಂದು ಗ್ರಹಿಸಿದ್ದ ಬಾಂಗ್ಲಾ ಹುಲಿಗಳ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದು ಅಥರ್ವ ಅಂಕೋಲೇಕರ್!

ಮೊದಲು ಬ್ಯಾಟಿಂಗ್ ನಡೆಸಿದ ಭಾರತ 32.4 ಓವರ್‌ಗಳಲ್ಲಿ 106 ರನ್‌ಗಳಿಗೆ ತನ್ನೆಲ್ಲ ವಿಕೆಟ್​​​ಗಳನ್ನು ಕಳೆದುಕೊಂಡಿತು. ಈ ಸಂದರ್ಭದಲ್ಲಿ ಭಾರತದ ಗೆಲುವನ್ನು ಯಾರೂ ಕೂಡಾ ನಿರೀಕ್ಷಿಸಿರಲಿಲ್ಲ. ಅಲ್ಪ ಮೊತ್ತಕ್ಕೆ ಆಲೌಟ್ ಆದ ಭಾರತಕ್ಕೆ ಏಳನೇ ಬಾರಿ ಏಷ್ಯಾಕಪ್ ಗೆಲ್ಲುವಂತೆ ಮಾಡಿದ್ದು 18ರ ಹರೆಯದ ಅಥರ್ವ.

ಅಥರ್ವ ಸ್ಪಿನ್ ಮೋಡಿಗೆ ನಲುಗಿದ ಬಾಂಗ್ಲಾದೇಶ 33.3 ಓವರ್​ನಲ್ಲಿ 101 ರನ್​ಗೆ ಆಲೌಟ್ ಆಯಿತು. 28 ರನ್ ನೀಡಿದ ಅಥರ್ವ 5 ವಿಕೆಟ್ ಕಿತ್ತು ಮಿಂಚಿದರು. 5 ರನ್​ಗಳ ರೋಚಕ ಜಯದೊಂದಿಗೆ 1989ರಲ್ಲಿ ಮೊದಲ ಬಾರಿಗೆ ಏಷ್ಯಾ ಕಪ್ ಎತ್ತಿ ಹಿಡಿದಿದ್ದ ಭಾರತ ಒಟ್ಟಾರೆಯಾಗಿ ಏಳನೇ ಬಾರಿ ಗೆದ್ದು ಬೀಗುವಂತೆ ಮಾಡಿದರು.

ಕೇವಲ ಫೈನಲ್​ನಲ್ಲಿ ಮಾತ್ರವಲ್ಲದೆ ಗ್ರೂಪ್ ಹಂತದ ಪಂದ್ಯಗಳಲ್ಲೂ ಅಥರ್ವ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಪಾಕಿಸ್ತಾನ ವಿರುದ್ಧ 36 ರನ್​ಗೆ 3 ವಿಕೆಟ್ ಮತ್ತು ಅಫ್ಘಾನಿಸ್ತಾನ ವಿರುದ್ಧ 16 ರನ್​​ಗೆ 4 ವಿಕೆಟ್ ಪಡೆದು ಗಮನ ಸೆಳೆದಿದ್ದರು.

Friends and family celebrate Atharva Ankolekar's homecoming after U-19 Asia Cup heroics
ಅಥರ್ವ ಅಂಕೋಲೇಕರ್


ಇದಾದ ಬೆನ್ನಲ್ಲೆ ಮುಂಬೈ ಮೂಲದ ಅಥರ್ವ ಬಗೆಗಿನ ಹಲವು ವಿಚಾರ ಬೆಳಕಿಗೆ ಬಂದಿದೆ. 10ರ ಹರೆಯದಲ್ಲಿ ತಂದೆಯನ್ನು ಕಳೆದುಕೊಂಡರು. ಅಥರ್ವ ತಂದೆ ಬಸ್ ಕಂಡಕ್ಟರ್ ಆಗಿದ್ದರು. ಅವರು ನಿಧನರಾದಾಗ ಬಳಿಕ ಪತ್ನಿಗೆ ಆ ಕೆಲಸ ಸಿಕ್ಕಿತು. ಮಹಿಳಾ ಕಂಡಕ್ಟರ್ ಆಗಿರುವ ಅಥರ್ವ ಅವರ ತಾಯಿ ವೈದೇಹಿ ಬಹಳಷ್ಟು ಕಷ್ಟಪ್ಟಟ್ಟು ಮಗನನ್ನು ಬೆಳೆಸಿದರು.

ಹಿಂದಾದ ತಪ್ಪು ಮರುಕಳಿಸಿದರೆ ಈ ಆಟಗಾರನನ್ನು ತಂಡದಿಂದ ಕಿತ್ತೆಸೆಯುತ್ತಾರಂತೆ ರವಿಶಾಸ್ತ್ರಿಅಥರ್ವ ಒಬ್ಬ ಅತ್ಯುತ್ತಮ ಕ್ರಿಕೆಟಿಗ ಆಗ ಬೇಕೆಂಬುದು ತಂದೆಯ ಕನಸಾಗಿತ್ತು. ತಂದೆಯ ಕನಸನ್ನು ನನಸು ಮಾಡಲು ಶ್ರಮ ಪಟ್ಟ ಅಥರ್ವ ಕಲಿಕೆಯೂಂದಿಗೆ ಕ್ರೀಡೆಯಲ್ಲೂ ಹೆಚ್ಚಿನ ಗಮನ ಹರಿಸಿದರು. ಸದ್ಯ ವಾಣಿಜ್ಯ ವಿಷಯದಲ್ಲಿ ಪದವಿ ಕಲಿಯುತ್ತಿರುವ ಅಥರ್ವ, ಭಾರತ ಅಂಡರ್-19 ತಂಡದಲ್ಲಿ ಆಡುತ್ತಿದ್ದಾರೆ. ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ.

ತನ್ನ ಮಗನ ಬಗ್ಗೆ ಭಾವನಾತ್ಮಕ ಮಾತನ್ನಾಡಿದ ತಾಯಿ ವೈದೇಹಿ, "ಅಥರ್ವ ಅವರ ತಂದೆ ಈಗ ಇದ್ದಿದ್ದರೆ ತುಂಬಾನೇ ಸಂತೋಷ ಪಡುತ್ತಿದ್ದರು. ಇಂದು ಇಡೀ ಭಾರತವೇ ಅವನನ್ನು ಹೊಗಳುತ್ತಿದೆ. ಬಾಂಗ್ಲಾದೇಶ ಗೆಲುವಿಗೆ 12 ರನ್ ಬೇಕಿತ್ತು. ಭಾರತದ ಗೆಲುವಿಗೆ 2 ವಿಕೆಟ್ ಬೇಕಿತ್ತು. ಈ ಸಂದರ್ಭ ಅಥರ್ವನಿಗೆ ಬಾಲ್ ಮಾಡಲು ಹೇಳಿದರೆ ಖಂಡಿತವಾಗಿಯು ಸಿಕ್ಕ ಅವಕಾಶವನ್ನು ಕಳೆದುಕೊಳ್ಳಲಾರ ಎಂಬ ವಿಶ್ವಾಸವಿತ್ತು. ಕೊನೆಗೆ ಅಂದುಕೊಂಡಂತೆ ಆಯಿತು. ಅಥರ್ವನಿಗೆ ಕ್ರಿಕೆಟ್ ಶೂ ತೆಗೆದುಕೊಳ್ಳುವಷ್ಟು ನಮ್ಮಲ್ಲಿ ಹಣ ಇರಲಿಲ್ಲ. ಅನೇಕರು ನಮಗೆ ಸಹಾಯ ಮಾಡಿದರು. ಎಲ್ಲರಿಗೂ ಧನ್ಯವಾದ" ಎಂಬುದು ವೈದೇಹಿ ಅವರ ಮಾತು.

ಸದ್ಯ ಕಿರಿಯರ ತಂಡದಲ್ಲಿ ಇನ್ನಷ್ಟು ಉತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಬೇಕು, ಭಾರತದ ಕ್ಯಾಪ್ ಧರಿಸಬೇಕು ಎಂಬುದು ಅಥರ್ವ ಅವರ ಕನಸು. ಅವರ ಕನಸು ಆದಷ್ಟು ಬೇಗ ನನಸಾಗಲಿ ಎಂದು ಆಶಿಸೋಣ.

 First published: September 16, 2019, 11:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading