• Home
  • »
  • News
  • »
  • sports
  • »
  • Shreyas Iyer: ಶ್ರೇಯಸ್ ಅಯ್ಯರ್​ಗೆ ತಿಂಗಳ ಆಟಗಾರ ಪ್ರಶಸ್ತಿ; ಭಾರತದ ಆಟಗಾರನಿಗೆ ICC ಗೌರವ

Shreyas Iyer: ಶ್ರೇಯಸ್ ಅಯ್ಯರ್​ಗೆ ತಿಂಗಳ ಆಟಗಾರ ಪ್ರಶಸ್ತಿ; ಭಾರತದ ಆಟಗಾರನಿಗೆ ICC ಗೌರವ

ಶ್ರೇಯಸ್ ಅಯ್ಯರ್

ಶ್ರೇಯಸ್ ಅಯ್ಯರ್

ಮಹಿಳಾ ಆಟಗಾರ್ತಿಯರಲ್ಲಿ ನ್ಯೂಜಿಲೆಂಡ್ ಆಲ್‌ರೌಂಡರ್ ಅಮೆಲಿಯಾ ಕೆರ್ ಫೆಬ್ರವರಿ ತಿಂಗಳ ಐಸಿಸಿ 'ಮಹಿಳೆಯರ ತಿಂಗಳ ಆಟಗಾರ್ತಿ ಗೌರವಕ್ಕೆ ಭಾಜನರಾಗಿದ್ದಾರೆ.

  • Share this:

ಭಾರತದ ವೇಗದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ( Shreyas Iyer) ಅವರು ಫೆಬ್ರವರಿ ತಿಂಗಳ ಐಸಿಸಿ 'ಪುರುಷರ ತಿಂಗಳ ಆಟಗಾರ' ಎಂಬ ಪ್ರಶಸ್ತಿಗೆ (Men's Player of the Month) ಭಾಜನರಾಗಿದ್ದಾರೆ. ಈ ಪ್ರಶಸ್ತಿಗೆ ಶ್ರೇಯಸ್ ಅಯ್ಯರ್ ಅವರನ್ನು ಸೋಮವಾರ ಆಯ್ಕೆ ಮಾಡಲಾಯಿತು.  ಅಲ್ಲದೇ ಇತ್ತೀಚಿಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ((IPL 2022) ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ಅವರನ್ನು ಅತ್ಯುತ್ತಮ ಮೊತ್ತಕ್ಕೆ ತನ್ನ ತೆಕ್ಕೆಗೆ ಎಳೆದುಕೊಂಡಿದೆ. ಅಲ್ಲದೇ ಶ್ರೇಯಸ್ ಅಯ್ಯರ್ ಅವರು ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕರೂ ಹೌದು.


ಮಹಿಳಾ ಆಟಗಾರ್ತಿಯರಲ್ಲಿ ನ್ಯೂಜಿಲೆಂಡ್ ಆಲ್‌ರೌಂಡರ್ ಅಮೆಲಿಯಾ ಕೆರ್ ಫೆಬ್ರವರಿ ತಿಂಗಳ ಐಸಿಸಿ 'ಮಹಿಳೆಯರ ತಿಂಗಳ ಆಟಗಾರ್ತಿ ಗೌರವಕ್ಕೆ ಭಾಜನರಾಗಿದ್ದಾರೆ.


ಅದ್ಭುತ ಪ್ರದರ್ಶನಕ್ಕೆ ಸಂದ ಗೌರವ!
ಕಳೆದ ತಿಂಗಳು ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಅಯ್ಯರ್ ಅವರು ತಮ್ಮ ಅದ್ಭುತ ಪ್ರದರ್ಶನ ನೀಡಿದ್ದರು. ಇದೇ ಪ್ರದರ್ಶನ ಶ್ರೇಯಸ್ ಅಯ್ಯರ್ ಅವರಿಗೆ ಈ ಗೌರವವನ್ನು ತಂದುಕೊಟ್ಟಿದೆ ಎಂದು ಹೇಳಲಾಗಿದೆ.


ಅವರು ಯುಎಇಯ ವೃತ್ಯ ಅರವಿಂದ್ ಮತ್ತು ನೇಪಾಳದ ದೀಪೇಂದ್ರ ಸಿಂಗ್ ಐರಿ ಅವರನ್ನು ಹಿಂದಿಕ್ಕಿ ಭಾರತದ ಪ್ರತಿಭಾನ್ವಿತ ಆಟಗಾರ ಶ್ರೇಯಸ್ ಅಯ್ಯರ್ ಈ ಗೌರವಕ್ಕೆ ಭಾಜನರಾಗಿದ್ದಾರೆ.



ಚುರುಕಿನ ಆಟಗಾರ
ಶ್ರೇಯಸ್ ಅಯ್ಯರ್ ಓರ್ವ ಬಲಗೈ ಆಟಗಾರ ಅಹಮದಾಬಾದ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ODI ನಲ್ಲಿ ಚುರುಕಿನ 80 ರನ್ ಗಳಿಸಿದ್ದರು.  ನಂತರದ ಮೂರು ಪಂದ್ಯಗಳ T20 ಸರಣಿಯ ಮುಕ್ತಾಯದ ಪಂದ್ಯದಲ್ಲಿ 16 ಬಾಲ್​ಗಳಲ್ಲಿ ಚುರುಕಿನ 25 ರನ್ ಗಳಿಸಿ ಮಿಂಚಿದ್ದರು.


ಶ್ರೀಲಂಕಾ ವಿರುದ್ಧದ T20 ಸರಣಿಯಲ್ಲಿ ಅವರು ಇನ್ನೂ ಉತ್ತಮ ಪ್ರದರ್ಶನ ನೀಡಿದ್ದರು. ಮೂರು ಇನ್ನಿಂಗ್ಸ್‌ಗಳಲ್ಲಿ ಔಟಾಗದೆ 204 ರನ್‌ಗಳನ್ನು 174.36 ರ ಅತ್ಯಂತ ಪ್ರಭಾವಶಾಲಿ ಸ್ಟ್ರೈಕ್ ರೇಟ್‌ ಇಟ್ಟು ಆಡಿದ್ದ ಅವರಿಗೆ ಸಹಜವಾಗಿ ಐಸಿಸಿ ಫೆಬ್ರವರಿ ತಿಂಗಳ ಆಟಗಾರ ಗೌರವ ನೀಡಿ ಅಭಿನಂದಿಸಿದೆ.


ಇದನ್ನೂ ಓದಿ: IPL ನಲ್ಲಿ ಪರ್ಪಲ್ ಕ್ಯಾಪ್ ಪಡೆದ ಏಕೈಕ ಪಾಕಿಸ್ತಾನಿ ಬೌಲರ್ ಯಾರು ಗೊತ್ತಾ? IPL ಪರ್ಪಲ್ ಕ್ಯಾಪ್ ವಿನ್ನರ್ಸ್ ಲಿಸ್ಟ್


ತಿಂಗಳುದ್ದಕ್ಕೂ ಶ್ರೇಯಸ್ ಪ್ರಚಂಡ ಸ್ಥಿರತೆ ಮತ್ತು ನಿಯಂತ್ರಣವನ್ನು ತೋರಿಸಿದರು ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮತ್ತು ಮತದಾನ ಸಮಿತಿಯ ಸದಸ್ಯ ರಸೆಲ್ ಅರ್ನಾಲ್ಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಶ್ರೇಯಸ್ ಅಯ್ಯರ್ ಸಂಪೂರ್ಣವಾಗಿ ಎದುರಾಳಿ ಬೌಲರ್‌ಗಳ ವಿರುದ್ಧ ಪ್ರಾಬಲ್ಯ ಮೆರೆದರು. ಸರಿಯಾದ ಕ್ಷಣಗಳಲ್ಲಿ ಬೌಲರ್‌ಗಳ ಮೇಲೆ ದಾಳಿ ಮಾಡಿ ರನ್ ಗಳಿಸಿದರು. ಭಾರತದ ಲೈನ್‌ಅಪ್‌ನಲ್ಲಿ ನಿಯಮಿತ ಸ್ಥಾನಕ್ಕಾಗಿ ಹೋರಾಡುತ್ತಿರುವಾಗ ಅವರ ಶಾಂತತೆ ನನಗೆ ನಿಜವಾಗಿಯೂ ಎದ್ದು ಕಾಣುತ್ತದೆ ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮತ್ತು ಮತದಾನ ಸಮಿತಿಯ ಸದಸ್ಯ ರಸೆಲ್ ಅರ್ನಾಲ್ಡ್  ಭಾರತೀಯ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: IPL 2022: ಈ ಬಾರಿ ಐಪಿಎಲ್​ ಕಣಕ್ಕಿಳಿಯಲಿರುವ ಟಾಪ್ ಹಿರಿಯ ಆಟಗಾರರು..!


ಬೆಂಗಳೂರಿನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ 92 ರನ್ ಗಳಿಸುವ ಮೂಲಕ 27 ವರ್ಷ ವಯಸ್ಸಿನ ಶ್ರೇಯಸ್ ಅಯ್ಯರ್ ಈ ತಿಂಗಳಲ್ಲೂ ತಮ್ಮ ಫಾರ್ಮ್ ಅನ್ನು  ಮತ್ತೆ ಸಾಬೀತುಪಡಿಸಿದ್ದಾರೆ.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು