ನವದೆಹಲಿ, ನ. 9: ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ (Syed Mushtaq Ali Trophy T20 Championship) ಗ್ರೂಪ್ ಹಂತ ಮುಕ್ತಾಯವಾಗಿದೆ. ಸತತ ನಾಲ್ಕು ಗೆಲುವು ಕಂಡಿದ್ದ ಕರ್ನಾಟಕ ತಂಡ ಇಂದು ಚೊಚ್ಚಲ ಸೋಲು ಅನುಭವಿಸಿತು (Karnataka cricket team taste first defeat). ಪರಿಣಾಮವಾಗಿ ಇಲೈಟ್ ಬಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಕ್ವಾರ್ಟರ್ ಫೈನಲ್ ಬದಲು ಪ್ರೀ ಕ್ವಾರ್ಟರ್ಫೈನಲ್ನಲ್ಲಿ (Preliminary Quarterfinal) ಕರ್ನಾಟಕ ಸೆಣಸಬೇಕಾಗಿದೆ. ಇಂದು ನಡೆದ ಪಂದ್ಯದಲ್ಲಿ ಬಂಗಾಳ ವಿರುದ್ಧ ಕರ್ನಾಟಕ 7 ವಿಕೆಟ್ಗಳಿಂದ ಸೋಲನುಭವಿಸಿತು. ಕರ್ನಾಟಕ ಮೊದಲು ಬ್ಯಾಟ್ ಮಾಡಿ 134 ರನ್ ಗಳಿಸಿತು. ಆ ಮೊತ್ತವನ್ನು ಬಂಗಾಳ ಎರಡು ಓವರ್ ಇರುವಂತೆ ಯಶಸ್ವಿಯಾಗಿ ಚೇಸ್ ಮಾಡಿತು. ಬಂಗಾಳ ತಂಡ ಉತ್ತಮ ರನ್ ರೇಟ್ ಆಧಾರದ ಮೇಲೆ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.
ಮಹಾರಾಷ್ಟ್ರ, ಬಂಗಾಳ, ರಾಜಸ್ಥಾನ್, ಗುಜರಾತ್ ಮತ್ತು ಹೈದರಾಬಾದ್ ತಂಡಗಳು ನೇರ ಕ್ವಾರ್ಟರ್ಫೈನಲ್ ಪ್ರವೇಶಿಸಿವೆ. ತಮಿಳುನಾಡು, ಕರ್ನಾಟಕ, ಹಿಮಾಚಲ ಪ್ರದೇಶ, ವಿದರ್ಭ, ಸೌರಾಷ್ಟ್ರ ಮತ್ತು ಮಧ್ಯ ಪ್ರದೇಶ ತಂಡಗಳು ಪ್ರೀ ಕ್ವಾರ್ಟರ್ಫೈನಲ್ ಹಂತ ಮುಟ್ಟಿವೆ. ಈ 16ರ ಹಂತದಲ್ಲಿ ಕರ್ನಾಟಕಕ್ಕೆ ಸೌರಾಷ್ಟ್ರ ತಂಡ ಸವಾಲು ಹಾಕಿದೆ.
ನಾಕೌಟ್ ಹಂತಕ್ಕೇರುವ ಮಾನದಂಡ ಏನು?
ಒಟ್ಟು 38 ತಂಡಗಳು ಪಾಲ್ಗೊಂಡಿರುವ ಈ ದೇಶೀಯ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತಲಾ 6 ತಂಡಗಳ 5 ಇಲೈಟ್ ಗುಂಪುಗಳನ್ನ ಮಾಡಲಾಯಿತು. ಎಂಟು ತಂಡಗಳಿರುವ ಒಂದು ಪ್ಲೇಟ್ ಗ್ರೂಪ್ ಮಾಡಲಾಯಿತು. ಪ್ರತೀ ಇಲೈಟ್ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡ ನೇರ ಎಂಟರ ಹಂತ (ಕ್ವಾರ್ಟರ್ ಫೈನಲ್) ತಲುಪಿದೆ. ಅಂದರೆ ಐದು ಗ್ರೂಪ್ಗಳ ಟಾಪರ್ ತಂಡಗಳು ಕ್ವಾರ್ಟರ್ ಫೈನಲ್ ತಲುಪಿವೆ.
ಪ್ರತೀ ಇಲೈಟ್ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದ ತಂಡಗಳು ಹಾಗೂ ಪ್ಲೇಟ್ ಗ್ರೂಪ್ನ ವಿನ್ನರ್ ತಂಡ ಹೀಗೆ ಆರು ತಂಡಗಳು ಪ್ರೀ ಕ್ವಾರ್ಟರ್ ಫೈನಲ್ ತಲುಪಿವೆ. ಪ್ರೀಕ್ವಾರ್ಟರ್ ಫೈನಲ್ನಿಂದ ಮೂರು ತಂಡಗಳು ಕ್ವಾರ್ಟರ್ ಫೈನಲ್ಗೆ ದಾರಿ ಪಡೆಯುತ್ತವೆ.
ಇದನ್ನೂ ಓದಿ: Sanjay Bangar- ಟೀಮ್ ಇಂಡಿಯಾ ಮಾಜಿ ಕೋಚ್ ಸಂಜಯ್ ಬಂಗಾರ್ ಈಗ ಆರ್ಸಿಬಿ ಮುಖ್ಯ ಕೋಚ್
ನವೆಂಬರ್ 16ರಂದು ಮೂರು ಪ್ರೀಕ್ವಾರ್ಟರ್ಫೈನಲ್ ಪಂದ್ಯಗಳು ನಡೆಯಲಿವೆ. ನ. 18ರಂದು ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ. ನ. 20ಕ್ಕೆ ಸೆಮಿಫೈನಲ್ ಹಾಗೂ ನ. 22ಕ್ಕೆ ಫೈನಲ್ ಪಂದ್ಯ ನಿಗದಿಯಾಗಿದೆ.
ನ. 16ರಂದು ನಡೆಯಲಿರುವ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು:
1) ತಮಿಳುನಾಡು vs ವಿದರ್ಭಾ
2) ಕರ್ನಾಟಕ vs ಸೌರಾಷ್ಟ್ರ
3) ಹಿಮಾಚಲ ಪ್ರದೇಶ vs ಮಧ್ಯ ಪ್ರದೇಶ
ನ. 18ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯಗಳು:
1) ಮಹಾರಾಷ್ಟ್ರ vs TBD
2) ಬಂಗಾಳ vs TBD
3) ರಾಜಸ್ಥಾನ್ vs TBD
4) ಗುಜರಾತ್ vs ಹೈದರಾಬಾದ್
ಇದನ್ನೂ ಓದಿ: IND vs PAK Match- ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆ ಕಂಡ ಪಂದ್ಯ
ಸ್ಪೆಷಲ್ ಪಾಯಿಂಟ್ಸ್:
* ಸಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಾರಂಭವಾಗಿದ್ದು 2006ರಲ್ಲಿ
* ಈಗ ನಡೆಯುತ್ತಿರುವುದು 14ನೇ ಆವೃತ್ತಿ
* ತಮಿಳುನಾಡು ತಂಡ ಹಾಲಿ ಚಾಂಪಿಯನ್ಸ್
* ಈವರೆಗೆ 9 ತಂಡಗಳು ಈ ಟೂರ್ನಮೆಂಟ್ ಗೆದ್ದಿವೆ.
* ನಾಲ್ಕು ತಂಡಗಳು ಎರಡೆರಡು ಬಾರಿ ಟ್ರೋಫಿ ಎತ್ತಿಹಿಡಿದಿವೆ. ತಮಿಳುನಾಡು, ಬರೋಡಾ, ಗುಜರಾತ್ ಮತ್ತು ಕರ್ನಾಟಕ ತಂಡಗಳು ತಲಾ ಎರಡು ಬಾರಿ ಚಾಂಪಿಯನ್ ಎನಿಸಿವೆ.
* ಸತತ ಎರಡು ಬಾರಿ ಟ್ರೋಫಿ ಜಯಿಸಿದ ದಾಖಲೆ ಕರ್ನಾಟಕದ್ದು
* ಸತತ 14 ಪಂದ್ಯಗಳನ್ನ ಗೆದ್ದ ದಾಖಲೆಯೂ ಕರ್ನಾಟಕದ್ದಾಗಿದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ