ಕ್ವೀನ್ಸ್ಲ್ಯಾಂಡ್ (ಅಕ್ಟೋಬರ್ 01); ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಏಕದಿನ ಪಂದ್ಯಗಳ ಸರಣಿಯನ್ನು ಕೈಚೆಲ್ಲುವ ಮೂಲಕ ನಿರಾಸೆ ಅನುಭವಿಸಿದ್ದ ಭಾರತದ ವನಿತೆಯರು ಮೊದಲ ಟೆಸ್ಟ್ (1st Test Match Against Australia wmn) ಪಂದ್ಯದಲ್ಲೇ ಅದ್ಭುತ ಪ್ರದರ್ಶ ನೀಡುತ್ತಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನಲ್ಲಿ (Queensland) ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ನ (Pink Ball Test) 2 ನೇ ದಿನದಂದು ಭಾರತೀಯ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ (Smriti mandhana) ತನ್ನ ಚೊಚ್ಚಲ ಟೆಸ್ಟ್ ಶತಕವನ್ನು ಪೂರೈಸುವ ಮೂಲಕ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಮೂರಂಕಿ ದಾಟಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಪ್ರಶಂಶೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಮಂದಾನ ಬ್ಯಾಟಿಂಗ್ಗೆ ನಿಬ್ಬೆರಗಾಗಿರುವ ಕ್ರಿಕೆಟ್ ಜಗತ್ತು ಅವರನ್ನು ಇದೀಗ "Off Side ದೇವತೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡುತ್ತಿದೆ. ಈ ಹಿಂದೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಮಾತ್ರ "Off Side ಮಹಾರಾಜ" ಎಂದು ಕರೆಯಾಗುತ್ತಿತ್ತು ಎಂಬುದು ಉಲ್ಲೇಖಾರ್ಹ.
ನಿನ್ನೆ ಮೊದಲ ದಿನದಾಟ ಮಳೆಗೆ ಆಹುತಿಯಾಗಿತ್ತು. ಆದರೆ, ನಿನ್ನೆ 84 ರನ್ ಗಳಿಸಿ ಔಟಾಗದೆ ಉಳಿದಿದ್ದ ಮಂದಾನ ಇಂದು ಟೆಸ್ಟ್ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಬಾರಿಸಿದ್ಧಾರೆ. ಈ ಮೂಲಕ ಮೊದಲ ಮತ್ತು ಏಕೈಕ ಟೆಸ್ಟ್ನಲ್ಲಿ ಭಾರತ ಮೇಲುಗೈ ಸಾಧಿಸಿದೆ. 127 ರನ್ ಭಾರಿಸಿರುವ ಸ್ಮೃತಿ ಮಂದಾನ ಅವರ ಮ್ಯಾರಾಥಾನ್ ಇನ್ನಿಂಗ್ಸ್ನಲ್ಲಿ 22 ಬೌಂಡರಿ ಮತ್ತು 1 ಸಿಕ್ಸರ್ ಅಡಕವಾಗಿದ್ದು, ಬಹುಪಾಲು ಬೌಂಡರಿಗಳು ಆಫ್ ಸೈಡಿನಲ್ಲಿ ಮನಮೋಹಕ ಡ್ರೈವ್ಗಳ ಮೂಲಕ ಬಂದದ್ದು ವಿಶೇಷ.
ಇದೀಗ ವಿಶ್ವದ ಕ್ರಿಕೆಟ್ ಸಮುದಾಯವು ಸ್ಮೃತಿ ಮಂದಾನ ಅವರ ಈ ಸಾಧನೆಗೆ ಪ್ರಶಂಶೆಯ ಮಹಾಪೂರವನ್ನೇ ಹರಿಸುತ್ತಿದೆ. ಅಲ್ಲದೆ, ಆಸ್ಟ್ರೇಲಿಯಾದ ಕಠಿಣ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ನಿರ್ವಹಣೆಯನ್ನು ಪ್ರದರ್ಶಿಸಿದ ಬ್ಯಾಟರ್ ಅನ್ನು ಶ್ಲಾಘಿಸಿದೆ.
ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅವರು ಟ್ವಿಟ್ಟರ್ನಲ್ಲಿ ಮಂದಾನ ಅವರನ್ನು "ಆಫ್ಸೈಡ್ನ ದೇವತೆ" ಎಂದು ಕರೆದಿದ್ದಾರೆ.
The Goddess of the offside.
Congratulations on your maiden test hundred @mandhana_smriti. First of many. Well played 👏🏻 #AUSvIND pic.twitter.com/nS6am012nL
— Wasim Jaffer (@WasimJaffer14) October 1, 2021
A simple celebration. That’s Smriti Mandhana scoring her maiden Test 💯 #AUSvIND #PinkBallTest. @mandhana_smriti @BCCIWomen
— Anjum Chopra (@chopraanjum) October 1, 2021
Test Century. First ever. Definitely first of many. Well played, Smriti Mandhana. Make it BIG 🥳😊 #PinkBallTest #AusvInd
— Aakash Chopra (@cricketaakash) October 1, 2021
Top class century @mandhana_smriti. Kick on and get a big one 👏🏻 #AUSvIND
— ದೊಡ್ಡ ಗಣೇಶ್ | Dodda Ganesh (@doddaganesha) October 1, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ