Andre Russell: ಆಡಿದ 14 ಎಸೆತಗಳಲ್ಲಿ 6 ಸಿಕ್ಸರ್; ರಸೆಲ್ ಆರ್ಭಟದಿಂದ ಲಂಕಾ ವಿರುದ್ಧದ ಸರಣಿ ಕ್ಲೀನ್​ಸ್ವೀಪ್!

Andre Russell Video: 156 ರನ್​ಗಳ ಟಾರ್ಗೆಟ್ ವೆಸ್ಟ್​ ಇಂಡೀಸ್​ಗೆ ದೊಡ್ಡ ಸವಾಲಾಗಿ ಪರಿಣಮಿಸಲಿಲ್ಲ. ಪವರ್ ಹಿಟ್ಟರ್​​ಗಳಿಂದ ಕೂಡಿದ್ದ ಕೆರಿಬಿಯನ್ ತಂಡ ಈ ಗುರಿಯನ್ನು 17 ಓವರ್​ನಲ್ಲೇ ಮುಟ್ಟಿತು.

ವಿಸ್ಡನ್ ಲೀಡಿಂಗ್ ಟಿ-20 ಕ್ರಿಕೆಟರ್: ಆ್ಯಂಡ್ರ್ಯೂ ರಸೆಲ್

ವಿಸ್ಡನ್ ಲೀಡಿಂಗ್ ಟಿ-20 ಕ್ರಿಕೆಟರ್: ಆ್ಯಂಡ್ರ್ಯೂ ರಸೆಲ್

  • Share this:
ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ವೆಸ್ಟ್​ ಇಂಡೀಸ್ ಕ್ರಿಕೆಟ್ ತಂಡ ಟಿ-20 ಸರಣಿಯನ್ನು ವೈಟ್​ವಾಷ್ ಮಾಡುವ ಮೂಲಕ ಅಂತ್ಯಗೊಳಿಸಿದೆ. ನಿನ್ನೆ ಪಲ್ಲೆಕೆಲೆಯಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಲಂಕಾನ್ನರನ್ನು ಬಗ್ಗು ಬಡಿದು ಕೆರಿಬಿಯನ್ನರು 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದರು. ಎರಡು ಟಿ-20 ಪಂದ್ಯಗಳ ಪೈಕಿ ವೆಸ್ಟ್​ ಇಂಡೀಸ್ ಎರಡನ್ನೂ ಗೆದ್ದು ಸರಣಿ ವಶಪಡಿಸಿಕೊಂಡಿತು.

Sri Lanka vs West Indies: Andre Russell leads WI to T20 series victory
ಆ್ಯಂಡ್ರೊ ರಸೆಲ್. (ಫೋಟೋ ಕೃಪೆ: ವೆಸ್ಟ್​ ಇಂಡೀಸ್ ಟ್ವಿಟ್ಟರ್)


IPL 2020: ಐಪಿಎಲ್​ನ ಬಲಿಷ್ಠ ತಂಡಕ್ಕೆ ಶಾಕ್; ಅಂತಿಮ ಹಂತದಲ್ಲಿ ನಾನು ಲಭ್ಯವಿಲ್ಲ ಎಂದ ಸ್ಟಾರ್ ಆಟಗಾರ!

ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ಆರಂಭದಲ್ಲೇ ತನ್ನ ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡಿತು. ಕುಸಲ್ ಪೆರೇರಾ 15, ಆವಿಷ್ಕಾ ಫೆರ್ನಾಂಡೊ 9, ಕುಸಲ್ ಮೆಂಡೀಸ್ 11 ರನ್ ಗಳಿಸಿ ಬೇಗನೆ ಔಟ್ ಆದರು.

ಆದರೆ, ಡಸ್ಸನ್ ಶಂಕರ ಹಾಗೂ ಅನುಭವಿ ಆ್ಯಂಜಲೊ ಮ್ಯಾಥ್ಯೂಸ್ ಜೊತೆಗೂಡಿ ತಂಡದ ಮೊತ್ತವನ್ನು ಏರಿಸಿದರು. ಮ್ಯಾಥ್ಯೂಸ್ 23 ರನ್ ಗಳಿಸಿದರೆ, ಶಂಕರ 24 ಎಸೆತಗಳಲ್ಲಿ ಅಜೇಯ 31 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ತಿಸಾರ ಪರೇರಾ 13 ಎಸೆತಗಳಲ್ಲಿ ಅಜೇಯ 21 ರನ್ ಚಚ್ಚಿದರು. ಲಂಕಾ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು.

156 ರನ್​ಗಳ ಟಾರ್ಗೆಟ್ ವೆಸ್ಟ್​ ಇಂಡೀಸ್​ಗೆ ದೊಡ್ಡ ಸವಾಲಾಗಿ ಪರಿಣಮಿಸಲಿಲ್ಲ. ಪವರ್ ಹಿಟ್ಟರ್​​ಗಳಿಂದ ಕೂಡಿದ್ದ ಕೆರಿಬಿಯನ್ ತಂಡ ಈ ಗುರಿಯನ್ನು 17 ಓವರ್​ನಲ್ಲೇ ಮುಟ್ಟಿತು. ಆ್ಯಂಡ್ರೋ ರಸೆಲ್ ಸ್ಫೋಟಕ ಬ್ಯಾಟಿಂಗ್ ಅನ್ನು ಕಟ್ಟಿ ಹಾಕಲು ಲಂಕಾನ್ನರು ವಿಫಲರಾದರು.

 



6, 6, 6, 6, 6: MS Dhoni ಸ್ಫೋಟಕ ಕಮ್​ಬ್ಯಾಕ್;​ ಒಂದೇ ಓವರ್​​ನಲ್ಲಿ 5 ಸಿಕ್ಸರ್; ಇಲ್ಲಿದೆ ವಿಡಿಯೋ

ರಸೆಲ್ ಕೇವಲ 14 ಎಸೆತಗಳಲ್ಲಿ ಒಂದೇ ಒಂದು ಬೌಂಡರಿ ಬಾರಿಸಿದೆ 6 ಸಿಕ್ಸರ್ ಸಿಡಿಸಿ ಅಜೇಯ 40 ರನ್ ಚಚ್ಚಿ ತಂಡಕ್ಕೆ ಗೆಲುವು ತಂದಿಟ್ಟರು. ಶ್ರಿಮೋನ್ ಹೆಟ್ಮೇರ್ 42 ಎಸೆತಗಳಲ್ಲಿ ಅಜೇಯ 43 ಹಾಗೂ ಬ್ರಾಂಡನ್ ಕಿಂಗ್ 21 ಎಸೆತಗಳಲ್ಲಿ 43 ರನ್ ಸಿಡಿಸಿದರು.

ವೆಸ್ಟ್​ ಇಂಡೀಸ್ 17 ಓವರ್​ನಲ್ಲಿ 3 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. 2-0 ಅಂತರದಿಂದ ಟಿ-20 ಸರಣಿ ವೈಟ್​ವಾಷ್ ಮಾಡಿದ ಸಾಧನೆ ಮಾಡಿತು. ಪಂದ್ಯಶ್ರೇಷ್ಠ- ಸರಣಿಶ್ರೇಷ್ಠ ಆ್ಯಂಡ್ರೊ ರಸೆಲ್ ಬಾಜಿಕೊಂಡರು.

First published: