IPL 2021: KKR ತಂಡಕ್ಕೆ ಆಘಾತ: ಪ್ರಮುಖ ಆಟಗಾರ ಐಪಿಎಲ್​ನಿಂದ ಹೊರಕ್ಕೆ..!

ಗಾಯಗೊಂಡಿರುವ ಕಾರಣ ಇಂಗ್ಲೆಂಡ್ ವಿರುದ್ದದ ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರ ಬದಲಿ ಆಟಗಾರರಾಗಿ ಕೆಎಲ್ ರಾಹುಲ್ ಅಥವಾ ಮಯಾಂಕ್ ಅಗರ್ವಾಲ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲಿದ್ದಾರೆ.

KKR

KKR

 • Share this:
  ಇಂಡಿಯನ್ ಪ್ರೀಮಿಯರ್ ಲೀಗ್​ನ ಉಳಿದ ಪಂದ್ಯಗಳಿಗಾಗಿ ಯುಎಇನಲ್ಲಿ ಸಿದ್ಧತೆಗಳು ಆರಂಭವಾಗಿವೆ. ಈಗಾಗಲೇ ಫ್ರಾಂಚೈಸಿಗಳು ಟೂರ್ನಿಗಾಗಿ ಬೇಕಾದ ತಯಾರಿಗಳನ್ನು ಆರಂಭಿಸಿವೆ. ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರೆಗೆ ಐಪಿಎಲ್​ನ ಉಳಿದ 31 ಪಂದ್ಯಗಳು ನಡೆಯಲಿದೆ. ಈ ಮಧ್ಯೆ ಕೆಕೆಆರ್ ತಂಡದ ಪ್ರಮುಖ ಆಟಗಾರ ಉಳಿದ ಪಂದ್ಯಗಳಿಗೆ ಅಲಭ್ಯರಾಗುವುದು ಖಚಿತವಾಗಿದೆ.

  ಹೌದು, ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಗೊಂಡಿರುವ ಟೀಮ್ ಇಂಡಿಯಾ ಆಟಗಾರ ಶುಭ್​ಮನ್​ ಗಿಲ್ ಐಪಿಎಲ್‌ನಿಂದಲೂ ಹೊರಗುಳಿಯಲ್ಲಿದ್ದಾರೆ. ಐಪಿಎಲ್​ನಲ್ಲಿ ಕೆಕೆಆರ್ ತಂಡದ ಆರಂಭಿಕ ಆಟಗಾರನಾಗಿರುವ ಗಿಲ್ ಗಂಭೀರ ಗಾಯದಿಂದ ಬಳಲುತ್ತಿದ್ದು, ಈ ಗಾಯದಿಂದ ಚೇತರಿಸಿಕೊಳ್ಳಲು ಕನಿಷ್ಠ 3 ತಿಂಗಳು ತೆಗೆದುಕೊಳ್ಳಲಿದೆ. ಇದರರ್ಥ ಗಾಯದ ಕಾರಣ ಫಿಟ್‌ನೆಸ್ ಅನ್ನು ಮರಳಿ ಪಡೆಯಲು ಗಿಲ್ ಬಹಳ ಸಮಯ ತೆಗೆದುಕೊಳ್ಳಲಿದ್ದಾರೆ. ಹೀಗಾಗಿ ಐಪಿಎಲ್​ನ ಉಳಿದ ಪಂದ್ಯಗಳಿಂದ ಹೊರಗುಳಿಯುವುದು ಬಹುತೇಕ ಖಚಿತ.

  ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ಆಡಿದ್ದ ಗಿಲ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ. ಇದೀಗ ಗಾಯಗೊಂಡಿರುವ ಕಾರಣ ಇಂಗ್ಲೆಂಡ್ ವಿರುದ್ದದ ಸರಣಿಯಿಂದ ಹೊರಗುಳಿಯಲಿದ್ದಾರೆ. ಅವರ ಬದಲಿ ಆಟಗಾರರಾಗಿ ಕೆಎಲ್ ರಾಹುಲ್ ಅಥವಾ ಮಯಾಂಕ್ ಅಗರ್ವಾಲ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲಿದ್ದಾರೆ.

  ಇದೀಗ ಐಪಿಎಲ್​ನಿಂದಲೂ ಗಿಲ್ ಹೊರಬೀಳುವ ಕಾರಣ ಕೆಕೆಆರ್ ತಂಡ ಕೂಡ ಬದಲಿ ಆಟಗಾರನ ಆಯ್ಕೆಗೆ ಮುಂದಾಗಲಿದೆ. ಏಕೆಂದರೆ ಈಗಾಗಲೇ ಐಪಿಎಲ್‌ನ ಉಳಿದ ಪಂದ್ಯಗಳಿಗೆ ಕೆಕೆಆರ್ ತಂಡದ ನಾಯಕ ಇಯಾನ್ ಮೋರ್ಗನ್ ಹಾಗೂ ವೇಗಿ ಪ್ಯಾಟ್ ಕಮ್ಮಿನ್ಸ್ ಅಲಭ್ಯರಾಗುವ ಸಾಧ್ಯತೆ ಹೆಚ್ಚು. ಈಗ ಗಿಲ್​ ಕೂಡ ಹೊರಬೀಳುತ್ತಿರುವುದರಿಂದ ಕೆಕೆಆರ್ ತಂಡ ಪ್ಲೇಯಿಂಗ್ ಇಲೆವೆನ್​ನ ಮೂರು ಸ್ಟಾರ್ ಆಟಗಾರರು ಅಲಭ್ಯರಾಗಬಹುದು. ಮೊದಲಾರ್ಧದಲ್ಲಿ ಕಳಪೆ ಪ್ರರ್ದಶನ ನೀಡಿ ಅಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಕೆಕೆಆರ್​ ತಂಡದ ಪ್ರದರ್ಶನದ ಮೇಲೆ ಗಿಲ್ ಅಲಭ್ಯತೆಯು ಪರಿಣಾಮ ಬೀರಬಹುದು.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:zahir
  First published: