ಕಮ್​ಬ್ಯಾಕ್ ಪಂದ್ಯದಲ್ಲಿ ಮಂದಾನ ದಾಖಲೆ; ವಿಂಡೀಸ್ ವಿರುದ್ಧದ ಏಕದಿನ ಸರಣಿ ಭಾರತದ ಪಾಲು

ಕಮ್​ಬ್ಯಾಕ್ ಪಂದ್ಯದಲ್ಲೇ ಅಬ್ಬರಿಸಿದ ಮಂದಾನ ನೂತನ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 2000 ರನ್ ಗಳಿಸಿದ ಭಾರತದ 2ನೇ ಕ್ರಿಕೆಟರ್​ ಹಾಗೂ ವಿಶ್ವದ 3ನೇ ಮಹಿಳಾ ಕ್ರಿಕೆಟರ್​ ಎಂಬ ಹಿರಿಮೆಗೆ ಮಂದಾನ ಭಾಜನವಾಗಿದ್ದಾರೆ.

Vinay Bhat | news18-kannada
Updated:November 7, 2019, 3:05 PM IST
ಕಮ್​ಬ್ಯಾಕ್ ಪಂದ್ಯದಲ್ಲಿ ಮಂದಾನ ದಾಖಲೆ; ವಿಂಡೀಸ್ ವಿರುದ್ಧದ ಏಕದಿನ ಸರಣಿ ಭಾರತದ ಪಾಲು
ಕಮ್​ಬ್ಯಾಕ್ ಪಂದ್ಯದಲ್ಲೇ ಅಬ್ಬರಿಸಿದ ಮಂದಾನ ನೂತನ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 2000 ರನ್ ಗಳಿಸಿದ ಭಾರತದ 2ನೇ ಕ್ರಿಕೆಟರ್​ ಹಾಗೂ ವಿಶ್ವದ 3ನೇ ಮಹಿಳಾ ಕ್ರಿಕೆಟರ್​ ಎಂಬ ಹಿರಿಮೆಗೆ ಮಂದಾನ ಭಾಜನವಾಗಿದ್ದಾರೆ.
  • Share this:
ಬೆಂಗಳೂರು (ನ. 07): ವೆಸ್ಟ್​ ಇಂಡೀಸ್ ಪ್ರವಾಸದಲ್ಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಭರ್ಜರಿ ಪ್ರದರ್ಶನ ತೋರುತ್ತಿದ್ದು, ಏಕದಿನ ಸರಣಿ ವಶಪಡಿಸಿಕೊಂಡಿದೆ. ನಿನ್ನೆ ಅಂಟಿಗಾದಲ್ಲಿ ನಡೆದ ಅಂತಿಮ ಮೂರನೇ ಪಂದ್ಯದಲ್ಲಿ ಬ್ಯಾಟಿಂಗ್- ಬೌಲಿಂಗ್​ನಲ್ಲಿ ಮಿಂಚಿದ ಮಿಥಾಲಿ ಪಡೆ 6 ವಿಕೆಟ್​ಗಳಿಂದ ಗೆದ್ದು ಬೀಗಿತು.

ಟಾಸ್ ಗೆದ್ದ ವೆಸ್ಟ್​ ಇಂಡೀಸ್ ಮಹಿಳೆಯರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಆರಂಭದಿಂದಲೇ ಕೆರಿಬಿಯನ್ ಮಹಿಳೆಯರು ವಿಕೆಟ್ ಕಳೆದುಕೊಂಡು ಸಾಗಿದರು. ಭಾರತೀಯ ಬೌಲರ್​ಗಳ ಸಂಘಟಿತ ದಾಳಿಗೆ ಕುಸಿದ ವೆಸ್ಟ್​ ಇಂಡೀಸ್ 200 ರನ್​ಗಳ ಗಡಿ ದಾಟುವಲ್ಲಿ ವಿಫಲವಾಯಿತು.

IND vs BAN: 2ನೇ ಟಿ-20 ಪಂದ್ಯಕ್ಕೆ ಮಹತ್ವದ ಬದಲಾವಣೆ; ಹಿಂಟ್ ಕೊಟ್ಟ ಹಿಟ್​ಮ್ಯಾನ್; ಯಾರಿಗೆ ಚಾನ್ಸ್?

ವಿಂಡೀಸ್ ಪರ ಏಕಾಂಗಿ ಹೋರಾಟ ನಡೆಸಿದ ನಾಯಕಿ ಸ್ಟಾಫನಿ ಟೇಲರ್ 112 ಎಸೆತಗಳಲ್ಲಿ 79 ರನ್ ಗಳಿಸಿದರು. ಬಳಿಕ ಸ್ಟ್ಯಾಕಿ ಅನ್ ಕಿಂಗ್ 38 ರನ್ ಬಾರಿಸಿದ್ದೇ ಹೆಚ್ಚು. ಅಂತಿಮವಾಗಿ ವಿಂಡೀಸ್ 50 ಓವರ್​ಗೆನೆ 194 ರನ್​ಗಳಿಗೆ ಆಲೌಟ್ ಆಯಿತು. ಭಾರತ ಪರ ಗೋಸ್ವಾಮಿ, ಪೂಮ್ ಯಾದವ್, ಶಿಖಾ ಪಾಂಡೆ, ರಾಜೇಶ್ವರಿ ಹಾಗೂ ದೀಪ್ತಿ ತಲಾ 1 ವಿಕೆಟ್ ಪಡೆದರು.

 195 ರನ್​ಗಳ ಸುಲಭ ಗುರಿ ಬೆನ್ನಟ್ಟಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ಇಂಜುರಿಯಿಂದ ಭರ್ಜರಿ ಕಮ್​ಬ್ಯಾಕ್ ಮಾಡಿದ ಸ್ಮೃತಿ ಮಂದಾನ ಅಬ್ಬರಿಸಿದರೆ ರೋಡ್ರಿಗಸ್ ಅತ್ಯುತ್ತಮ ಆಟ ಪ್ರದರ್ಶಿಸಿದರು. ಮಂದಾನ ಸ್ಫೋಟಕ ಆಟವಾಡಿದರೆ, ರೋಡ್ರಿಗಸ್ ಸಾತ್ ನೀಡಿದರು.

KPL ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಬಳ್ಳಾರಿ ಟಸ್ಕರ್ಸ್​​ ತಂಡದ ಇಬ್ಬರು ಆಟಗಾರರ ಬಂಧನ

ಈ ಜೋಡಿ ಮೊದಲ ವಿಕೆಟ್​ಗೆನೆ 141 ರನ್​ಗಳ ಜೊತೆಯಾಟ ಆಡಿತು. ರೋಡ್ರಿಗಸ್ 92 ಎಸೆತಗಳಲ್ಲಿ 69 ರನ್​ಗೆ ಔಟ್ ಆದರು. ಮಂದಾನ ಕೇವಲ 63 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್ ಸಿಡಿಸಿ 74 ರನ್ ಚಚ್ಚಿದರು. ಇವರ ಅಮೋಘ ಆಟದ ನೆರವಿನಿಂದ ಭಾರತದ ಮಹಿಳೆಯರು 42.1 ಓವರ್​ನಲ್ಲೇ 4 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿ ಗೆಲುವಿನ ನಗೆ ಬೀರಿತು.

6 ವಿಕೆಟ್​ಗಳ ಜಯ ಸಾಧಿಸಿ ಭಾರತ 2-1 ಮುನ್ನಡೆಯೊಂದಿಗೆ ಏಕದಿನ ಸರಣಿ ವಶಪಡಿಸಿಕೊಂಡಿತು. ಮುಂದೆ 5 ಪಂದ್ಯಗಳ ಟಿ-20 ಸರಣಿ ಆಡಲಿದ್ದು, ನವೆಂಬರ್ 9 ರಂದು ಮೊದಲ ಪಂದ್ಯ ನಡೆಯಲಿದೆ.

ಸ್ಮೃತಿ ಮಂದಾನ ದಾಖಲೆ:

ಕಮ್​ಬ್ಯಾಕ್ ಪಂದ್ಯದಲ್ಲೇ ಅಬ್ಬರಿಸಿದ ಮಂದಾನ ನೂತನ ದಾಖಲೆ ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 2000 ರನ್ ಗಳಿಸಿದ ಭಾರತದ 2ನೇ ಕ್ರಿಕೆಟರ್​ ಹಾಗೂ ವಿಶ್ವದ 3ನೇ ಮಹಿಳಾ ಕ್ರಿಕೆಟರ್​ ಎಂಬ ಹಿರಿಮೆಗೆ ಮಂದಾನ ಭಾಜನವಾಗಿದ್ದಾರೆ.

ಮಂದಾನ ತಮ್ಮ 51ನೇ ಇನ್ನಿಂಗ್ಸ್‌ನಲ್ಲಿ 2000 ರನ್‌ಗಳ ಮೈಲುಗಲ್ಲನ್ನು ದಾಟಿದ್ದಾರೆ. ಮಹಿಳಾ ಕ್ರಿಕೆಟ್​ನಲ್ಲಿ ಈ ಬೆಲಿಂಡಾ ಕ್ಲಾರ್ಕ್​ 41 ಮತ್ತು ಮೆಗ್ ಲ್ಯಾನಿಂಗ್ 45 ಇನ್ನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿ ಮೊದಲೆರಡು ಸ್ಥಾನದಲ್ಲಿದ್ದಾರೆ. ಇನ್ನು ಭಾರತದ ಶಿಖರ್ ಧವನ್ 48 ಇನ್ನಿಂಗ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ಕೊಹ್ಲಿ 53, ಗಂಗೂಲಿ 52 ಇನಿಂಗ್ಸ್​​ಳಲ್ಲಿ ಈ ಸಾಧನೆ ಮಾಡಿದ್ದಾರೆ.

First published:November 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading