ವಿಶ್ವ ದಾಖಲೆ ಬರೆದ ನೇಪಾಳ ತಂಡದ ನಾಯಕ; ಕಿಂಗ್ ಕೊಹ್ಲಿಗೂ ಮಾಡಲಾಗಿಲ್ಲ ಈ ಸಾಧನೆ

152 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ನೇಪಾಳ ಪರ ತಂಡದ ನಾಯಕ ಪರಾಸ್ ಖಡ್ಕ ಅಬ್ಬರಿಸಿ ಬೊಬ್ಬಿರಿದರು. ಸ್ಫೋಟಕ ಆಟವಾಡಿದ ಖಡ್ಕ ಟಿ-20 ಕ್ರಿಕೆಟ್​ನಲ್ಲಿ ದಾಖಲೆಯ ಶತಕ ಸಿಡಿಸಿದರು.

Vinay Bhat | news18-kannada
Updated:September 29, 2019, 8:51 AM IST
ವಿಶ್ವ ದಾಖಲೆ ಬರೆದ ನೇಪಾಳ ತಂಡದ ನಾಯಕ; ಕಿಂಗ್ ಕೊಹ್ಲಿಗೂ ಮಾಡಲಾಗಿಲ್ಲ ಈ ಸಾಧನೆ
ಪರಾಸ್ ಖಡ್ಕ , ನೇಪಾಳ ಕ್ರಿಕೆಟ್ ತಂಡ ನಾಯಕ
  • Share this:
ಬೆಂಗಳೂರು (ಸೆ. 29): ಕ್ರಿಕೆಟ್ ಜಗತ್ತಿಗೆ ಕಾಲಿಟ್ಟ ಬೆನ್ನಲ್ಲೆ ನೇಪಾಳ ತಂಡ ಭಾರೀ ಸದ್ದು ಮಾಡುತ್ತಿದೆ. ತಂಡದ ಆಟಗಾರರು, ನಾಯಕ ನೂತನ ದಾಖಲೆ ಬರೆಯುತ್ತಿದ್ದಾರೆ. ಸದ್ಯ ನೇಪಾಳ ತಂಡದ ನಾಯಕ ಪರಾಸ್ ಖಡ್ಕ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ  ಸಾಧನೆಯನ್ನು ದಾಖಲೆಗಳ ಸರದಾರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯಿಂದಲೂ ಮಾಡಲು ಸಾಧ್ಯವಾಗಿಲ್ಲ.

ಸಿಂಗಪೂರ್ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ನೇಪಾಳ 9 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸಿಂಗಪೂರ್​​ ಪರ ನಾಯಕ ಟಿಮ್ ಡೇವಿಡ್​ರ ಅಜೇಯ 64 ರನ್​ ಕಲೆಹಾಕಿದ ಪರಿಣಾಮ 20 ಓವರ್​ಗೆ 3 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು.

152 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ನೇಪಾಳ ಪರ ತಂಡದ ನಾಯಕ ಪರಾಸ್ ಖಡ್ಕ ಅಬ್ಬರಿಸಿ ಬೊಬ್ಬಿರಿದರು. ಸ್ಫೋಟಕ ಆಟವಾಡಿದ ಖಡ್ಕ ಟಿ-20 ಕ್ರಿಕೆಟ್​ನಲ್ಲಿ ದಾಖಲೆಯ ಶತಕ ಸಿಡಿಸಿದರು. 52 ಎಸೆತಗಳಲ್ಲಿ 7 ಬೌಂಡರಿ ಹಾಗೂ 9 ಸಿಕ್ಸರ್ ಸಿಡಿಸಿ ಪರಾಸ್ ಅಜೇಯ 106 ರನ್ ಚಚ್ಚಿದರು.

 Board Presidents XI vs South Africa: ಡ್ರಾನಲ್ಲಿ ಅಂತ್ಯಕಂಡ ಅಭ್ಯಾಸ ಪಂದ್ಯ; ರೋಹಿತ್ ಶೂನ್ಯವೇ ಹೈಲೈಟ್!

ಇವರ ಈ ಅಮೋಘ ಆಟದ ನೆರವಿನಬಿಂದ ನೇಪಾಳ ತಂಡ 16 ಓವರ್​ನಲ್ಲೇ 1 ವಿಕೆಟ್ ಕಳೆದುಕೊಂಡು 154 ರನ್ ಬಾರಿಸಿ 9 ವಿಕೆಟ್​ಗಳಿಂದ ಗೆದ್ದುಕೊಂಡಿತು. ಅಲ್ಲದೆ ಪರಾಸ್ ಅವರು ಟಿ-20 ಕ್ರಿಕೆಟ್​ನಲ್ಲಿ ಚೇಸಿಂಗ್ ವೇಳೆ ಶತಕ ಬಾರಿಸಿದ ವಿಶ್ವದ ಮೊದಲ ನಾಯಕ ಎನಿಸಿಕೊಂಡರು.

ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಈವರೆಗೆ ಚೇಸಿಂಗ್ ವೇಳೆ ಯಾವೊಬ್ಬ ನಾಯಕ ಶತಕ ಬಾರಿಸಿದ ದಾಖಲೆಯಿಲ್ಲ. ಮೊದಲು ಬ್ಯಾಟಿಂಗ್ ನಡೆಸುವಾದ ರೋಹಿತ್ ಶರ್ಮಾ, ಕ್ರಿಸ್ ಗೇಲ್, ಬ್ರೆಂಡಮ್ ಮೆಕಲಮ್ ಸೇರಿ ಪ್ರಮುಖರು ಶತಕ ಬಾರಿಸಿದ್ದಾರೆ. ಆದರೆ, ಟಾರ್ಗೆಟ್ ಬೆನ್ನಟ್ಟುವ ವೇಳೆ ಅಂತರಾಷ್ಟ್ರೀಯ ಟಿ-20 ಕ್ರಿಕೆಟ್​ನಲ್ಲಿ ಶತಕ ಬಾರಿಸಿದ ಮೊದಲ ಬ್ಯಾಟ್ಸ್​ಮನ್​ ಪರಾಸ್ ಆಗಿದ್ದಾರೆ.

First published:September 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading